Belagavi

ಬೆಳಗಾವಿ: ಕೇಂದ್ರ ಸಹಕಾರ ಸಚಿವಾಲಯದ 5ನೇ ವರ್ಷದ ಸಂಭ್ರಮ; ಶ್ರೀ ಬಸವೇಶ್ವರ ಬ್ಯಾಂಕ್‌ನಿಂದ ಅದ್ಧೂರಿ “ಸಸಿ ನೆಡುವ ಕಾರ್ಯಕ್ರಮ”

Share

ಕೇಂದ್ರ ಸಹಕಾರ ಸಚಿವಾಲಯವು ಐದು ವರ್ಷ ಪೂರೈಸಿದ ಸಂದರ್ಭದಲ್ಲಿ “ಸಹಕಾರ ಸಪ್ತಾಹ” ಅಂಗವಾಗಿ ಕರ್ನಾಟಕ ಸಹಕಾರ ಇಲಾಖೆ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ.. ಬೆಂಗಳೂರು ಹಾಗೂ ಬೆಳಗಾವಿ ಜಿಲ್ಲಾ ಸಹಕಾರ ಯೂನಿಯನ್ ನಿ. ಬೆಳಗಾವಿ ಇವರ ಸಂಯುಕ್ತಾಶ್ರಯದಲ್ಲಿ ಬೆಳಗಾವಿ ಶ್ರೀ ಬಸವೇಶ್ವರ ಕೋ-ಆಪರೇಟಿವ್ ಬ್ಯಾಂಕ್ ಲಿ.. ಬ್ಯಾಂಕಿನ ವತಿಯಿಂದ “ಸಸಿ ನೆಡುವ ಕಾರ್ಯಕ್ರಮ”ಕಾರ್ಯಕ್ರಮವನ್ನು ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲೆ ನಂ.7, ಫುಲಬಾಗ್ ಗಲ್ಲಿ, ಬೆಳಗಾವಿಯಲ್ಲಿ ಯಶಸ್ವಿಯಾಗಿ ಆಯೋಜಿಸಲಾಯಿತು.

ಈ ಕಾರ್ಯಕ್ರಮಕ್ಕೆ ಸಹಕಾರ ಇಲಾಖೆ ಸಹಕಾರ ಸಂಘಗಳ ಸಹಾಯಕ ನಿಬಂಧಕ ಕಚೇರಿಯ ಅಧಿಕಾರಿಗಳಾದ ಸರೋಜಾ ಪರೇಟ್ ರವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಈ ಸಂದರ್ಭದಲ್ಲಿ ಅವರು ಮಾತನಾಡಿ ಈ ಕಾರ್ಯಕ್ರಮವನ್ನು ಆಯೋಜಿಸಿರುವುದು ತುಂಬಾ ಸಂತೋಷ ತಂದಿರುವುದಾಗಿ ತಿಳಿಸಿದರು. ಬ್ಯಾಂಕಿನ ಅಧ್ಯಕ್ಷರಾದ ರಮೇಶ ಕಳಸಣ್ಣವರ ಅವರು ಮಾತನಾಡಿ, ಮರಗಳು ಮಾನವ ಜೀವನಕ್ಕೆ ಅತ್ಯಂತ ಅಗತ್ಯ ಹಾಗೂ ಮಹತ್ವಪೂರ್ಣ ಎಂದು ತಿಳಿಸಿದರು. ಗಿಡ-ಮರಗಳು ಮಾನವನ ಜೀವನಾಡಿಯಾಗಿದ್ದು, ಹಸಿರು ಪರಿಸರ ರಕ್ಷಣೆ ಮತ್ತು ಭವಿಷ್ಯದ ಪೀಳಿಗೆಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮರಗಳನ್ನು ನೆಡಬೇಕೆಂದು ಅವರು ಎಲ್ಲರಿಗೂ ಆಗ್ರಹಿಸಿ ಕರೆ ನೀಡಿದರು.

ಈ ಶುಭ ಕಾರ್ಯಕ್ರಮದಲ್ಲಿ ಬ್ಯಾಂಕಿನ ನಿರ್ದೇಶಕರುಗಳಾದ ಬಿ.ಎ.ಉಪ್ಪಿನ, ಎಸ್.ಎಸ್.ಹಿರೇಕರ, ಎಸ್.ಕೆ.ಪಾಟೀಲ, ಬಿ.ಪಿ.ಬಾಗಿ, ಪಿ.ಎ.ಹುಕ್ಕೇರಿ, ಎನ್.ಡಿ.ಝೋಂಡ, ಆರ್.ಬಿ.ಕಾಳೇನಟ್ಟಿ, ಜಿ.ಎಸ್.ಖಡಬಡಿ, ವ್ಯವಸ್ಥಾಪನಾ ಮಂಡಳಿ ಸದಸ್ಯರುಗಳಾದ ಆರ್.ಎಸ್.ಚೊಣ್ಣದ ಮತ್ತು ಎಮ್.ಎಮ್.ಉಡದಾರ ಅವರು, ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ, ವಿದ್ಯಾರ್ಥಿಗಳು ಮತ್ತು ಬ್ಯಾಂಕಿನ ಸಿಬ್ಬಂದಿ ವರ್ಗದ ಸಹಾಯೋಗದೊಂದಿಗೆ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಿತು.

Tags:

error: Content is protected !!