“ಯಕ್ಸಂಬಾ ಪಟ್ಟಣದಲ್ಲಿ ಮುಖ್ಯ ಶಾಖೆಯನ್ನು ಹೊಂದಿರುವ ಜ್ಯೋತಿ ವಿವಿಧೋದ್ದೇಶಗಳ ಸೌಹಾರ್ದ ಸಹಕಾರಿ ಸಂಘ 2025-26ನೇ ಆರ್ಥಿಕ ವರ್ಷದಲ್ಲಿ ₹ 2.1 ಕೋಟಿ ನಿವ್ವಳ ಲಾಭ ಗಳಿಸಿದೆ” ಎಂದು ಜೊಲ್ಲೆ ಗ್ರುಪ್ ಉಪಾಧ್ಯಕ್ಷ, ಸಂಘದ ನಿರ್ದೇಶಕ ಬಸವಪ್ರಸಾದ ಜೊಲ್ಲೆ ಹೇಳಿದರು.

ತಾಲ್ಲೂಕಿನ ಯಕ್ಸಂಬಾ ಪಟ್ಟಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ” ಜೊಲ್ಲೆ ಗ್ರುಪ್ ನ ಅಂಗ ಸಂಸ್ಥೆಗಳಲ್ಲೊಂದಾದ ಜ್ಯೋತಿ ವಿವಿಧೋದ್ದೇಶಗಳ ಸೌಹಾರ್ದ ಸಹಕಾರಿ ಸಂಘ 52426 ಸದಸ್ಯರನ್ನು ಹೊಂದಿದ್ದು, ₹ 2.79 ಕೋಟಿ ಶೇರು ಬಂಡವಾಳ ಹೊಂದಿದೆ. ₹ 13.21 ಕೋಟಿ ಕಾಯ್ದಿಟ್ಟ ಹಾಗೂ ಇತರೆ ನಿಧಿಗಳಿದ್ದು, ₹ 424.67 ಕೋಟಿ ಠೇವಣಿ ಹೊಂದಿದ ಹೆಮ್ಮೆ ಇದೆ” ಎಂದರು.
“₹ 254.25 ಕೋಟಿ ಸಾಲ ಮತ್ತು ಮುಂಗಡಗಳಿದ್ದು, ₹ 136.96 ಕೋಟಿ ಬ್ಯಾಂಕ್ ಬ್ಯಾಲೆನ್ಸ್ ಮತ್ತು ಹೂಡಿಕೆ ಹೊಂದಲಾಗಿದೆ. ₹ 440.68 ಕೋಟಿ ದುಡಿಯುವ ಬಂಡವಾಳ ಇದೆ. ₹ 726.44 ಕೋಟಿ ಬ್ಯುಸಿನೆಸ್ ಟರ್ನವೋವರ್ ಇದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 82 ಶಾಖೆಗಳನ್ನು ಹೊಂದಿದ್ದು, ಪ್ರಸಕ್ತ ಸಾಲಿನಲ್ಲಿ ಹಾರೂಗೇರಿ, ಅಥಣಿ, ಜಾಗನೂರ, ಚುಂಚನೂರ, ಎಲಿಮುನ್ನೋಳ್ಳಿ, ಖನದಾಳ ಸೇರಿದಂತೆ 6 ಹೊಸ ಶಾಖೆಗಳನ್ನು ತೆರೆಯಲು ಉದ್ದೇಶಿಸಲಾಗಿದೆ” ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜೊಲ್ಲೆ ಗ್ರುಪ್ ನ ಪ್ರಮುಖ ಜ್ಯೋತಿಪ್ರಸಾದ ಜೊಲ್ಲೆ, ಸಂಘದ ಅಧ್ಯಕ್ಷ ಬಾಬುರಾವ ಮಾಳಿ, ಉಪಾಧ್ಯಕ್ಷ ವಿಶ್ವನಾಥ ಪೇಟಕರ, ನಿರ್ದೇಶಕರಾದ ಜಗದೀಶ ಹಿಂಗ್ಲಜೆ, ಜಗದೀಶ ಜಾಧವ, ರಾವಸಾಬ ಬಾಕಳೆ, ಕಲ್ಲಪ್ಪ ನಾಯಿಕ, ಬಾಳಸಾಬ ಶಿಂಧೆ, ಸವಿತಾ ಉಂದುರೆ, ಕೃಷ್ಣಪ್ಪ ಪೂಜಾರಿ, ಆನಂದ ಗಿಡ್ಡ, ಲಕ್ಷ್ಮಣ ಪ್ರಭಾತ, ಅಮೃತ ಖೋತ, ಪ್ರದಾನ ವ್ಯವಸ್ಥಾಪಕ ಸಂತೋಷ ಪಾಟೀಲ, ಸಹಾಯಕ ಪ್ರಧಾನ ವ್ಯವಸ್ಥಾಪಕ ಮಹಾಂತೇಶ ಶಿರೋಳ, ತಾನಾಜಿ ಶಿಂಧೆ, ಸಂತೋಷ ಪೂಜಾರಿ ಇದ್ದರು.
