BELAGAVI

ಬೆಳಗಾವಿಯಲ್ಲಿ ಜೂನ್ ವರೆಗೂ ನೀರಿಗೆ ಬರ ಇಲ್ಲ: ಆತಂಕ ಬೇಡ ಎಂದ ಪಾಲಿಕೆ ಆಯುಕ್ತ ಕಾರ್ತಿಕ್ ಎಂ.

Share

ಬಿರು ಬೇಸಿಗೆಯಲ್ಲಿ ಈಗಲೇ ನೀರಿನ ಅಭಾವದಿಂದ ಬಳಲುತ್ತಿರುವ ಬೆಳಗಾವಿ ನಗರದ ಜನತೆಗೆ ಮತ್ತಷ್ಟು ಆತಂಕ ಕಾದಿದೆ. ಬಿಸಿಲಿನ ತೀವ್ರತೆ ಇದೇ ರೀತಿ ಮುಂದುವರಿದರೆ ರಕ್ಕಸಕೊಪ್ಪ ಜಲಾಶಯದ ನೀರಿನ ಮಟ್ಟ ಮತ್ತಷ್ಟು ಕುಸಿಯಲಿದೆ.

ಹೌದು.ಬೆಳಗಾವಿ ನಗರದಲ್ಲಿ ಒಟ್ಟು 73 ಸಾವಿರ ನಳ ಸಂಪರ್ಕವಿದ್ದು, ಪ್ರತಿ ದಿನ ಸುಮಾರು 135 ಎಂಎಲ್‌ಡಿ ನೀರಿನ ಅಗತ್ಯವಿದೆ. ಇದರಲ್ಲಿಹಿಡಕಲ್‌ ಡ್ಯಾಂನಿಂದ ಪ್ರತಿ ದಿನ 82 ಎಂಎಲ್‌ಡಿ ಮತ್ತು ರಕ್ಕಸಕೊಪ್ಪ ಜಲಾಶಯದಿಂದ ಸುಮಾರು 53 ಎಂಎಲ್‌ಡಿ ನೀರು ಪೂರೈಕೆಯಾಗಬೇಕು. ಆದರೆ ರಕ್ಕಸಕೊಪ್ಪ ಜಲಾಶಯದ ಮಟ್ಟ ಈಗಾಗಲೇ 5 ಅಡಿ ಕಡಿಮೆಯಾಗಿದೆ. ಕಳೆದ ಬಾರಿ ಏಪ್ರಿಲ್‌ ಅಂತ್ಯಕ್ಕೆ ಜಲಾಶಯದ ನೀರಿನ ಮಟ್ಟ 2461 ಅಡಿ ಇತ್ತು. ಈ ಬಾರಿ 247-3 ಅಡಿಗೆ ಇಳಿದಿದೆ.

ಪ್ರಸಕ್ತ ಬೇಸಿಗೆಯಲ್ಲಿಬಿಸಿಲಿನ ಪ್ರಖರತೆಯೂ ಹೆಚ್ಚಾಗಿದೆ. ಬಿಸಿಲ ಝಳಕ್ಕೆ ನೀರು ಆವಿಯಾಗುವ ಪ್ರಮಾಣವೂ ನಿರೀಕ್ಷೆಗಿಂತ ಹೆಚ್ಚಾಗಿದೆ. ಹಾಗಾಗಿ ಜಲಾಶಯದಲ್ಲಿನೀರಿನ ಪ್ರಮಾಣ ತೀವ್ರವಾಗಿ ಕಡಿಮೆಯಾಗುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.
ಇನ್ನೂ ಪಾಲಿಕೆ ಆಯುಕ್ತ ಕಾರ್ತಿಕ್  ಮಾತನಾಡಿ, ಜೂನ್ ವರೆಗೆ ಬೆಳಗಾವಿ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗುವುದಿಲ್ಲ. ಈಗಾಗಲೇ ನಗರದಲ್ಲಿ ನೀರಿನ ಟ್ಯಾಂಕರ್ ಲಭ್ಯವಿದೆ. ನಗರದ ನಾಲ್ಕು ಕಡೆಗಳಲ್ಲಿ ನೀರಿನ ಪಾಯಿಂಟ್ ಗುರುತಿಸಲಾಗಿದೆ ಎಂದರು.

Tags:

error: Content is protected !!