• ಬೆಳಗಾವಿ ನಾಮಫಲಕ ವಿವಾದಕ್ಕೆ ಎಂಇಎಸ್ ಗಡುವು
• ಜೂನ್ 22ರೊಳಗೆ 60-40 ನಿಯಮ ಜಾರಿಗೆ ಆಗ್ರಹ
• ನಿಯಮ ಉಲ್ಲಂಘಿಸಿದರೆ ಉಗ್ರ ಪ್ರತಿಭಟನೆಯ ಎಚ್ಚರಿಕೆ
• ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಎಂಇಎಸ್ ಮುಖಂಡರು

ಗಡಿವಿವಾದ ಸುಪ್ರೀಂಕೋರ್ಟಿನಲ್ಲಿರುವಾಗ ಬೆಳಗಾವಿಯಲ್ಲಿನ ಫಲಕಗಳಿಗೆ ಜೂನ್ 22 ರೊಳಗೆ ಕನ್ನಡದೊಂದಿಗೆ ಮರಾಠಿ, ಆಂಗ್ಲ ಭಾಷೆಗೆ ಸರ್ಕಾರವೇ ಹೇಳಿದಂತೆ ಶೇ.60 ಮತ್ತು 40 ನಿಯಮವನ್ನು ಜಾರಿಗೊಳಿಸಬೇಕು ಇಲ್ಲದಿದ್ದರೇ, ಉಗ್ರ ಹೋರಾಟವನ್ನು ಮಾಡಲಾಗುವುದೆಂದು ಮಹಾರಾಷ್ಟ್ರ ಏಕೀಕರಣ ಸಮಿತಿಯೂ ಗಡುವನ್ನು ನೀಡಿದೆ.

ಶೇ.60 ರಷ್ಟು ಕನ್ನಡ ಭಾಷೆ ಮತ್ತು 40 ರಷ್ಟು ಅನ್ಯ ಭಾಷೆ ನಿಯಮ ಉಲ್ಲಂಘಿಸಿ ಬೆಳಗಾವಿಯಲ್ಲಿ ಶೇ. 100 ರಷ್ಟು ಕನ್ನಡ ಭಾಷೆಯನ್ನೇ ಕಡ್ಡಾಯಗೊಳಿಸಲಾಗುತ್ತಿದ್ದು, ಸರ್ಕಾರವೇ ಹೇಳಿದಂತೆ 60-40 ನೀತಿಯನ್ನು ಜೂನ್ 22ರೊಳಗಾಗಿ ಜಾರಿಗೆ ತರಬೇಕು ಇಲ್ಲದಿದ್ದರೇ, ಜೂನ್ 22 ರಂದು ಮರಾಠಿ ಭಾಷಿಕರು ಮಹಾರಾಷ್ಟ್ರ ಏಕೀಕರಣ ಸಮಿತಿಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಿದ್ದು, ಈ ಕುರಿತು ಅನುಮತಿ ಕೋರಿ ಇಂದು ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಮಹಾರಾಷ್ಟ್ರ ಏಕೀಕರಣ ಸಮಿತಿಯ ಅಧ್ಯಕ್ಷರಾದ ಪ್ರಕಾಶ್ ಮರಗಾಳೆ ಅವರು 1990ರ ಮೊದಲಿನಿಂದಲೂ ಬೆಳಗಾವಿಯ ಸರ್ಕಾರಿ ಮತ್ತು ಖಾಸಗಿ ಕಾರ್ಯಾಲಯಗಳ ಫಲಕಗಳಲ್ಲಿ ಕನ್ನಡದೊಂದಿಗೆ ಮರಾಠಿ, ಆಂಗ್ಲ ಭಾಷೆಗಳಿಗೂ ಆದ್ಯತೆ ನೀಡಲಾಗಿತ್ತು. ಈಗಲೂ ಕೂಡ ಗಡಿವಿವಾದದ ಅಂತಿಮ ನಿರ್ಣಯ ಪಾಸ್ ಆಗುವವರೆಗೂ ಅದೇ ನೀತಿಯನ್ನು ಮುಂದುವರೆಸಬೇಕು. ಪ್ರತಿಭಟನೆ ಬಿಟ್ಟು ಚರ್ಚೆ ಬನ್ನಿ ಎಂದಾಗ 9 ತಿಂಗಳ ಹಿಂದೆ ಚರ್ಚೆ ನಡೆಸಿದ ಬಳಿಕ ಬೆಳಗಾವಿ ಜಿಲ್ಲಾಧಿಕಾರಿಗಳು ನೀಡಿದ ಆಶ್ವಾಸನೆಯನ್ನು ಪೂರ್ಣಗೊಳಿಸಿಲ್ಲ. ಈಗ ಜೂನ್ 22 ರ ವರೆಗೆ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೇ, ಉಗ್ರ ಪ್ರತಿಭಟನೆಯ ಎಚ್ಚರಿಕೆಯನ್ನು ನೀಡಿದರು.
ಮಧ್ಯವರ್ತಿ ಮಹಾರಾಷ್ಟ್ರ ಏಕೀಕರಣ ಸಮಿತಿಯ ಕಾರ್ಯದರ್ಶಿಗಳಾದ ಮಾಜಿ ಶಾಸಕ ಮನೋಹರ್ ಕಿಣೇಕರ್ ಅವರು 1990 ರ ಮೊದಲಿನಿಂದ ಬೆಳಗಾವಿಯ ಎಲ್ಲ ಸರ್ಕಾರಿ ಖಾಸಗಿ ಕಾರ್ಯಾಲಯಗಳ ಮೇಲೆ ಕನ್ನಡ, ಮರಾಠಿ ಮತ್ತು ಆಂಗ್ಲ ಭಾಷೆಗಳಲ್ಲಿ ಫಲಕಗಳಿದ್ದವು. ಆದರೇ, ಈಗ ಕೆಲ ಸಂಘಟನೆಗಳು ಮತ್ತು ಅಧಿಕಾರಿಗಳು ಒತ್ತಾಯ ಪೂರ್ವಕವಾಗಿ ಅವುಗಳನ್ನು ತೆರವುಗೊಳಿಸುತ್ತಿದ್ದಾರೆ. ಸುಪ್ರೀಂಕೋರ್ಟಿನಲ್ಲಿ ಗಡಿವಿವಾದ ಬಾಕಿಯಿರುವಾಗ ಈ ರೀತಿಯ ಕಡ್ಡಾಯ ಕಾನೂನು ಜಾರಿ ಮಾಡುವುದು ಕಾನೂನಿನ ವಿರೋಧವಾಗಿದೆ. ಜೂನ್ 22 ರೊಳಗೆ ಕಾನೂನು ಜಾರಿಯಾಗದಿದ್ದರೇ, ಉಗ್ರ ಪ್ರತಿಭಟನೆಯನ್ನು ನಡೆಸಲಾಗುವುದು ಎಂದರು.
ಮಾಜಿ ಮಹಾಪೌರರಾದ ರೇಣು ಕಿಲ್ಲೇಕರ ಅವರು ಕಳೆದ ಹಲವು ಬಾರಿ ಮಹಾನಗರ ಪಾಲಿಕೆಯಲ್ಲಿ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ , ಗಡಿವಿವಾದದಲ್ಲಿ ಮಹಾಜನ್ ವರದಿ ಅಂತಿಮ ಎಂಬ ಠರಾವು ಪಾಸ್ ಮಾಡಲು ಪ್ರಯತ್ನಿಸಲಾಗಿದೆ. ಸದ್ಯ ಗಡಿ ವಿವಾದದ ಪ್ರಕರಣ ವಿಚಾರಣೆಗೆ ಸುಪ್ರೀಂಕೋರ್ಟಿನಲ್ಲಿ ಬಾಕಿಯಿದೆ. ಈ ಹಿನ್ನೆಲೆ ಮಹಾನಗರ ಪಾಲಿಕೆಯಲ್ಲಿ ಠರಾವು ಪಾಸ್ ಮಾಡುವುದು ಸರಿಯಲ್ಲ. ಮಹಾನಗರ ಪಾಲಿಕೆಯಲ್ಲಿನ ಮರಾಠಿ ನಗರಸೇವಕರು ಮರಾಠಿ ಭಾಷಿಕರ ಪಕ್ಷವನ್ನು ಸಮರ್ಥವಾಗಿ ಮಂಡಿಸುವ ವಿಶ್ವಾಸವಿದ್ದು, ನ್ಯಾಯಾಲಯದಲ್ಲಿರುವ ಪ್ರಕರಣವನ್ನು ಕಾನೂನು ಹೋರಾಟದ ಮೂಲಕವೇ ಇತ್ಯರ್ಥ್ಯಗೊಳಿಸಬೇಕು ಎಂದರು.
ಇನ್ನು ಮಹಾರಾಷ್ಟ್ರ ಏಕೀಕರಣ ಸಮಿತಿಯ ಯುವಾ ನಾಯಕ ಶುಭಂ ಶೇಳಕೆ ಅವರು ಮಹಾನಗರ ಪಾಲಿಕೆಯಲ್ಲಿ ಬಾಲಿಷ ಕೃತ್ಯಗಳಿಂದ ಬೆಳಗಾವಿಯಲ್ಲಿ ಯಾವುದೇ ವ್ಯತ್ಯಾಸವಾಗಲ್ಲ. ಮರಾಠಿ ಭಾಷಿಕರು ಗಡಿವಿವಾದದ ಪರವಾಗಿ ಠರಾವು ಪಾಸ್ ಮಾಡಿದಾಗ ಸುಪ್ರೀಂ ಕೋರ್ಟಿನಲ್ಲಿ ಗಡಿವಿವಾದವಿದೆ ಎಂದು ಹೇಳಿ ಸೂಪರ್’ಸೀಡ್ ಮಾಡುವುದಾದರೇ, ಮರಾಠಿ ಭಾಷಿಕರ ವಿರೋಧದಲ್ಲಿ ಠರಾವ್ ಪಾಸ್ ಮಾಡಿದಾಗ ಮಹಾಪಾಲಿಕೆ ನೀವು ಸೂಪರ್ ಸೀಡ್ ಮಾಡಬಹುದಲ್ಲವೇ? ಎಂದು ಪ್ರಶ್ನಿಸಿದರು. ಸಂಪೂರ್ಣ ಕರ್ನಾಟಕದಲ್ಲಿ ಕನ್ನಡ ಕಡ್ಡಾಯಕ್ಕೆ ಅಸಮಾಧಾನವಿದೆ. ಬೆಂಗಳೂರಿನಲ್ಲಿ ತಮಿಳು ಭಾಷಿಕರಿಂದಲೂ ವಿರೋಧ ವ್ಯಕ್ತವಾಗಿದೆ. ಸ್ವತಂತ್ಯ ತುಳು ನಾಡಿನ ಹೋರಾಟ ಆರಂಭಗೊಂಡಿದೆ. ಇದನ್ನು ಕರ್ನಾಟಕ ಸರ್ಕಾರ ಮನವರಿಕೆ ಮಾಡಿಕೊಳ್ಳಬೇಕು. ಇತರ ಭಾಷೆ ಬೆಳೆಸುವುದರೊಂದಿಗೆ ತಮ್ಮ ಭಾಷೆಯನ್ನು ಸಮೃದ್ಧಗೊಳಿಸಬೇಕು. ಬೆಳಗಾವಿ ಮಹಾನಗರ ಪಾಲಿಕೆಯಲ್ಲಿನ ಮರಾಠಿ ಭಾಷಿಕ ಸದಸ್ಯರು ಪಕ್ಷಬೇಧ ಮರೆತು ಮಾತೃಭಾಷೆಗಾಗಿ ಒಗ್ಗೂಡಿ ಹೋರಾಡಬೇಕೆಂದರು. ಬೈಟ್
ಈ ಸಂದರ್ಭದಲ್ಲಿ ಮಾಜಿ ಮಹಾಪೌರರಾದ ಸರೀತಾ ಪಾಟೀಲ್, ದಿಗಂಬರ್ ಪಾಟೀಲ್, ಮಾಲೋಜಿರಾವ್ ಅಷ್ಟೇಕರ, ಅಡ್ವೋಕೇಟ್ ಅಮರ್ ಯಳ್ಳೂರಕರ ಸೇರಿದಂತೆ ಮರಾಠಿ ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ಧರು.
