Belagavi

ಬೈಲಹೊಂಗಲ: ರಾಯಣ್ಣ ಆಂಗ್ಲರ ದಫ್ತರ ಸುಟ್ಟ ಐತಿಹಾಸಿಕ ಕಟ್ಟಡ ಸಂರಕ್ಷಣೆಗೆ ‘ನ್ಯಾಯವೆಂಬ ಬೆಳಕು’ ಸಂಸ್ಥೆ ಆಗ್ರಹ!

Share

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಆಂಗ್ಲರ ದಫ್ತರಗಳನ್ನು ಸುಟ್ಟುಹಾಕಿದ್ದ ಸಂಪಗಾಂವ ಗ್ರಾಮದ ಐತಿಹಾಸಿಕ ಕಛೇರಿ ಕಟ್ಟಡ ಇವತ್ತು ವಿನಾಶದ ಅಂಚಿನಲ್ಲಿದೆ. ಈ ನೈಜ ಸ್ಮಾರಕವನ್ನು ಸರ್ಕಾರ ತಕ್ಷಣವೇ ಸಂರಕ್ಷಿಸಬೇಕೆಂದು ‘ನ್ಯಾಯವೆಂಬ ಬೆಳಕು’ ಸಂಸ್ಥೆಯು ಸರ್ಕಾರದ ಬಳಿ ವಿನಂತಿಸಿಕೊಂಡಿದೆ.

ಬೆಳಗಾವಿ-ಬೈಲಹೊಂಗಲ ಮುಖ್ಯ ರಸ್ತೆಯ ಸಂಪಗಾಂವ ಗ್ರಾಮದ ಮಧ್ಯದಲ್ಲಿರುವ ಅಂದಿನ ಬ್ರಿಟಿಷರ ಮುಖ್ಯ ಕಛೇರಿ ಹಾಗೂ ಸಂಗೊಳ್ಳಿ ರಾಯಣ್ಣನನ್ನು ಬಂದಿಸಿಟ್ಟಿದ್ದ ಜೈಲಿನ ಕಟ್ಟಡವು ಸದ್ಯ ಅತ್ಯಂತ ಶಿಥಿಲಗೊಂಡು ಬೀಳುವ ಸ್ಥಿತಿಯಲ್ಲಿದೆ. ರಾಯಣ್ಣನ ಇತಿಹಾಸ ಸಾರಲು ಸಂಗೊಳ್ಳಿ ಮತ್ತು ನಂದಗಡ ಗ್ರಾಮಗಳಲ್ಲಿ ಕೃತಕ ಸ್ಮಾರಕಗಳ ನಿರ್ಮಾಣಕ್ಕೆ ಕೋಟ್ಯಂತರ ರೂಪಾಯಿ ಖರ್ಚು ಮಾಡಿದ ಸರ್ಕಾರ, ಈ ನೈಜ ಇತಿಹಾಸ ಹೊಂದಿರುವ ಕಟ್ಟಡವನ್ನು ಮರೆತುಬಿಟ್ಟಿದೆ ಎಂದು “ನ್ಯಾಯವೆಂಬ ಬೆಳಕು” ಸಂಸ್ಥೆಯ ಚೇರಮನ್ ಹಾಗೂ ನ್ಯಾಯವಾದಿ ಸುನೀಲ ಸಾಣಿಕೊಪ್ಪ ಬೇಸರ ವ್ಯಕ್ತಪಡಿಸಿದರು. ಮಕ್ಕಳಲ್ಲಿ ಸ್ವಾತಂತ್ರ್ಯದ ಕೆಚ್ಚು ಹೊತ್ತಿಸಬೇಕಿದ್ದ ಈ ಐತಿಹಾಸಿಕ ಸ್ಮಾರಕವನ್ನು ತಕ್ಷಣವೇ ಸಂರಕ್ಷಿಸಬೇಕೆಂದು ವಿನಂತಿಸಿದ ಈ ಸಂದರ್ಭದಲ್ಲಿ ಸಂಸ್ಥೆಯ ಪದಾಧಿಕಾರಿಗಳಾದ ಜಯಶಂಕರಯ್ಯಾ ಎಸ್. ಸುಂಕದಮಠ, ಸೋಮಶೇಖರ ಕತ್ತಿ, ಅಮೋಘ, ಆದರ್ಶ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Tags:

error: Content is protected !!