BELAGAVI

ಬೆಳಗಾವಿಯಲ್ಲಿ ಸಡಗರದ ‘ಬುದ್ಧ ಪೌರ್ಣಿಮೆ’ ಬುದ್ಧ ವಂದನೆಯಲ್ಲಿ ಭಾಗಿಯಾಗಿ ಶಾಂತಿಯ ಸಂದೇಶ ನೀಡಿದ ಶಾಸಕ ಆಸೀಫ್ ಸೇಠ್

Share

ಇಂದು ಬೆಳಗಾವಿಯಲ್ಲಿ ಸಡಗರ ಸಂಭ್ರಮದ ಬುದ್ಧ ಪೂರ್ಣಿಮಾ ಆಚರಿಸಲಾಯಿತು. ಉತ್ತರ ಶಾಸಕ ಆಸೀಫ್ ಸೇಠ್ ಅವರು ಬುದ್ಧವಿಹಾರದಲ್ಲಿ ಭಗವಾನ್ ಬುದ್ಧರಿಗೆ ಪುಷ್ಪಾರ್ಚಣೆ ಸಲ್ಲಿಸಿ ಬುದ್ಧವಂದನೆಯಲ್ಲಿ ಭಾಗಿಯಾದರು.

ಇಂದು ಬೆಳಗಾವಿಯ ಸದಾಶಿವನಗರದಲ್ಲಿರುವ ಬುದ್ಧ ವಿಹಾರದಲ್ಲಿ ಬೆಳಗಾವಿ ಜಿಲ್ಲಾಡಳಿತದ ವತಿಯಿಂದ ಬುದ್ಧ ಪೂರ್ಣಿಮಾ ಅರ್ಥಾತ್ ಭಗವಾನ್ ಬುದ್ಧರ ಜಯಂತ್ಯೋತ್ಸವವನ್ನು ಆಚರಿಸಲಾಯಿತು. ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಆಸೀಫ್ ಸೇಠ್, ಉಪಮಹಾಪೌರ ಹನುಮಂತ ಕೊಂಗಾಲಿ, ನಗರಸೇವಕ ಸಂದೀಪ್ ಜಿರಗ್ಯಾಳ, ಸಿಪಿಐ ಜೆ.ಎಂ. ಕಾಲಿಮಿರ್ಚಿ, ಯಮನಪ್ಪ ಗಡಿನಾಯಿಕ, ಯಶವಂತ ಸಮ್ರಾಟ್, ರಾಜೇಂದ್ರ ಕಾಂಬಳೆ, ದೀಪಕ ಮೇತ್ರಿ, ಶೇಖರ್ ಶಿಂಗೆ, ಕಲ್ಲಪ್ಪ ಚೌಗುಲೆ ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ಧರು. ಭಗವಾನ್ ಬುದ್ಧರು ಮೂರ್ತಿಗೆ ಪುಷ್ಪಾರ್ಚನೆ ನೆರವೇರಿಸಿದರು. ನಂತರ ಬೌದ್ಧ ಬುಕ್ಕುಗಳ ನೇತೃತ್ವದಲ್ಲಿ ಬುದ್ಧವಂದನಾದೊಂದಿಗೆ ಅಭಿವಾದನೆ ಸಲ್ಲಿಸಲಾಯಿತು. (ಫ್ಲೋ)

ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಆಸೀಫ್ ಸೇಠ್ ಅವರು ಬುದ್ಧ ಬಸವರು ನೀಡಿದ ತತ್ವಾದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಪಾಲನೆ ಮಾಡಿದರೇ, ಇಡೀ ದೇಶ ಇಡೀ ಸಮಾಜ ಶಾಂತಿ ಸೌಹಾರ್ದತೆಯಿಂದ ಕೂಡಿರುತ್ತದೆ. ಎಲ್ಲರೂ ಒಗ್ಗಟ್ಟಿನಿಂದ ಜೀವನವನ್ನು ನಡೆಸಬೇಕೆಂದು ಕರೆ ನೀಡಿದರು. ಬೈಟ್

ಉಪಮಹಾಪೌರ ಹಣುಮಂತ ಕೊಂಗಾಲಿ ಅವರು ಭಗವಾನ್ ಬುದ್ಧರ ಜೀವನ ಮತ್ತು ಅವರ ಜೀವನದಲ್ಲಿ ಬಂದ ಪರಿವರ್ತನೆಯನ್ನು ತಿಳಿಸಿ, ಜನರಿಗೆ ಮಾರ್ಗದರ್ಶನ ನೀಡಲು ಮಾಡಿದ ಕಾರ್ಯಗಳನ್ನು ಸ್ಮರಿಸಿದರು. ಭಗವಾನ್ ಬುದ್ಧರ ತತ್ವಾದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೇ, ನಮ್ಮಲ್ಲಿಯೂ ಪರಿವರ್ತನೆ ಬರುತ್ತದೆ. ಮಹಾನ್ ಪುರುಷರ ಜಯಂತಿಗಳನ್ನು ಕೇವಲ ಆಚರಿಸದೇ ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು. ಬೈಟ್

ಇದೇ ವೇಳೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಸತ್ಕರಿಸಿ ಸನ್ಮಾನಿಸಲಾಯಿತು. ಇದೇ ವೇಳೆ ಅಂಬೇಡ್ಕರ್ ಭವನದ ಎದುರಿನ ವಿಶ್ವರತ್ನ ಡಾ. ಬಾಬಾಸಾಹೇಬ್ ಅಂಬೇಡ್ಕರರ ಮೂರ್ತಿಗೆ ಶಾಸಕರು ಸೇರಿದಂತೆ ಗಣ್ಯರು ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ಸ್ಮಿತಾ ಕಡೋಲಕರ, ಪ್ರೇಮಾ ಶಿಂಗೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕರಾದ ವಿದ್ಯಾವತಿ ಭಜಂತ್ರಿ, ಮಲ್ಲೇಶ್ ಚೌಗಲೆ ಇನ್ನುಳಿದವರು ಭಾಗಿಯಾಗಿದ್ಧರು.

Tags:

error: Content is protected !!