Belagavi

ಬೆಳಗಾವಿ: ಶ್ರೀ ಬಸವೇಶ್ವರ ಕೋ-ಆಪರೇಟಿವ್ ಬ್ಯಾಂಕ್ ನೂತನ ಅಧ್ಯಕ್ಷರಾಗಿ ಸರಳಾ ಹೇರೇಕರ ಆಯ್ಕೆ

Share

ಬೆಳಗಾವಿಯ ಶ್ರೀ ಬಸವೇಶ್ವರ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್‌ನ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಜುಲೈ 24 ರಂದು ನಡೆದ ಚುನಾವಣೆಯಲ್ಲಿ ಖ್ಯಾತ ಸಮಾಜ ಸೇವಕಿ ಹಾಗೂ ಮಾಜಿ ನಗರ ಸೇವಕಿಯಾದ ಸರಳಾ ಶಿವಾನಂದ ಹೇರೇಕರ ಅವರು ಆಡಳಿತ ಮಂಡಳಿಯ ಉಳಿದ ಪದಾವಧಿಗೆ ನೂತನ ಅಧ್ಯಕ್ಷರಾಗಿ ಬಹುಮತದಿಂದ ಆಯ್ಕೆಯಾಗಿದ್ದಾರೆ.

ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸರಳಾ ಹೇರೇಕರ ಅವರು ಮಾತನಾಡಿ, ಬ್ಯಾಂಕಿನ ಸರ್ವತೋಮುಖ ಏಳಿಗೆಗಾಗಿ ಶ್ರಮಿಸಿ, ನಿರ್ದೇಶಕ ಮಂಡಳಿಯ ಎಲ್ಲಾ ಸದಸ್ಯರ ಸಹಕಾರದೊಂದಿಗೆ ಪಾರದರ್ಶಕ ಆಡಳಿತ ನೀಡುವುದಾಗಿ ಭರವಸೆ ನೀಡಿ, ತಮಗೆ ಬೆಂಬಲಿಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸಿದರು. ಈ ಸಂದರ್ಭದಲ್ಲಿ ಬ್ಯಾಂಕಿನ ಉಪಾಧ್ಯಕ್ಷರಾದ ಸಚಿನ್ ಶಿವಣ್ಣವರ, ನಿರ್ದೇಶಕರುಗಳಾದ ವಿಜಯಕುಮಾರ ಅಂಗಡಿ, ರಮೇಶ ಕಳಸಣ್ಣವರ, ರಮೇಶ ಸಿದ್ದಣ್ಣವರ, ಬಸವರಾಜ ಉಪ್ಪಿನ, ಗಿರೀಶ ಬಾಗಿ, ಸತೀಶ ಪಾಟೀಲ, ಬಾಲಚಂದ್ರ ಬಾಗಿ, ಜಗದೀಶ ಖಡಬಡಿ, ಪೂಜಾ ಹುಕ್ಕೇರಿ, ನಿಖಿಲ ಝೊಂಡ, ಭಾರತಿ ಕಗ್ಗಣಗಿ, ದಯಾನಂದ ಬಾಳೇಕುಂದ್ರಿ, ಸುಭಾಷ ಕತ್ತಿ, ರಾಜೀವ ಕಾಳೇನಟ್ಟಿ, ಚಂದ್ರಕಾಂತ ಕಟ್ಟಿಮನಿ, ಪ್ರಧಾನ ವ್ಯವಸ್ಥಾಪಕರಾದ ವಿ. ವಿ. ಅಂಟಿನ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Tags:

error: Content is protected !!