ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಚುನಾವಣೆಗೂ ಮುನ್ನ ಮತದಾರರ ಪಟ್ಟಿ ಸರಿಪಡಿಸುವ ಕಾರ್ಯ ಯುದ್ಧೋಪಾದಿಯಲ್ಲಿ ಸಾಗಿದೆ. ಸ್ವತಃ ಶಾಸಕ ಅಭಯ್ ಪಾಟೀಲ್ ಅವರೇ ಅಧಿಕಾರಿಗಳೊಂದಿಗೆ ಅಖಾಡಕ್ಕಿಳಿದು ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯವನ್ನು ಪೂರ್ಣಗೊಳಿಸಿದ್ದಾರೆ.

ಶಾಸಕರಾದ ಅಭಯ್ ಪಾಟೀಲ್ ಅವರ ದಕ್ಷ ನೇತೃತ್ವದಲ್ಲಿ ಮತದಾರರ ಪಟ್ಟಿ ಪರಿಶೀಲನೆ ಹಾಗೂ ಮ್ಯಾಪಿಂಗ್ ಕಾರ್ಯವು ನಿನ್ನೆ ಅತ್ಯಂತ ಯಶಸ್ವಿಯಾಗಿ ಮುಕ್ತಾಯಗೊಂಡಿತು. ಈ ಪ್ರಕ್ರಿಯೆಯಲ್ಲಿ ಬಿಎಲ್ಒ ಹಾಗೂ ಬಿಎಲ್ಎ ಕಾರ್ಯಕರ್ತರ ಸಕ್ರಿಯ ಸಹಕಾರದೊಂದಿಗೆ ಪ್ರತಿ ಮತದಾರರ ಮಾಹಿತಿಯನ್ನು ನಿಖರವಾಗಿ ತಾಳೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ಶ್ರೀ ಅಭಿಜಿತ್ ಜಾವಳ್ಕರ್, ಮಹಾನಗರ ಪಾಲಿಕೆ ಮೇಲ್ವಿಚಾರಕರಾದ ಜಾಯಣ್ಣವರ್ ಸರ್, ಸಮಾಜ ಸೇವಕಿ ಮಯೂರಾ ಪಾಟೀಲ್ ಹಾಗೂ ತಹಶೀಲ್ದಾರ್ ಅವರು ಉಪಸ್ಥಿತರಿದ್ದು ಪ್ರಕ್ರಿಯೆಯನ್ನು ಪರಿಶೀಲಿಸಿದರು. ಪಾರದರ್ಶಕ ಚುನಾವಣೆಗಾಗಿ ಈ ಮಹತ್ವದ ಕಾರ್ಯ ಕೈಗೊಳ್ಳಲಾಗಿದೆ ಎಂದು ಶಾಸಕರು ತಿಳಿಸಿದರು.
