BELAGAVI

ಬಾಗಲಕೋಟೆ-ದಾವಣಗೆರೆಯಲ್ಲಿ ಗೆಲುವು ನಮ್ಮದೇ: ಜಾರಕಿಹೊಳಿ ಭವಿಷ್ಯ!

Share

ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ನೂರಕ್ಕೆ ನೂರರಷ್ಟು ಗೆಲುವು ಸಾಧಿಸಲಿದ್ದಾರೆ ಎಂದು ಸಚಿವ ಸತೀಶ್ ಜಾರಕಿಹೊಳಿ ಭವಿಷ್ಯ ನುಡಿದಿದ್ದಾರೆ.
ಬೆಳಗಾವಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ನೂರಕ್ಕೆ ನೂರರಷ್ಟು ಗೆಲುವು ಸಾಧಿಸಲಿದ್ದಾರೆ ಎಂದು ಸಚಿವ ಸತೀಶ್ ಜಾರಕಿಹೊಳಿ ಭವಿಷ್ಯ ನುಡಿದಿದ್ದಾರೆ. ಶಿಗ್ಗಾವಿ ಹಾಗೂ ಬಾಗಲಕೋಟೆಯ ರಾಜಕೀಯ ಸ್ಥಿತಿಗತಿಗಳು ಭಿನ್ನವಾಗಿದ್ದು, ಕ್ಷೇತ್ರ ಅಧ್ಯಯನ ಮಾಡಿದ ನಂತರ ಅಲ್ಲಿ ಮಾಡಬೇಕಾದ ಕೆಲಸಗಳ ಬಗ್ಗೆ ಸ್ಪಷ್ಟತೆ ಸಿಕ್ಕಿದೆ. ಗೆಲುವಿನ ಅಂತರವನ್ನು ಮಾಧ್ಯಮಗಳೇ ನಿರ್ಧರಿಸಲಿ, ಆದರೆ ಗೆಲುವು ಮಾತ್ರ ನಮ್ಮದೇ ಎಂದು ಅವರು ದೃಢವಾಗಿ ತಿಳಿಸಿದರು.

ಬಿಜೆಪಿಯವರ ವಿರುದ್ಧ ವಾಗ್ದಾಳಿ ನಡೆಸಿದ ಅವರು, “ಕಾಂಗ್ರೆಸ್ ಒಂದು ಕ್ಷೇತ್ರ ಸೋತರೂ ಬಿಜೆಪಿಯವರು ಮುಂದಿನ ಎರಡು ವರ್ಷ ನಮ್ಮನ್ನು ಮಲಗಲು ಬಿಡಲ್ಲ, ತಾವೇ ಸಿಎಂ-ಮಂತ್ರಿಗಳು ಎಂದು ಓಡಾಡುತ್ತಾರೆ” ಎಂದು ಲೇವಡಿ ಮಾಡಿದರು. ಕಾಂಗ್ರೆಸ್ ಗೆದ್ದರೆ ಯಾವುದೇ ಅಡೆತಡೆಯಿಲ್ಲದೆ ಸ್ವತಂತ್ರವಾಗಿ ಆಡಳಿತ ನಡೆಸಲು ಸಾಧ್ಯವಾಗುತ್ತದೆ. ಕೇವಲ ಸಭೆ-ಸಮಾರಂಭಗಳಿಂದ ಜನರನ್ನು ಸೇರಿಸುವುದು ಕೇವಲ ಪ್ರದರ್ಶನವಷ್ಟೇ, ನಾವು ಮತದಾರರ ಮನೆಬಾಗಿಲಿಗೆ ಹೋಗಿ ನಮ್ಮ ಸಾಧನೆಗಳನ್ನು ತಿಳಿಸಿ ಅವರ ಮನವೊಲಿಸುವ ಕೆಲಸ ಮಾಡುತ್ತಿದ್ದೇವೆ ಎಂದರು.
ದಾವಣಗೆರೆ ದಕ್ಷಿಣದಲ್ಲಿ ಅಲ್ಪಸಂಖ್ಯಾತ ಸಮುದಾಯದ ಮುನಿಸಿನಿಂದ ಶೇ. 20ರಷ್ಟು ಮತಗಳು ಕುಸಿಯುವ ಭೀತಿಯಿದ್ದು, ಈ ಡ್ಯಾಮೇಜ್ ಸರಿಪಡಿಸುವ ದೊಡ್ಡ ಜವಾಬ್ದಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರ ಮೇಲಿದೆ ಎಂದು ಎಚ್ಚರಿಸಿದರು. ಇನ್ನು ಮಾಜಿ ಸಚಿವ ಮುರುಗೇಶ್ ನಿರಾಣಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ಸಾರ್ವಜನಿಕ ಜೀವನದಲ್ಲಿರುವವರು ಜಾತಿ-ಧರ್ಮದ ಆಧಾರದ ಮೇಲೆ ಮಾತನಾಡಬಾರದು, ಅದು ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಕಿವಿಮಾತು ಹೇಳಿದರು.

ಇನ್ನು ಸಚಿವ ಸಂಪುಟದಲ್ಲಿ 4 ಸ್ಥಾನ ಖಾಲಿಯಿದ್ದು, ಅದರ ಬಗ್ಗೆ ಪಕ್ಷ ಗಮನಹರಿಸಬೇಕು. ಸಚಿವ ಸಂಪುಟ ವಿಸ್ತರಣೆ, ಅಧ್ಯಕ್ಷರ ಬದಲಾವಣೆ, ಗೊಂದಲಗಳನ್ನು ಏಪ್ರೀಲ್ 4 ರ ವರೆಗೂ ಕಾಯದೇ ಬೇಗನೆ ಇತ್ಯರ್ಥಗೊಂಡರೇ ಕಾರ್ಯಕರ್ತರಲ್ಲಿ ಸಂತಸ ಮೂಡುತ್ತದೆ. ಇನ್ನು ರಮೇಶ ಕತ್ತಿ ಹೇಳುವುದು ಕೇವಲ ಮೂರು ಯೂಟ್ಯೂಬ್ ಚ್ಯಾನಲ್‌ನವರು ತೋರಿಸುವುದಕ್ಕಷ್ಟೇ ಸೀಮಿತ. ಅವರ ಮಾತುಗಳನ್ನು ಜನರು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ, ಕೆಲವು ಯೂಟ್ಯೂಬ್ ಚ್ಯಾನಲ್‌ಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಪರವಾಗಿ ದೊಡ್ಡ ಅಲೆ ಇರುವಂತೆ ಬಿಂಬಿಸಲಾಗುತ್ತಿದೆ. ಚುನಾವಣೆ ನಡೆಯುವುದು ಜನರ ಮಧ್ಯೆ, ಮೊಬೈಲ್ ಸ್ಕ್ರೀನ್ ಮೇಲಲ್ಲ. ಮೂರು-ನಾಲ್ಕು ಯೂಟ್ಯೂಬ್ ಚ್ಯಾನಲ್‌ಗಳು ಮಾಡುವ ಶಬ್ದದಿಂದ ಮತಗಳು ಬದಲಾಗುವುದಿಲ್ಲ. ನಮ್ಮನ್ನು ಅವರು ಅಲರ್ಟ್ ಮಾಡುತ್ತಾರೆ ಎಂದು ರಮೇಶ ಕತ್ತಿ ಹೇಳಿಕೆಗಳಿಗೆ ಸಚಿವರು ತಿರುಗೇಟು ನೀಡಿದರು.

ಈ ಸಂದರ್ಭದಲ್ಲಿ ವಾಕರಸಾ, ಸಂಸ್ಥೆಯ ಉಪಾಧ್ಯಕ್ಷ ಸುನೀಲ್‌ ಹಣಮನ್ನವರ್‌, ಬೆಳಗಾವಿ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿನಯ ನಾವಲಗಟ್ಟಿ ಸೇರಿದಂತೆ ಇತರರು ಇದ್ದರು.

Tags:

error: Content is protected !!