Belagavi

ಶಹಾಪುರದಲ್ಲಿ ಆಷಾಢ ಏಕಾದಶಿ ಸಡಗರ: ಶ್ರೀ ನಾಮದೇವ ವಿಠ್ಠಲ ಮಂದಿರದಲ್ಲಿ ಧಾರ್ಮಿಕ ವೈಭವ!

Share

ಬೆಳಗಾವಿಯ ಶಹಾಪುರದಲ್ಲಿ ಆಷಾಢ ಏಕಾದಶಿಯ ಧಾರ್ಮಿಕ ಸಂಭ್ರಮ ಕಳೆಗಟ್ಟಿದೆ. ಶಹಾಪುರದ ಪ್ರಸಿದ್ಧ ಭಕ್ತಿಮಯ ಗಲ್ಲಿಯಾದ ವಿಠ್ಠಲದೇವ ಗಲ್ಲಿಯ ಶ್ರೀ ನಾಮದೇವ ವಿಠ್ಠಲ ಹಾಗೂ ಶ್ರೀ ವಿಠ್ಠಲ ರುಕ್ಮಿಣಿ ಮಂದಿರಗಳಲ್ಲಿ ಬೆಳಗಿನ ಜಾವದಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿಭಾವದಿಂದ ಜರುಗುತ್ತಿದ್ದು, ವಿಠ್ಠಲನ ದರ್ಶನಕ್ಕೆ ಅಪಾರ ಸಂಖ್ಯೆಯ ಭಕ್ತಾದಿಗಳು ಹರಿದು ಬರುತ್ತಿದ್ದಾರೆ.

ಆಷಾಢ ಏಕಾದಶಿಯ ಪವಿತ್ರ ಸಂದರ್ಭದಲ್ಲಿ ಬೆಳಗಾವಿಯ ಶಹಾಪುರದ ನಾಮದೇವ ದೇವಕಿ ಸಂಸ್ಥೆಯ ವತಿಯಿಂದ ಶ್ರೀ ನಾಮದೇವ ವಿಠ್ಠಲ ಮಂದಿರದಲ್ಲಿ ಬೆಳಗಿನ ಜಾವ ವಿಶೇಷ ಮಹಾಪೂಜೆ ಹಾಗೂ ಅಲಂಕಾರ ಪೂಜೆ ನೆರವೇರಿಸಲಾಯಿತು. ಪೂಜಾ ವಿಧಿವಿಧಾನಗಳ ನಂತರ ಶ್ರೀ ವಿಠ್ಠಲ ಹಾಗೂ ರುಕ್ಮಿಣಿ ದೇವಿಯ ದರ್ಶನಕ್ಕಾಗಿ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದ್ದು, ಬೆಳಗಿನಿಂದಲೇ ನೂರಾರು ಭಕ್ತಾದಿಗಳು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ. ಇಡೀ ವಿಠ್ಠಲದೇವ ಗಲ್ಲಿಯಲ್ಲಿ ಭಕ್ತಿಪರವಶತೆಯ ವಾತಾವರಣ ನಿರ್ಮಾಣವಾಗಿದೆ.

ಈ ಪವಿತ್ರ ದಿನದ ಅಂಗವಾಗಿ ಶಹಾಪುರದಲ್ಲಿ ದಿನವಿಡೀ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಸಂಜೆ ವೇಳೆ ಭಜನಾ ಕಾರ್ಯಕ್ರಮಗಳ ಜೊತೆಗೆ ಶಾಲಾ ಮಕ್ಕಳಿಂದ ವೈಭವದ ‘ದಿಂಡಿ ಮೆರವಣಿಗೆ’ ನೆರವೇರಲಿದೆ. ತದನಂತರ ದೇವಾಲಯಕ್ಕೆ ಆಗಮಿಸುವ ಸಮಸ್ತ ಭಕ್ತಾದಿಗಳಿಗೆ ಮಹಾಪ್ರಸಾದ ವಿತರಣೆ ಹಾಗೂ ರಾತ್ರಿ ಮಹಾಮಂಗಲಾರತಿ ನೆರವೇರಲಿದ್ದು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪಾಂಡುರಂಗನ ಕೃಪೆಗೆ ಪಾತ್ರರಾಗಬೇಕೆಂದು ದೇವಸ್ಥಾನ ಮಂಡಳಿ ಕೋರಿದೆ.

ಇನ್ನು ಮಂದಿರದಲ್ಲಿ ಕಳೆದ ಹಲವಾರು ವರ್ಷಗಳಿಂದ ಭಕ್ತಾಧಿಗಳು ಆಗಮಿಸಿ ದೇವರ ಸೇವೆಯನ್ನು ಮಾಡಿ, ಸೇವೆಯಲ್ಲಿಯೇ ಭಗವಂತನನ್ನು ಕಾಣುತ್ತಿರುವುದಾಗಿ ಭಕ್ತಿಪರವಶತೆಯ ನುಡಿಗಳನ್ನಾಡಿದರು.

Tags:

error: Content is protected !!