Belagavi

ಬೆಳಗಾವಿ: ಸಾಮಾಜಿಕ ಕಾರ್ಯಕರ್ತ ಸಂತೋಷ್ ದರೇಕರ್ ಅವರಿಗೆ ಪ್ರತಿಷ್ಠಿತ ‘ನೇಷನ್ ಬಿಲ್ಡರ್ ಅವಾರ್ಡ್ – 2026’ ಪ್ರದಾನ

Share

ಬೆಳಗಾವಿಯ ಪ್ರಖ್ಯಾತ ಸಾಮಾಜಿಕ ಕಾರ್ಯಕರ್ತ ಹಾಗೂ ಫೇಸ್‌ಬುಕ್ ಫ್ರೆಂಡ್ಸ್ ಸರ್ಕಲ್ ಮುಖ್ಯಸ್ಥ ಸಂತೋಷ್ ದರೇಕರ್ ಅವರಿಗೆ ರೋಟರಿ ಕ್ಲಬ್ ಆಫ್ ಬೆಳಗಾವಿ ಸೌತ್ ವತಿಯಿಂದ ಪ್ರತಿಷ್ಠಿತ ‘ನೇಷನ್ ಬಿಲ್ಡರ್ ಅವಾರ್ಡ್ – 2026’ ನೀಡಿ ಗೌರವಿಸಲಾಗಿದೆ. ಉದ್ಯಮಬಾಗ್‌ನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ವಿವಿಧ ರಂಗಗಳ ಗಣ್ಯರ ಸಮ್ಮುಖದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಬೆಳಗಾವಿಯ ಉದ್ಯಮಬಾಗ್‌ನ ಮೆಜೆಸ್ಟಿಕ್ ಅವೆನ್ಯೂನಲ್ಲಿ ಜೂನ್ 27 ರಂದು ಆಯೋಜಿಸಲಾಗಿದ್ದ ಸಮಾರಂಭದಲ್ಲಿ, ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀ ಶ್ರೀನಾಥ್ ದೇಶಪಾಂಡೆ ಅವರು ಸಂತೋಷ್ ಆರ್. ದಾರೇಕರ್ ಅವರಿಗೆ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿದರು. ಶಿಕ್ಷಣ, ಕ್ರೀಡೆ, ಪರಿಸರ ಜಾಗೃತಿ, ರಕ್ತದಾನ, ವಿಪತ್ತು ನಿರ್ವಹಣೆ ಹಾಗೂ ಸಾರ್ವಜನಿಕ ಕಲ್ಯಾಣ ಕ್ಷೇತ್ರಗಳಲ್ಲಿ ಫೇಸ್‌ಬುಕ್ ಫ್ರೆಂಡ್ಸ್ ಸರ್ಕಲ್ ಮೂಲಕ ಅವರು ಸಲ್ಲಿಸಿದ ಸುದೀರ್ಘ ಸೇವೆಯನ್ನು ಗುರುತಿಸಿ ಈ ಗೌರವ ನೀಡಲಾಗಿದೆ. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸಂತೋಷ್ ದಾರೇಕರ್, ಈ ಗೌರವ ನನ್ನ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಹಂಚಿಕೊಂಡರಲ್ಲದೆ, ಪ್ರಶಸ್ತಿಯನ್ನು ತಮ್ಮ ಪೋಷಕರು, ಸ್ನೇಹಿತರು, ಸ್ವಯಂಸೇವಕರು ಹಾಗೂ ಬೆಳಗಾವಿಯ ಜನತೆಗೆ ಸಮರ್ಪಿಸಿದರು. ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಆಫ್ ಬೆಳಗಾವಿ ಸೌತ್ ಅಧ್ಯಕ್ಷ ರೊ. ಡಾ. ಗೋವಿಂದ ಮಿಸಾಳೆ, ಕಾರ್ಯದರ್ಶಿ ರೊ. ಪ್ರಣವ್ ಪಿತ್ರೆ, ವೃತ್ತಿಪರ ಸೇವಾ ನಿರ್ದೇಶಕ ಪಿಪಿ ರೊ. ಸತೀಶ್ ಕುಲಕರ್ಣಿ, ಕಾರ್ಯಕ್ರಮದ ಅಧ್ಯಕ್ಷ ರೊ. ಪ್ರವೀಣ್ ಪ್ರಭು ಸೇರಿದಂತೆ ಪ್ರಮುಖ ರೋಟರಿಯನ್ನರು, ಶಿಕ್ಷಣ ತಜ್ಞರು ಹಾಗೂ ಸಾಮಾಜಿಕ ಮುಖಂಡರು ಉಪಸ್ಥಿತರಿದ್ದರು.

Tags:

error: Content is protected !!