Belagavi

ಕೇವಲ ಪೂಜೆಯಷ್ಟೇ ಜಯಂತಿಯಲ್ಲ, ಸಮಾಜ ಸೇವೆಯೇ ನಿಜವಾದ ಗೌರವ: ವಿರೇಶ್ ಹಿರೇಮಠ

Share

ಬೆಳಗಾವಿ ಮಹಾನಗರದ ಸದಾಶಿವನಗರದ ಮರಗಾಯಿ ದೇವಿ ದೇವಸ್ಥಾನದ ಆವರಣದಲ್ಲಿ ಸರ್ವಲೋಕ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ವೀರೇಶ್ ಬಸಯ್ಯ ಹಿರೇಮಠ್ ಅವರ ನೇತೃತ್ವದಲ್ಲಿ ಮಹಾರಾಣಾ ಪ್ರತಾಪ್ ಸಿಂಹ ಅವರ ಜಯಂತಿಯನ್ನು ವಿಭಿನ್ನವಾಗಿ ಆಚರಿಸಲಾಯಿತು.

ಮಹಾರಾಣಾ ಪ್ರತಾಪ್ ಸಿಂಹ ಅವರ ಜಯಂತಿಯ ಅಂಗವಾಗಿ ದೇವಸ್ಥಾನದ ಆವರಣದಲ್ಲಿದ್ದ ಹಿಂದೂ ದೇವಾನುದೇವತೆಗಳ ಹಳೆಯ ಭಾವಚಿತ್ರಗಳನ್ನು ವಿಲೇವಾರಿಗಾಗಿ ವ್ಯವಸ್ಥಿತವಾಗಿ ಸಂಗ್ರಹಿಸುವುದರ ಜೊತೆಗೆ, ಪರಿಸರ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕೇವಲ ಭಾವಚಿತ್ರಗಳಿಗೆ ಪೂಜೆ ಸಲ್ಲಿಸುವುದಷ್ಟೇ ಜಯಂತಿಯಲ್ಲ, ಸಮಾಜ ಮತ್ತು ದೇಶದ ಸೇವೆಗೆ ಕೈಜೋಡಿಸುವುದೇ ನಿಜವಾದ ಗೌರವ ಎಂದು ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ವೀರೇಶ್ ಹಿರೇಮಠ್ ಕರೆ ನೀಡಿದರು.

ಸರ್ವಲೋಕ ಸೇವಾ ಫೌಂಡೇಶನ್ ಸಂಸ್ಥಾಪಕ ವೀರೇಶ್ ಹಿರೇಮಠ್ ಅವರಿಗೆ ಇನ್ನೋವೇಟಿವ್ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಸ್ಥಳೀಯ ಮಿತ್ರರಾದ ಕಾಂಬಳೆ ಅವರು ಸಾಥ್ ನೀಡಿದರು. ಹಳೆಯ ಭಾವಚಿತ್ರಗಳನ್ನು ವ್ಯವಸ್ಥಿತವಾಗಿ ಸಂಗ್ರಹಿಸುವ ಮತ್ತು ಪರಿಸರವನ್ನು ಶುಚಿಗೊಳಿಸುವ ಕಾಯಕವನ್ನು ನಡೆಸಲಾಗುತ್ತಿದೆ. ದೇಶಕ್ಕಾಗಿ ಮತ್ತು ಧರ್ಮಕ್ಕಾಗಿ ಮಹಾರಾಣಾ ಪ್ರತಾಪ ಸಿಂಹ ಅವರು ಹಾಕಿಕೊಟ್ಟ ದಾರಿಯಲ್ಲೇ ನಾವೆಲ್ಲರೂ ಮುನ್ನಡೆದು, ಸಮಾಜ ಸೇವೆಗೆ ನಮ್ಮನ್ನು ಸಮರ್ಪಿಸಿಕೊಳ್ಳಬೇಕೆಂದು ಈ ಸಂದರ್ಭದಲ್ಲಿ ಕರೆ ನೀಡಲಾಯಿತು.

ಈ ಕಾರ್ಯಕ್ರಮದಲ್ಲಿ ಇನ್ನೋವೇಟಿವ್ ಪ್ರಿಂಟಿಂಗ್ ಪ್ರೆಸ್‌ನ ರವಿಕಿರಣ್ ಹೆಕ್ಕೇರಿ, ಸಂತೋಷ್ ದೇಶನೂರಣ್ಣ, ದೇವಪ್ಪ ಕಾಂಬ್ಳೆ ಹಾಗೂ ರೇವಣಸಿದ್ದೇಶ್ವರ ಮಠದ ಗುರುಗಳು ಈ ಕಾರ್ಯಕ್ರಮದಲ್ಲಿ ನೀಲಕಂಠಯ್ಯ ಆರ್ ಹಿರೇಮಠ್, ವೀರೇಶ್ ಬಸಯ್ಯ ಹಿರೇಮಠ್, ಸಂತೋಷ್ ದೇಶ್ನೂರ್, ದೇವಪ್ಪ ಕಾಂಬಳೆ, ರವಿಕಿರಣ್ ಹೆಗ್ಗೇರಿ, ಗೌರೀಶ್ ಹಿರೇಮಠ್ ಮತ್ತು ಇತರರು ಭಾಗವಹಿಸಿದ್ದರು

Tags:

error: Content is protected !!