Belagavi

ಮಜಗಾವನ ಶಾಂತಿನಾಥ ಜೈನ ಮಂದಿರದಲ್ಲಿ ಭಗವಾನ್ ಧರ್ಮನಾಥರ ಮೋಕ್ಷ ಕಲ್ಯಾಣ ಉತ್ಸವ; ಅದ್ಧೂರಿ ಧ್ವಜಾರೋಹಣ, ವಿಶೇಷ ಪೂಜೆ…

Share

ಬೆಳಗಾವಿ ನಗರದ ಮಜಗಾವ ಗ್ರಾಮದ ಭಗವಾನ್ ಶ್ರೀ 1008 ಶಾಂತಿನಾಥ ದಿಗಂಬರ ಜೈನ ಮಂದಿರದಲ್ಲಿ ಜೈನ ಧರ್ಮದ 15 ನೆಯ ತೀರ್ಥಂಕರರಾದ ಭಗವಾನ್ ಶ್ರಿ 1008 ಧರ್ಮನಾಥ ತೀರ್ಥಂಕರರ ಮೋಕ್ಷ ಕಲ್ಯಾಣ ಕಾರ್ಯಕ್ರಮವು ಅತ್ಯಂತ ಅದ್ಧುರಿಯಾಗಿ ನಡೆಯಿತು.

ಇದರೊಂದಿಗೆ ಧ್ವಜಾರೋಹಣ ಕಾರ್ಯಕ್ರಮವೂ ನಡೆಯಿತು,ಪರಮ ಪೂಜ್ಯ 108 ಮಹಾನಸಾಗರ್ ಮುನಿಗಳು ಪೂಜೆಗೆ ಪ್ರೇರಣೆ ಮತ್ತು ಮಾರ್ಗದರ್ಶನ ನೀಡಿದರು… ಈ ಸಂದರ್ಭದಲ್ಲಿ ಭಗವಾನ್ ಶ್ರೀ 1008 ಧರ್ಮನಾಥ ಪ್ರತಿಮೆಗೇ ಅತ್ಯಂತ ಶ್ರದ್ಧಾ ಭಕ್ತಿಯಿಂದ ಜಲಾಭಿಷೇಕ, ಸುವರ್ಣ ಚಂದನದ ಗಂಧಧಭಿಷೇಕ , ಮತ್ತು ಬೆಳ್ಳಿಯ ಹೂವಿನಿಂದ ಪುಷ್ಪವೃಷ್ಟಿ ಮಾಡಲಾಯಿತು.

ಈ ಸಂದರ್ಬದಲ್ಲಿ ಎಲ್ಲಾ ಶ್ರಾವಕ, ಶ್ರಾವಕೀಯರು, ಬಿಳಿ ಬಣ್ಣದ ಮಡಿ ಬಟ್ಟೆ ಧರಿಸಿ ಪೂಜೆಯಲ್ಲಿ ಪಾಲ್ಗೊಂಡಿದ್ದರು, ಮೂರ್ತಿಗೆ ಜೈನ ಸಂಪ್ರದಾಯದ ಅನುಸಾರ ನಮೋಕಾರ ಮಹಾಮಂತ್ರದೊಂದಿಗೆ ಪೂಜಾ ಕಾರ್ಯಕ್ರಮ ಕೈಗೊಳ್ಳಲಾಯಿತು, ವರ್ಷಕ್ಕೊಮ್ಮೆ ಬರುವ ಜೈನ ಧರ್ಮದ ಇಂತಹ ಕಲ್ಯಾಣ ಉತ್ಸವದಲ್ಲಿ ಧರ್ಮ ಬಂಧುಗಳು ತಮ್ಮ ಪಾಪ ಕರ್ಮಗಳನ್ನು ಕಳೆಯಲು ಇದನ್ನು ಸದುಪಯೋಗ ಪಡೆಸಿಕೊಳ್ಳಬೇಕು.
ಪ್ರತಿನಿತ್ಯ ಮಡಿ ಬಟ್ಟೆ ಧರಿಸಿ ಜಿನಭಗವಂತರ ಪೂಜಾ ಅಭಿಷೇಕ ಮಾಡಬೇಕು… ಜೈನ ಧರ್ಮದ ಪ್ರಭಾವನೆ ಮಾಡಬೇಕು ಎಂಬ ಭಾವನೆಯಿಂದ ಜನರೆಲ್ಲರೂ ಒಂದಾಗಿ ಈ ಕಾರ್ಯಕ್ರಮ ನಡೆಸಿದ್ದೇವೆ.
ಈ ಉತ್ಸವದಲ್ಲಿ ಪರಿವಾರ ಸಮೇತ ಭಾಗವಹಿಸಿ ಎಲ್ಲಾ ಶ್ರವಕ ಶ್ರಾವಕೀಯರು ಪುಣ್ಯ ಲಾಭ ಪಡೆದುಕೊಳ್ಳಬೇಕು ಎಂದು ಪೂಜ್ಯ ಗುರುಗಳು ತಮ್ಮ ಪ್ರವಚನದಲ್ಲಿ ತಿಳಿಸಿದರು.

ಈ ಸಂಧರ್ಭದಲ್ಲಿ ಎಲ್ಲಾ ಜೈನ ಬಂಧುಗಳು ಭಕ್ತಿಯಿಂದ ಮಂದಿರದಲ್ಲಿ ನೃತ್ಯ ಮಾಡಿ ಜಿನ ಭಗವಂತರಿಗೆ ಪೂಜೆ ಸಲ್ಲಿಸಿದರು, ಆರತಿ ಬೆಳಗಿ ಸಂಭ್ರಮ ವ್ಯಕ್ತ ಪಡಿಸಿದರು.ಈ ಸಂದರ್ಭದಲ್ಲಿ, ಗುರುಗಳಿಗೆ ಪಾದಪೂಜೆ ಮತ್ತು ಶಾಸ್ತ್ರದಾನ ಕಾರ್ಯ ನಡೆಯಿತು.

ಈ ಸಂಧರ್ಭದಲ್ಲಿ ಸುಕುಮಾರ್ ಗೌರಣ್ಣ, ಧರಣೇಂದ್ರ ನರಸಗೌಡ, ಅಜಿತ್ ಪಾಟೀಲ, ಮಹೇಂದ್ರ ನರಸಗೌಡ, ಅಶೋಕ್ ಗೌರಣ್ಣಾ ,ಸಂತೋಷ್ ಗೌರನ್ನ, ಶೋಭಾ ಸುಪ್ಪನ್ನವರ್, ಭಾರತಿ ಗೌರನ್ನಾ, ಸೇರಿದಂತೆ ಮಜಗಾವಿ ಗ್ರಾಮದ ಪಂಚ್ ಕಮಿಟಿ, ಎಲ್ಲ ಯುವಕ ಮಂಡಳ ಮಹಿಳಾ ಮಂಡಳ ಹಾಗೂ ಪಾಠಶಾಲೆಯ ಬಾಲಕ ಮತ್ತು ಬಾಲಕಿಯರು ಉಪಸ್ಥಿತರಿದ್ದರು…

Tags:

error: Content is protected !!