Belagavi

ಬೆಳಗಾವಿ: ಜಾಧವ ನಗರದಲ್ಲಿ ಕಾಮಾಖ್ಯಾ ಡೈಗ್ನೋಸ್ಟಿಕ್ ಹಾಗೂ ಜೈ ಹನುಮಾನ ದೇವಸ್ಥಾನ ಕಮಿಟಿಯಿಂದ ಉಚಿತ ಬೃಹತ್ ಆರೋಗ್ಯ ತಪಾಸಣಾ ಶಿಬಿರ

Share

ಇವತ್ತು ಬೆಳಗಾವಿಯ ಜಾಧವ ನಗರದಲ್ಲಿ ಕಾಮಖ್ಯಾ ಡೈಗ್ನೋಸ್ಟಿಕ್ ಹಾಗೂ ಸಂಶೋಧನಾ ಪ್ರಯೋಗಾಲಯ ಹಾಗೂ ಜೈ ಹನುಮಾನ ದೇವಸ್ಥಾನದ ಕಮೀಟಿಯಿಂದ ಉಚಿತ ಆರೋಗ್ಯ ತಪಾಸನಾ ಶಿಭಿರ ಹಮ್ಮಿಕೊಳ್ಳಲಾಯಿತು…

ಈ ಶಿಭಿರದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡಾ.ಅವಿನಾಶ ಕವಿ ಅವರು ಈ ಉಚಿತ ಶಿಭಿರದ ಸದುಪಯೋಗ ಪಡೆದುಕೊಂಡು. ಸಾರ್ವಜನಿಕರು ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಡರಾಗಬೇಕು ಎಂದು ಕರೆ ನೀಡಿದರು…

ಇನ್ನೋರ್ವ ಅತಿಥಿಗಳಾಗಿ ಆಗಮಿಸಿದ ನಗರಸಭೆ ಸದಸ್ಯರಾದ ಶ್ರೀ ಸಂದೀಪ ಜಿರಗಾಳ ಅವರು ಆಗಮಿಸಿ ಉಚಿತ ಆರೋಗ್ಯ ಶಿಭಿರದಲ್ಲಿ ಕಾಮಖ್ಯಾ ಸಂಸ್ಥೆ ಸುಮಾರು 7 ತರಹದ ಚಿಕಿತ್ಸೆಗಳನ್ನು (ಕಿವಿ ತಪಾಸನೆ, ಕಣ್ಣು ತಪಾಸನೆ, ಉಚಿತ ಸಕ್ಕರೆ ಕಾಯಿಲೆ ತಪಾಸನೆ, ಉಚಿತ ಕೊಲೆಸ್ಟರಾಲ್‌ ತಪಾಸನೆ ಮತ್ತು ಉಚಿತ ರಕ್ತದೊತ್ತಡ ಪರೀಕ್ಷೆ, ಹಾಗೂ ಉಚಿತ BMI ಪರಿಕ್ಷೆ ನೀಡುತ್ತಿರುವುದು ಸ್ವಾಗತಾರ್ಹ ಎಂದು ಇದನ್ನು ಜಾಧವ ನಗರದ ಜನತೆ ಸದುಪಯೋಗ ಪಡೆದುಕೊಳ್ಳಲು ಸಲಹೆ ನೀಡಿದರು.


ಈ ಕಾರ್ಯಕ್ರಮದಲ್ಲಿ ಮಾಜಿ ಮಾಹಾಪೌರರಾದ ಸವಿತಾ ಕಾಂಬಳೆ ಅವರು ಉಪಸ್ಥಿತರಿದ್ದರು…
ಮತ್ತ ಕಾಮಖ್ಯಾ ಸಂಸ್ತೆಯ ನಿರ್ದೇಶಕರಾದ ಶ್ರೀ ಅನೀಲ ಪಾಟೀಲ ಸರ್ ಅವರು ಮಾತನಾಡಿ ಜನರ ಆರೋಗ್ಯದ ಮುನ್ನೆಚ್ಚರಿಕೆ ಸಲುವಾಗಿ ನಮ್ಮ ಸಂಸ್ಥೆಯು ಉಚಿತವಾಗಿ ಪ್ರತಿ ವಾರವು ಒಂದೊಂದು ವಾರ್ಡಗಳಿಗೆ ಇಂತಹ ಉಚಿತ ಆರೋಗ್ಯ ಶಿಭಿರವನ್ನು ಹಮ್ಮಿಕೊಂಡಿದ್ದು ಇದನ್ನು ಜನರೂ ಸೂಕ್ತವಾಗಿ ಉಪಯೋಗಿಸಿಕೊಂಡು ಕಾಮಾಖ್ಯ ಸಂಸ್ಥೆಗೆ ಸಹಕಾರ ನೀಡಬೇಕೆಂದು ಕರೆ ನೀಡಿದರು…

ಈ ಕಾರ್ಯಕ್ರದಲ್ಲಿ ಇನ್ನೊರ್ವ ನಿರ್ದೆಶಕರಾದ ಶ್ರೀ ಶ್ರಿಕಾಂತ ಕವಿಶ್ವರ್ ಸರ್ ಹಾಜರಿದ್ದರು.
ಮತ್ತು ಇನ್ನಳಿದಂತೆ ಜೈ ಹನುಮಾನ ದೇವಸ್ಥಾನದ ಕಮಿಟಿ ಅದ್ಯಕ್ಷರಾದ ಶ್ರೀ ಸಂಜಯ ಮಗದುಮ್ಮ ಮತ್ತು ಕಾರ್ಯದರ್ಶಿಗಳು ಹಾಜರಿದ್ದರು..
ಮತ್ತು ಇನ್ನುಳಿದಂತೆ ಕಾಮಖ್ಯಾ ಡೈಗ್ನೋಸ್ಟಿಕ್ ಹಾಗೂ ಸಂಶೋಧನಾ ಪ್ರಯೋಗಾಲಯದ CEO ರೋಹಿತ್ ಪಾಟೀಲ ಹಾಜರಿದ್ದರು
ಮತ್ತು ಶುಭಾಂಗಿ ವಿಭೂತೆ ಕಾರ್ಯಕ್ರಮವನ್ನು ನಿರೂಪಣೆ ಮಾಡಿ ವಂದಿಸಿದರು…
ಇನ್ನುಳಿದಂತೆ ಎಲ್ಲ ಜಾಧವ ನಗರದ/ ಸದಾಶಿವ ನಗರದ ನಿವಾಸಿಗಳು ಮತ್ತು ಕಾಮಾಖ್ಯ ಸಂಸ್ಥೆಯ ಸಿಬ್ಬಂದಿಯವರು ಹಾಜರಿದ್ದರು.

Tags:

error: Content is protected !!