ಕೂಡಲಸಂಗಮ ಶ್ರೀಗಳ ಕೇಸ್ಇ
ಇನ್ ನ್ಯೂಜ್ ಮುಂದೆ ಘಟನೆ ವಿವರ ಬಿಚ್ಚಿಟ್ಟ ಸ್ವಾಮೀಜಿ ಆಪ್ತ
ಶ್ರೀಗಳ ಮೇಲೆ ಹಲ್ಲೆ, 3 ಕೋಟಿ ಹಣಕ್ಕೆ ಬೇಡಿಕೆ?
ಬ್ಲ್ಯಾಕ್ಮೇಲ್ ದೂರಿನ ಬೆನ್ನಲ್ಲೇ ರೇಪ್ ಕೇಸ್ ಅಸ್ತ್ರ

ಪಂಚಮಸಾಲಿ ಸಮಾಜದ ಕೂಡಲಸಂಗಮ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಬ್ಲಾಕ್ಮೇಲ್ ವಿವಾದದಲ್ಲಿ ಸಿಲುಕಿದ್ದಾರೆ. ಪಂಚಮಸಾಲಿ 2ಎ ಮೀಸಲಾತಿ ಹೋರಾಟದ ಮುಂಚೂಣಿಯಲ್ಲಿರುವ ಸ್ವಾಮೀಜಿ ಮೇಲೆ ಹಲ್ಲೆ ನಡೆಸಿ, ಹಣಕ್ಕಾಗಿ ಬೆದರಿಕೆ ಹಾಕಲಾಗಿದೆ ಎಂದು ಶಿಷ್ಯರೊಬ್ಬರು ದೂರು ನೀಡಿದ್ದಾರೆ. ಈ ಪ್ರಕರಣದಲ್ಲಿ ರಾಜಕೀಯ ಕೈವಾಡವಿದೆ ಎಂದು ಆರೋಪಿಸಲಾಗಿದ್ದು, 2ಎ ಮೀಸಲಾತಿ ಹೋರಾಟವನ್ನು ಹತ್ತಿಕ್ಕುವ ಯತ್ನ ನಡೆದಿದೆ ಎಂದು ಹೇಳಲಾಗಿದೆ. ಮಹಿಳೆಯೊಬ್ಬರು ಸ್ವಾಮೀಜಿ ವಿರುದ್ಧ ಲೈಂಗಿಕ ಕಿರುಕುಳದ ಆರೋಪವನ್ನೂ ಮಾಡಿದ್ದಾರೆ. ಇನ್ನೂ ಪೊಲೀಸರು ಶ್ರೀಗಳ ದೂರು ಆಧರಿಸಿ ಆರೋಪಿಗಳ ಬಂಧನಕ್ಕೆ ಜಾಲ ಬೀಸಿದ್ದಾರೆ. ಈ ಕುರಿತು ಇಲ್ಲಿದೆ ಡಿಟೇಲ್ಸ್…
ಪಂಚಮಸಾಲಿ 2ಎ ಮೀಸಲಾತಿ ಹೋರಾಟದ ಮುಂಚೂಣಿಯಲ್ಲಿರುವ ಕೂಡಲಸಂಗಮ ಪೀಠದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿಗಳ ಸುತ್ತ ಈಗ ವಿವಾದವೊಂದು ಸುತ್ತಿಕೊಂಡಿದೆ. ಸ್ವಾಮೀಜಿಗಳ ಮೇಲೆ ಹಲ್ಲೆ ನಡೆಸಿ, ನಂತರ ಹಣಕ್ಕಾಗಿ ಬ್ಲ್ಯಾಕ್ಮೇಲ್ ಮಾಡಲಾಗುತ್ತಿದೆ ಎಂದು ಅವರ ಶಿಷ್ಯ ಸಂತೋಷ ಮಂಜಣ್ಣಿ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ದೂರಿನ ಪ್ರಕಾರ, ಕಳೆದ ಫೆಬ್ರವರಿ 11 ರಂದು ವಿಜಯಪುರ ತಾಲೂಕಿನ ಕಗ್ಗೋಡ ಬಳಿ ಸ್ವಾಮೀಜಿಗಳು ಕಾರಿನಲ್ಲಿ ತೆರಳುತ್ತಿದ್ದಾಗ ತ್ರಿವೇಣಿ ಎಂಬ ಮಹಿಳೆ ಮತ್ತು ಇತರರು ಕಾರು ತಡೆದು ಹಲ್ಲೆ ನಡೆಸಿದ್ದರು ಎನ್ನಲಾಗಿದೆ. ಆಗ ಭಕ್ತರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದರು. ಆದರೆ, ಈ ಘಟನೆಯ ನಂತರ ಮಹಿಳೆಯು ಸಾಮಾಜಿಕ ಜಾಲತಾಣಗಳಲ್ಲಿ ಸ್ವಾಮೀಜಿಗಳ ವಿರುದ್ಧ ಅಪಪ್ರಚಾರ ಆರಂಭಿಸಿ, ರಾಜಕುಮಾರ್ ಎಂಬುವವರ ಮೂಲಕ 3 ಕೋಟಿ ರೂಪಾಯಿ ಹಣಕ್ಕೆ ಬೇಡಿಕೆಯಿಟ್ಟಿದ್ದಾರೆ ಎಂದು ಆರೋಪಿಸಲಾಗಿದೆ. ಇನ್ನೂ ಈ ದೂರಿನ ಕುರಿತು ಇನ್ ನ್ಯೂಜ್ 24×7 ಜೊತೆಗೆ ಮಾತನಾಡಿರುವ ಸಂತೋಷ ಮಂಜಣ್ಣಿ, ಈ ಇಡೀ ಪ್ರಕರಣದ ವಿವರವನ್ನು ಬಿಚ್ಚಿಟ್ಟಿದ್ದಾರೆ. ಶ್ರೀಗಳ ಜೊತೆ ಗಲಾಟೆ ನಡೆದ ದಿನ ಅದೇ ಕಾರಿನಲ್ಲಿದ್ದ ಸಂತೋಷ ಮುಂಜಣ್ಣಿ
.ವಿಜಯಪುರದಲ್ಲಿ ಸ್ವಾಮೀಜಿ ಪರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಅವರ ಪ್ರಕಾರ ನಾನು ಹಾಗೂ ಸ್ವಾಮೀಜಿ ವಿಜಯಪುರ ನಗರದಿಂದ ಸಿಂದಗಿ ರಸ್ತೆಯಲ್ಲಿ ಹೊರಟಿದ್ದೇವು. ಕಗ್ಗೋಡ ಗ್ರಾಮದಲ್ಲಿ ಕಾರ್ ನಲ್ಲಿ ಬಂದ ನಾಲ್ವರು ಸ್ವಾಮೀಜಿ ಮೇಲೆ ಹಲ್ಲೆಗೆ ಮುಂದಾದರು. ಕೂಡಲೇ ಎಚ್ಚೆತ್ತೆ ಎಸ್ಕಾರ್ಟ್ ಸಿಬ್ಬಂದಿ ಕಾರ್ ನಿಂದ ಇಳಿಯದಂತೆ ಸ್ವಾಮೀಜಿ ಗೆ ಹೇಳಿದರು. ಮಹಿಳೆ ಹಾಗೂ ನಾಲ್ವರು ಸೇರಿ ಕಾರ್ ಸುತ್ತುವರಿದು ಗಲಾಟೆ ಮಾಡಿ ವಿಡಿಯೋ ಮಾಡಿಕೊಂಡರು. ಫೆಬ್ರವರಿ 11 ರಂದು ಘಟನೆ ನಡೆದಿದೆ. ಅದಾದ ಬಳಿಕ ಕೆಲವರ ಹಣಕ್ಕಾಗಿ ಬೇಡಿಕೆಯಿಟ್ಟು ಇದೀಗ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಇದರ ಹಿಂದೆ ವಿಜಯಾನಂದ ಕಾಶಪ್ಪನವರ ಕೈವಾಡ ಇದೆ ಸ್ವಾಮೀಜಿ ಆಪ್ತ ಸಂತೋಷ ಮುಂಜಣ್ಣಿ ಗಂಭೀರ ಆರೋಪ ಮಾಡಿದ್ದಾರೆ.
ಇದೇ ವೇಳೆ, ಮಹಿಳೆಯು ಸ್ವಾಮೀಜಿಗಳ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರದ ಆರೋಪ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸಂತೋಷ, “ಇಷ್ಟು ದಿನ ಸುಮ್ಮನಿದ್ದ ಮಹಿಳೆ, ಸ್ವಾಮೀಜಿಗಳು ದೂರು ನೀಡಿದ ಬಳಿಕವಷ್ಟೇ ಯಾಕೆ ದೂರು ನೀಡಿದ್ದಾರೆ? ಇದು ಕೇವಲ ಹಣಕ್ಕಾಗಿ ಮಾಡುತ್ತಿರುವ ಬೆದರಿಕೆ” ಎಂದು ಪ್ರಶ್ನಿಸಿದ್ದಾರೆ. ಇನ್ನೂ ಮಹಿಳೆ ಸೇರಿ ನಾಲ್ವರ ವಿರುದ್ಧ ಹಣಕ್ಕಾಗಿ ಬ್ಲಾಕ್ಮೇಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಪತ್ತೆಗೆ ವಿಜಯಪುರ ಪೊಲೀಸರು ಬಲೆ ಬೀಸಿದ್ದಾರೆ. ಬೆಂಗಳೂರಿನಲ್ಲಿ ವಿಜಯಪುರ ಗ್ರಾಮೀಣ ಠಾಣೆ ಪೊಲೀಸರು ಬೀಡು ಬಿಟ್ಟಿದ್ದಾರೆ. ಗ್ರಾಮೀಣ ಠಾಣೆಯ ಒಂದು ತಂಡದಿಂದ ಆರೋಪಿಗಳಿಗಾಗಿ ಹುಡುಕಾಟ ನಡೆದಿದೆ. ಸ್ವಾಮೀಜಿ ದೂರು ನೀಡ್ತಿದ್ದಂತೆ ದಿ.6 ರಂದು ಬೆಂಗಳೂರಿನಲ್ಲಿ ಮಹಿಳೆಯಿಂದ ಸ್ವಾಮೀಜಿ ವಿರುದ್ಧ ಲೈಂಗಿಕ ದೌರ್ಜನ್ಯ ಕೇಸ್ ದಾಖಲಾಗಿದೆ. ಪಂಚಮಸಾಲಿ ಸ್ವಾಮೀಜಿ ದೂರು ಆಧರಿಸಿ ಪೀಲ್ಡಿಗಿಳಿದಿರೊ ವಿಜಯಪುರ ಪೊಲೀಸರು ಮೊದಲಿಗೆ ಆರೋಪಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಿದ್ದಾರೆ. A1 ತ್ರಿವೇಣಿ, A2 ಪೃಥ್ವಿಗೌಡ, A3 ಯಶವಂತ ಎಂ ಊರ್ಪ್ ಮಂಜುನಾಥ, A4 ಯುಟುಬ್ ವಾಹಿನಿಯ ಎಂ ಡು ವಿರೇಶ್ ಗಾಗಿ ಹುಡುಕಾಟ ನಡೆಸಿದ್ದಾರೆ.
ಒಟ್ಟಾರೆ ಪ್ರಕರಣವು ರಾಜ್ಯದಲ್ಲಿ ಸಂಚಲನ ಮೂಡಿಸಿದ್ದು ರಾಜಕೀಯ ಸುತ್ತಿಕೊಂಡಿದೆ. ಇನ್ನೊಂದು ಕಡೆ ಸ್ವಾಮೀಜಿಗಳ ಪರವಾಗಿ ಸೋಶಿಯಲ್ ಮಿಡಿಯಾದಲ್ಲಿ ಪರ ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಲಿವೆ. ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದ ಬಳಿಕ ಸತ್ಯಾಸತ್ಯತೆ ಹೊರಬರಲಿದೆ.
