BELAGAVI

ಬೆಳಗಾವಿ: ವೃದ್ಧ ದಂಪತಿಯ ಕಣ್ಣೀರ ಬದುಕಿಗೆ ಆಸರೆಯಾದ ಫೇಸ್‌ಬುಕ್ ಫ್ರೆಂಡ್ಸ್ ಸರ್ಕಲ್!

Share

ಕತ್ತಲಾವರಿಸಿದ್ದ ವೃದ್ಧ ದಂಪತಿಯ ಬದುಕಿನಲ್ಲಿ ಮಾನವೀಯತೆಯ ಹಣತೆಯೊಂದು ಬೆಳಗಿದೆ. ಮಗನನ್ನು ಕಳೆದುಕೊಂಡು, ಪಾರ್ಶ್ವವಾಯು ಪೀಡಿತ ಪತಿಯೊಂದಿಗೆ ಬಾಡಿಗೆ ಮನೆಯಲ್ಲಿ ಕಣ್ಣೀರಿನ ದಿನ ದೂಡುತ್ತಿದ್ದ ವೃದ್ಧೆಗೆ ಬೆಳಗಾವಿಯ ಫೇಸ್‌ಬುಕ್ ಫ್ರೆಂಡ್ಸ್ ಸರ್ಕಲ್ ತಂಡವು ತುರ್ತು ನೆರವು ನೀಡುವ ಮೂಲಕ ಮರುಜೀವ ನೀಡಿದೆ.

ಬೆಳಗಾವಿಯ ಶಹಾಪುರದ ಜೇಡ ಗಲ್ಲಿಯ ಸಣ್ಣ ಬಾಡಿಗೆ ಮನೆಯಲ್ಲಿ ವಾಸವಿರುವ ಅಂಜನಾ ಸಾವಂತ್ (68) ಹಾಗೂ ಪಾರ್ಶ್ವವಾಯುವಿನಿಂದ ಹಾಸಿಗೆ ಹಿಡಿದಿರುವ ರಾಮಚಂದ್ರ ಸಾವಂತ್ (72) ದಂಪತಿ ಆರ್ಥಿಕ ಸಂಕಷ್ಟ, ಅನಾರೋಗ್ಯ ಹಾಗೂ ಒಂಟಿತನದಿಂದ ನರಳುತ್ತಿದ್ದರು. ಆಸರೆಯಾಗಬೇಕಿದ್ದ ಏಕೈಕ ಮಗ ಅನಾರೋಗ್ಯದಿಂದ ಮೃತಪಟ್ಟಿದ್ದು, ವೃದ್ಧಾಪ್ಯ ವೇತನವೂ ಸ್ಥಗಿತಗೊಂಡು ದಂಪತಿಗಳು ಊಟ-ಔಷಧಿಗೂ ಪರದಾಡುವಂತಾಗಿತ್ತು. ಈ ಕರುಣಾಜನಕ ಪರಿಸ್ಥಿತಿಯನ್ನು ಅರಿತ ಬೆಳಗಾವಿ ಫೇಸ್‌ಬುಕ್ ಫ್ರೆಂಡ್ಸ್ ಸರ್ಕಲ್ ಮುಖ್ಯಸ್ಥ ಸಂತೋಷ್ ಆರ್. ದರೇಕರ್ ಹಾಗೂ ಆರತಿ ಸುಭೇದಾರ್ ಅವರು ತಕ್ಷಣವೇ ಸ್ಪಂದಿಸಿ, ವೃದ್ಧ ದಂಪತಿಯ ಮನೆಗೆ ಭೇಟಿ ನೀಡಿ ಅಗತ್ಯ ದಿನಸಿ ಸಾಮಗ್ರಿ ಹಾಗೂ ವೈದ್ಯಕೀಯ ನೆರವು ನೀಡಿದ್ದಾರೆ. ಸಂಕಷ್ಟದ ಸಮಯದಲ್ಲಿ ದೇವದೂತರಂತೆ ಧಾವಿಸಿದ ತಂಡದ ಈ ಮಾನವೀಯ ಕಾರ್ಯಕ್ಕೆ ಬೆಳಗಾವಿ ಜನತೆಯಿಂದ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.

Tags:

error: Content is protected !!