ಆರೋಗ್ಯ ಸಮಸ್ಯೆಯಿರುವ ಅಂಗನವಾಡಿ ಶಿಕ್ಷಕಿಯರು ಮತ್ತು ಕಾರ್ಯಕರ್ತರಿಗೆ ಬಿ.ಎಲ್.ಓ ಕೆಲಸದಿಂದ ವಿನಾಯಿತಿ ಕೊಡಬೇಕೆಂದು ಆಗ್ರಹಿಸಿ ಇಂದು ಸಿಐಟಿಯೂ ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಬೆಳಗಾವಿ ತಹಶೀಲ್ದಾರರಿಗೆ ಮನವಿಯನ್ನು ಸಲ್ಲಿಸಿದರು.

ಇಂದು ಸಿಐಟಿಯೂ ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಬಿ.ಎಲ್.ಓ ಕೆಲಸದಿಂದ ವಿನಾಯಿತಿ ಕೊಡಬೇಕೆಂದು ಆಗ್ರಹಿಸಿ ಬೆಳಗಾವಿ ತಹಶೀಲ್ದಾರರಿಗೆ ಮನವಿಯನ್ನು ಸಲ್ಲಿಸಿದರು.

ಬಿ.ಎಲ್.ಓ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತೇವೆ. ಕರ್ತವ್ಯ ನಿರ್ವಹಣೆಯ ವೇಳೆ ಚರಂಡಿಯಲ್ಲಿ ಕಾಲು ಜರಿದು ಬಿದ್ದು, ಗಂಭೀರ ಗಾಯಗೊಂಡಿದೆ. ಶಸ್ತ್ರಕ್ರಿಯೆ ನಡೆಸಲಾಗಿದ್ದು, ಕಳೆದ 3 ವರ್ಷಗಳಿಂದ ಯಾವುದೇ ಕರುಣೆ ತೋರದೇ, ಮತ್ತೇ ಚುನಾವಣಾ ಕರ್ತವ್ಯದ ಜವಾಬ್ದಾರಿಯನ್ನು ವಹಿಸಲಾಗುತ್ತಿದೆ. ಈಗ ಮತ್ತೇ ಪೆಟ್ಟು ಬಿದ್ದು ಗಾಯ ತೀವ್ರಗೊಂಡಿದೆ. ಆದ್ದರಿಂದ ನಮ್ಮ ಮೇಲಿನ ಬಿ.ಎಲ್.ಓ ಜವಾಬ್ದಾರಿಯನ್ನು ಹಿಂಪಡೆಯಬೇಕೆಂದು ಸುವರ್ಣ ಸುರೇಶ್ ಪಿಟಗಿ ಮನವಿಯನ್ನು ಮಾಡಿಕೊಂಡಿದ್ದಾರೆ.
ಈಗಾಗಲೇ ಹಲವಾರು ಬಾರಿ ತಹಶೀಲ್ದಾರರು ಮತ್ತು ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿ, ಆರೋಗ್ಯ ಸಮಸ್ಯೆಯಿರುವವರನ್ನು ಜವಾಬ್ದಾರಿಯಿಂದ ಹೊರಗಿಡಬೇಕೆಂದು ಕೋರಲಾಗಿದೆ. ಆದರೂ ಕೂಡ ಚುನಾವಣಾ ಕೆಲಸ ಕಾರ್ಯಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಈ ಎಲ್ಲ ಕೆಲಸಗಳಿಂದ ಅಂಗನವಾಡಿಗೆ ಮಕ್ಕಳು ಬರುತ್ತಿಲ್ಲ. ಬಿ.ಎಲ್.ಓ ಕೆಲಸ ಮಾಡದಿದ್ದರೇ, ಕೆಲಸ ಕಳೆದುಕೊಳ್ಳುವ ಬೆದರಿಕೆಯನ್ನು ಹಾಕಲಾಗುತ್ತಿದೆ. ಕಾಯಿಲೆಯಿರುವವರನ್ನು ಕೈಬಿಟ್ಟು ಪ್ರಾಥಮಿಕ ಶಾಲಾ ಶಿಕ್ಷಕರನ್ನು ಚುನಾವಣಾ ಕೆಲಸಗಳಿಗೆ ಬಳಸಿಕೊಳ್ಳಬೇಕೆಂದು ಮಂದಾ ನೇವಗಿ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ಧರು.
