Belagavi

ಬಿ.ಕೆ. ಕಂಗ್ರಾಳಿಯಲ್ಲಿ ಮಹಾಲಕ್ಷ್ಮಿ ಜಾತ್ರೋತ್ಸವದ ಸಂಭ್ರಮ: ಸುಮಾರು 2 ಲಕ್ಷ ಜನರಿಂದ ದೇವಿಯ ದರ್ಶನ!!!

Share

1. ಬಿ.ಕೆ. ಕಂಗ್ರಾಳಿಯಲ್ಲಿ ಮಹಾಲಕ್ಷ್ಮಿ ಜಾತ್ರೆಯ ವೈಭವ
2. ದರ್ಶನ ಪಡೆದ ಎರಡು ಲಕ್ಷ ಭಕ್ತರು
3. ಕುಟುಂಬ ಸಮೇತ ಆಗಮಿಸಿದ ಡಿಸಿಪಿ ಬರಮನಿ
4. ಪೊಲೀಸ್ ಇಲಾಖೆಯಿಂದ ಬಿಗಿ ಭದ್ರತಾ ವ್ಯವಸ್ಥೆ

ಬೆಳಗಾವಿಯ ಬಿ.ಕೆ. ಕಂಗ್ರಾಳಿ ಗ್ರಾಮದಲ್ಲಿ ಗ್ರಾಮದೇವತೆ ಶ್ರೀ ಮಹಾಲಕ್ಷ್ಮೀ ದೇವಿಯ ಜಾತ್ರಾ ಮಹೋತ್ಸವವು ಅತ್ಯಂತ ವೈಭವದಿಂದ ಜರುಗುತ್ತಿದೆ. ಐದನೇ ದಿನಕ್ಕೆ ಕಾಲಿಟ್ಟಿರುವ ಈ ಸಂಭ್ರಮದಲ್ಲಿ ದೇವಿಯ ದರ್ಶನಕ್ಕಾಗಿ ಭಕ್ತರ ದಂಡೇ ಹರಿದು ಬರುತ್ತಿದ್ದು, ಇಡೀ ಗ್ರಾಮವೇ ಭಕ್ತಿಯ ಸಾಗರದಲ್ಲಿ ಮುಳುಗಿದೆ.

ಬಿ.ಕೆ. ಕಂಗ್ರಾಳಿ ಗ್ರಾಮದೇವತೆ ಮಹಾಲಕ್ಷ್ಮಿಯ ಜಾತ್ರಾ ಮಹೋತ್ಸವವು ಐದನೇ ದಿನವೂ ಭರ್ಜರಿಯಾಗಿ ಮುಂದುವರಿದಿದ್ದು, ಜನದಟ್ಟಣೆ ಮಿತಿಮೀರಿದೆ. ಇಲ್ಲಿಯವರೆಗೆ ಸುಮಾರು 2 ಲಕ್ಷಕ್ಕೂ ಅಧಿಕ ಭಕ್ತಾದಿಗಳು ದೇವಿಯ ದರ್ಶನ ಪಡೆದಿದ್ದಾರೆ ಎಂದು ಅಂದಾಜಿಸಲಾಗಿದೆ. ಭಕ್ತರ ಸಾಗರವೇ ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳು ಜನರಿಂದ ಕಿಕ್ಕಿರಿದು ತುಂಬಿವೆ. ಎತ್ತ ನೋಡಿದರೂ ವಾಹನಗಳ ಸಾಲು ಮತ್ತು ಭಕ್ತರ ಜಯಘೋಷಗಳು ಕೇಳಿಬರುತ್ತಿದ್ದು, ಹಬ್ಬದ ವಾತಾವರಣ ಮನೆಮಾಡಿದೆ. ಇಂದು ಡಿಸಿಪಿ ನಾರಾಯಣ್ ಬರಮನಿ ಅವರು ತಮ್ಮ ಕುಟುಂಬ ಸಮೇತರಾಗಿ ಆಗಮಿಸಿ ದೇವಿಯ ದರ್ಶನ ಪಡೆದು ಪುನೀತರಾದರು.
ಭಕ್ತರ ಅನುಕೂಲಕ್ಕಾಗಿ ಜಾತ್ರೋತ್ಸವ ಸಮಿತಿಯು ಕುಡಿಯುವ ನೀರು, ಪ್ರಸಾದ ಸೇರಿದಂತೆ ಸಕಲ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿದೆ. ಇನ್ನು ಭಾರಿ ಜನದಟ್ಟಣೆಯನ್ನು ನಿಯಂತ್ರಿಸಲು ಮತ್ತು ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆಯ ವತಿಯಿಂದ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಪಾರ್ಕಿಂಗ್ ವ್ಯವಸ್ಥೆಗಾಗಿ ಪ್ರತ್ಯೇಕ ಸ್ಥಳಗಳನ್ನು ಗುರುತಿಸಲಾಗಿದ್ದರೂ, ವಾಹನಗಳ ಸಂಖ್ಯೆ ಹೆಚ್ಚಾದ ಕಾರಣ ರಸ್ತೆ ಬದಿಗಳಲ್ಲಿಯೂ ವಾಹನಗಳ ಸಾಲು ಕಂಡುಬಂದಿದೆ.
ಈ ಕುರಿತು ಜಾತ್ರೋತ್ಸವ ಕಮೀಟಿಯ ಪ್ರಮುಖರು ಇನ್ ನ್ಯೂಸ್’ಗೆ ಹೆಚ್ಚಿನ ಮಾಹಿತಿಯನ್ನು ನೀಡಿದರು.

Tags:

error: Content is protected !!