BELAGAVI

ಮರಾಠಾ ಲೈಟ್ ಇನ್‌ಫೆಂಟ್ರಿ ರೆಜಿಮೆಂಟಲ್ ಸೆಂಟರ್‌ನ ಏಳನೇ ಅಗ್ನಿವೀರ್ ತಂಡದ ನಿರ್ಗಮನ ಪಥ ಸಂಚಲನ

Share

ಅಗ್ನಿಪಥ ಯೋಜನೆ’ಯಡಿಯಲ್ಲಿ ಬೆಳಗಾವಿಯ ಮರಾಠಾ ಲೈಟ್ ಇನ್‌ಫೆಂಟ್ರಿ ರೆಜಿಮೆಂಟಲ್ ಕೇಂದ್ರ MLIRCಯಲ್ಲಿ ಕಳೆದ 24 ವಾರಗಳಿಂದ ಸೈನಿಕ ತರಬೇತಿ ಪಡೆದ 7 ತಂಡದ 765 ಅಗ್ನಿವೀರ ಪ್ರಶಿಕ್ಷಣಾರ್ಥಿಗಳ ಆಕರ್ಷಕ ನಿರ್ಗಮನ ಪಥ ಸಂಚನ ಇಂದು ಜರುಗಿತು.

ಸೈನಿಕ ವಿಧ್ಯುಕ್ತ ಪೂರ್ಣ ಸಂಪ್ರದಾಯಗಳೊಂದಿಗೆ ಕಾರ್ಯಕ್ರಮದಲ್ಲಿ ‌ಪಾಲ್ಗೊಂಡ ಮರಾಠಾ ಲೈಟ್ ಇನ್‌ಫೆಂಟ್ರಿ ರೆಜಿಮೆಂಟಲ್ ಸೆಂಟರ್‌ನ ಕಮಾಂಡೆಂಟ್ ಬ್ರಿಗೇಡಿಯರ್ ಗಿರೀಶ್ ಉಪಾಧ್ಯ ಅವರು ಗೌರವ ವಂದನೆ ಸ್ವೀಕರಿಸಿ, ಅಗ್ನವೀರ ಪ್ರಶಿಕ್ಷಣಾರ್ಥಿಗಳ ಪರೇಡ್ ವೀಕ್ಷಿಸಿ ಪ್ರಮಾಣೀಕರಿಸಿದರು

ಅಗ್ನಿವೀರ್ ಸಂಕೇತ್ ಸಿಂಗ್ ಪರೇಡ್ ನ ನೇತೃತ್ವ ವಹಿಸಿದ್ದರು. ಮೇಜರ್ ಗಜಾನನ್ ಪಾಟೀಲ್ ಪೆರೇಡ್ ಆಡಳಿತ ಅಧಿಕಾರಿಯಾಗಿ ಪಾಲ್ಗೊಂಡಿದ್ದರು. MLIRCಯ ಹಿರಿಯ ಅಧಿಕಾರಿಗಳು ಸೇರಿದಂತೆ ಅಗ್ನಿವೀರರ ಪೋಷಕರು, ನಿವೃತ್ತ ಸೈನಿಕರು, ಎನ್.ಸಿ.ಸಿ ಕೆಡೆಟ್‌ಗಳು ಮತ್ತು ವಿವಿಧ ಶಾಲೆಗಳ  ವಿದ್ಯಾರ್ಥಿಗಳು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಅಗ್ನಿವೀರರು ನಮ್ಮ ರಾಷ್ಟ್ರಧ್ವಜ, ರೆಜಿಮೆಂಟಲ್ ಧ್ವಜ ಮತ್ತು ಧಾರ್ಮಿಕ ಪವಿತ್ರ ಪುಸ್ತಕಗಳ ಸಮ್ಮುಖದಲ್ಲಿ ‘ಪ್ರಮಾಣವಚನ’ ಸ್ವೀಕರಿಸಿದರು. ಸಾಕ್ಷಿಯಾದ ಆಕರ್ಷಕ ಸಮಾರಂಭದಲ್ಲಿ ಅಗ್ನಿವೀರರು ಪ್ರಮಾಣವಚನ ಸ್ವೀಕರಿಸಿದ ಹೆಮ್ಮೆ ಸಮಾರಂಭವನ್ನು ಇನ್ನಷ್ಟು ಪ್ರಭಾವಶಾಲಿಯನ್ನಾಗಿ ಮಾಡಿತು.

ಬಳಿಕ ಮಾತನಾಡಿದ ಬ್ರಿಗೇಡಿಯರ್ ಗಿರೀಶ್ ಉಪಾಧ್ಯ, ಭಾರತೀಯ ಸೇನೆಯ ಇತಿಹಾಸದಲ್ಲಿ ಅತ್ಯಂತ ಹಳೆಯ ಪದಾತಿ ದಳಗಳಲ್ಲಿ ಒಂದಾದ ಮರಾಠಾ ಲಘು ಪದಾತಿದಳ  ಶ್ರೀಮಂತ ಪರಂಪರೆ ಮತ್ತು ವೈಭವವನ್ನು ಹೊಂದಿದೆ. ಕೇಂದ್ರ ತರಬೇತಿ ನೀಡುವಲ್ಲಿ ಸೈನಿಕನ ಜೀವನದಲ್ಲಿ ಶಿಸ್ತು ಮತ್ತು ದೈಹಿಕ ಸದೃಢತೆ ಹಾಗೂ ದೇಶದ ಭದ್ರತೆಗೆ ವಿಶೇಷ ಆದ್ಯತೆ ನೀಡಲಾಗುತ್ತದೆ. ಸೇವೆಯಲ್ಲಿ ಅದನ್ನು ಕಾಯ್ದುಕೊಂಡು ಸಾಗಬೇಕು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಅಗ್ನಿವೀರ ತರಬೇತಿಯ ವಿವಿಧ ಕ್ಷೇತ್ರಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಅಗ್ನಿವೀರರಿಗೆ ಪದಕಗಳನ್ನು ಪ್ರದಾನ ಮಾಡಿ‌ ಗೌರವಿಸಿದರು.  ಅತ್ಯುತ್ತಮ ಅಗ್ನಿವೀರ್  ನಾಯಕನಾಗಿ ಯಶವಂತ್ ಘಾಡ್ಗೆ ಅವರಿಗೆ ಹಾಗೂ ವಿಕ್ಟೋರಿಯಾ ಕ್ರಾಸ್ ಪದಕವನ್ನು  ಘೋಲಾಪ್ ಆದರ್ಶ್ ಅವರಿಗೆ ನೀಡಲಾಯಿತು.

ನಂತರ, ಬ್ರಿಗೇಡಿಯರ್ ಗಿರೀಶ್ ಉಪಾಧ್ಯ ಅವರು, ಶರ್ಕತ್ ಯುದ್ಧ ಸ್ಮಾರಕದಲ್ಲಿ  ಮಾಲಾರ್ಪಣೆ ಮಾಡಿ‌, ದೇಶಕ್ಕಾಗಿ ಹೋರಾಡಿ ಮಡಿದ ವೀರ ಸೈನಿಕರಿಗೆ‌ ಗೌರವ ಸಮರ್ಪಣೆ ನೆರವೇರಿಸಲಾಯಿತು.

Tags:

error: Content is protected !!