Belagavi

ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ‘ಕನ್ನಡ ಗೊತ್ತುವಳಿ’ ಮಂಡನೆಗೆ ಸಿದ್ಧ: ಶಾಸಕ ಆಸೀಫ್ ಸೇಠ್ ಐತಿಹಾಸಿಕ ಘೋಷಣೆ!

Share

ಮಹಾಜನ ಆಯೋಗದ ಕಾಲಕ್ಕೆ ನಮ್ಮ ತಂದೆ ನೂರುದ್ದೀನ್ ಅವರು ಬೆಳಗಾವಿ ಕರ್ನಾಟಕದಲ್ಲಿಯೇ ಉಳಿಯಬೇಕೆಂದು ನಡೆದ ಹೋರಾಟದಲ್ಲಿ ಭಾಗವಹಿಸಿದ ನಾಯಕರಲ್ಲಿ ಒಬ್ಬರಾಗಿದ್ದರು.ಹೀಗಾಗಿ ಬೆಳಗಾವಿ ಬಗ್ಗೆ ನನಗೂ ಬದ್ಧತೆಯಿದೆ” ಎಂದು ಬೆಳಗಾವಿ ಉತ್ತರ ಶಾಸಕ ಆಸೀಫ್ ಸೇಠ್ ಅವರು ಮಂಗಳವಾರ ಮುಂಜಾನೆ ಎಂದು ತಮ್ಮನ್ನು ಭೇಟಿಯಾದ ಕನ್ನಡಸಂಘಟನೆಗಳ ಮುಖಂಡರಿಗೆ ಹೇಳಿದರು.

ಬೆಳಗಾವಿ ಪಾಲಿಕೆಯಲ್ಲಿ ಕರ್ನಾಟಕ ಪರವಾದ ,ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬ ಗೊತ್ತುವಳಿಯನ್ನು ತಾವೇ ಮಂಡಿಸುವುದಾಗಿ ಸೋಮವಾರ ಸಂಜೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಸತೀಶ ಜಾರಕಿಹೊಳಿ ಅವರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಘೋಷಿಸಿದ ಹಿನ್ನೆಲೆಯಲ್ಲಿ ಅವರನ್ನು ಕನ್ನಡ ಸಂಘಟನೆಗಳ ಪರವಾಗಿ ಇಂದು ಸನ್ಮಾನಿಸಲಾಯಿತು.
ಗೊತ್ತುವಳಿ ಅಂಗೀಕರಿಸುವ ಸಲುವಾಗಿ ಶೀಘ್ರವೇಪಾಲಿಕೆಯ ಸರ್ವಸಾಧಾರಣ ಸಭೆಯನ್ನುಕರೆಯಬೇಕೆಂದು ಮಹಾಪೌರರಿಗೆ ಪತ್ರ ಬರೆಯಲಾಗುವದೆಂದು ಆಸೀಫ್ ಸೇಠ್ ಅವರು ಕನ್ನಡ ಸಂಘಟನೆಗಳಿಗೆ ಭರವಸೆ ನೀಡಿದರು. ಶಾಸಕರ ನಿಲುವನ್ನು ಸ್ವಾಗತಿಸಿರುವ ಕನ್ನಡ ಸಂಘಟನೆಗಳು ಆದಷ್ಟು ಬೇಗನೆ ಗೊತ್ತುವಳಿ ಅಂಗೀಕರಿಸುವ ಮೂಲಕ ಕನ್ನಡ ಸಂಘಟನೆಗಳು 75 ದಿನಗಳಿಂದ ನಡೆಸಿರುವ ಹೋರಾಟವು ಸುಖಾಂತ್ಯಗೊಳ್ಳಲೆಂಬ ಆಶಯವನ್ನು ವ್ಯಕ್ತಪಡಿಸಿವೆ.

Tags:

error: Content is protected !!