Vijaypura

ವಿಜಯೇಂದ್ರ ರೋಡ್ ಶೋಗೆ ಜನರಿಲ್ಲದೆ ರದ್ದು: ಯತ್ನಾಳ್ ವ್ಯಂಗ್ಯ

Share

ಉಪಚುನಾವಣೆಯ ಮತದಾನ ಪ್ರಕ್ರಿಯೆ ಮುಕ್ತಾಯ ಬೆನ್ನಲ್ಲೇ ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸ್ವಪಕ್ಷೀಯ ನಾಯಕರ ವಿರುದ್ಧವೇ ವಾಗ್ದಾಳಿ ನಡೆಸುವ ಮೂಲಕ ರಾಜಕೀಯ ಸಂಚಲನ ಮೂಡಿಸಿದ್ದಾರೆ. ಮುಖ್ಯವಾಗಿ, ಬಿಜೆಪಿಯ ರೋಡ್ ಶೋಗೆ ಜನ ಸೇರದ ಕಾರಣ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಅಲ್ಲಿಂದ ಕಾಲ್ಕಿತ್ತಿದ್ದಾರೆ ಎಂದು ಲೇವಡಿ ಮಾಡುವ ಮೂಲಕ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ.

ವಿಜಯಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸದ್ಯ ಉಪ ಚುನಾವಣೆಯ ಫಲಿತಾಂಶ ಪೆಟ್ಟಿಗೆಯಲ್ಲಿದೆ. 4 ಜನ ಸಿಎಂಗಳು ಹೋದರೂ 4-5 ಸಾವಿರ ಜನ ಸೇರಿರಲಿಲ್ಲ. ನಾವು ಹೋದಲೆಲ್ಲ ಜನಸಾಗರ ಹರಿದು ಬಂದಿದೆ. ನಾವು ಜನಪ್ರತಿನಿಧಿಗಳೂ ನಿಮ್ಮಂತಯೇ ಚಮಚಾಗಳಲ್ಲ. ಕೊನೆಯ ದಿನ ಬಿಜೆಪಿ ರೋಡ್ ಶೋಗೆ ಜನರೇ ಸೇರದ ಹಿನ್ನಲೆ ಅದನ್ನ ರದ್ಧುಪಡಿಸಲಾಯಿತು. ವಿಜಯೇಂದ್ರ ಅಲ್ಲಿಂದ ಹೊರಟು ಹೋದರು.

ಇನ್ನು ಸಿಎಂ ಚುನಾವಣೆಯ ಸಾಯಂಕಾಲದ ವರೆಗೂ ಹತಾಶರಾಗಿದ್ದರು. 7 ದಿನ ಸ್ಥಳದಲ್ಲಿ ಬೀಡುಬಿಟ್ಟು ಕಷ್ಟಪಟ್ಟಿದ್ದಾರೆ. ಶ್ರಮವಹಿಸಬೇಕು, ಅದರ ಫಲಿತಾಂಶ ದೇವರು ನೀಡುತ್ತಾರೆ. ಕಾಂಗ್ರೆಸ್ಸಿನವರು ಲಿಂಗಾಯಿತರಿಗೆ 5 ಸಾವಿರ, ಎಸ್.ಸಿ ಎಸ್.ಟಿ ಅವರಿಗೆ 3 ಸಾವಿರ ಮತ್ತು ಅಲ್ಪಸಂಖ್ಯಾತರಿಗೆ 1 ಸಾವಿರ ರೂಪಾಯಿ ನೀಡಿದ್ದಾರೆಂದು ಆರೋಪಿಸಿದ ಅವರು, ಸಮಾನತೆಯನ್ನು ಮರೆತು ಅಪಮಾನವನ್ನು ಮಾಡಿದ್ದಾರೆಂದರು.

ಇನ್ನು ಬಿಜೆಪಿ ಸೇರುವ ವಿಚಾರಕ್ಕೆ ಸಂಬಂಧಿಸಿದಂತೆ ಸದ್ಯ ನಮ್ಮ ವಿಚಾರವಿಲ್ಲ. ಇಡೀ ಬಿಜೆಪಿ ನಮ್ಮನ್ನು ಕರೆದುಕೊಳ್ಳಲು ನಿರ್ಣಯಿಸಿದ್ದಾರೆ. ಆದರೇ ಹತಾಶರಾಗಿ ಕೇವಲರು ಬೇರೆಯವರಿಂದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇನ್ನು ಜಯಮೃತ್ಯುಂಜಯ ಸ್ವಾಮಿಜೀ ಕೇಸ್’ಗೆ ಸಂಬಂಧಿಸಿದಂತೆ ಯೋಗ್ಯ ತನಿಖೆ ನಡೆದು, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂದರು. ಕರ್ನಾಟಕದಲ್ಲಿ ಎ ಮತ್ತು ಬಿ ಟೀಂಗಳಿದ್ದು ಅವರೇ ಈ ರೀತಿಯ ವಿಡಿಯೋಗಳನ್ನು ಮಾಡುತ್ತಾರೆ. ಹೈಕಮಾಂಡ್’ಗೆ ಇದು ತಿಳಿಯದಾಗಿದೆ ಎಂದರು. ಇನ್ನು ಹುಬ್ಬಳ್ಳಿಯ ಲವ್ ಜಿಹಾದ್ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡರ ಬೆಂಬಲವಿದೆ ಎಂದರು ಆರೋಪಿಸಿದರು.

Tags:

error: Content is protected !!