BELAGAVI

ಬೆಳಗಾವಿಯ ಮರಾಠಾ ಮಂಡಳ ಪಾಲಿಟೆಕ್ನಿಕ್‌ನಲ್ಲಿ “ವೆಂಚುರಾ 2.0” ಸಂಭ್ರಮ: ಅದ್ಧೂರಿ ವಾರ್ಷಿಕೋತ್ಸವ ಯಶಸ್ವಿ!

Share

ಬೆಳಗಾವಿಯ ಮರಾಠಾ ಮಂಡಳ ಪಾಲಿಟೆಕ್ನಿಕ್ ಕಾಲೇಜಿನಲ್ಲಿ 2025-26ನೇ ಸಾಲಿನ ವಾರ್ಷಿಕೋತ್ಸವ “ವೆಂಚುರಾ 2.0” ಅತ್ಯಂತ ಸಡಗರ-ಸಂಭ್ರಮದಿಂದ ಜರುಗಿತು. ಮೂರು ದಿನಗಳ ಕಾಲ ನಡೆದ ಈ ಸಾಂಸ್ಕೃತಿಕ ಹಬ್ಬದಲ್ಲಿ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು.

ಬೆಳಗಾವಿಯ ಮರಾಠಾ ಮಂಡಳ ಪಾಲಿಟೆಕ್ನಿಕ್‌ನಲ್ಲಿ ಮೂರು ದಿನಗಳ ಕಾಲ “ವೆಂಚುರಾ 2.0” ವಾರ್ಷಿಕೋತ್ಸವವನ್ನು ಆಯೋಜಿಸಲಾಗಿತ್ತು. ಏಪ್ರಿಲ್ 9 ರಂದು “ಬಾಲಿವುಡ್ ಡೇ” ಮೂಲಕ ಚಾಲನೆ ನೀಡಲಾಯಿತಲ್ಲದೆ, ಏಪ್ರಿಲ್ 10 ರಂದು “ಟ್ರೆಡಿಶನಲ್ ಡೇ” ಆಚರಿಸಿ ವಿವಿಧ ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮಕ್ಕೆ ಎಂ.ಎಂ ಸಮೂಹ ಸಂಸ್ಥೆಗಳ ಉಪಾಧ್ಯಕ್ಷರಾದ ದಿನಕರರಾವ್ ಎಂ. ಓವುಳಕರ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಪ್ರಾಂಶುಪಾಲರಾದ ಆರ್.ಎಸ್. ಸೂರ್ಯವಂಶಿ ಅವರು ಕಾಲೇಜಿನ ವಾರ್ಷಿಕ ವರದಿ ವಾಚಿಸಿದರು.

ಶೈಕ್ಷಣಿಕ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಹಾಗೂ ನಗದು ಬಹುಮಾನ ವಿತರಿಸಲಾಯಿತು. ಅಂತಿಮವಾಗಿ ನಡೆದ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ರಾಂಪ್ ವಾಕ್ ವಿಭಾಗದಲ್ಲಿ ಸಿ.ಎಸ್ ವಿಭಾಗ ಪ್ರಥಮ ಹಾಗೂ ಇ.ಸಿ ವಿಭಾಗ ದ್ವಿತೀಯ ಸ್ಥಾನ ಪಡೆದು ರೋಲಿಂಗ್ ಟ್ರೋಫಿ ಮುಡಿಗೇರಿಸಿಕೊಂಡವು. ಡಿಜೆ ಸಂಗೀತದ ಅಬ್ಬರದೊಂದಿಗೆ ವಿದ್ಯಾರ್ಥಿಗಳು ಕುಣಿದು ಕುಪ್ಪಳಿಸುವ ಮೂಲಕ ಸಂಭ್ರಮಿಸಿದರು.ಕಾರ್ಯಕ್ರಮದಲ್ಲಿ ಉಪಪ್ರಾಂಶುಪಾಲೆ ಆಶಾ ತೋರ್ವಿ, ಸಾಂಸ್ಕೃತಿಕ ಸಂಯೋಜಕರಾದ ಶೈಲಾ ಎಂ, ವಿದ್ಯಾ ವಿ. ಪಾಟೀಲ್, ಆರ್.ಎನ್. ಮೋಟಾರ್, ಕ್ರೀಡಾ ಸಂಯೋಜಕ ಸಚಿನ್ ವಾಂಗೀಕರ್, ಜಿ.ಎಸ್. ಸಾರ್ಥಕ್ ಬಾಗಲ್, ಝೋಹಾ ಮುಜಾವರ್ ಹಾಗೂ ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು. ವಿಜ್ಞಾನ ವಿಭಾಗದ ಮುಖ್ಯಸ್ಥೆ ವಿದ್ಯಾ ಪಾಟೀಲ್ ಕಾರ್ಯಕ್ರಮ ನಿರೂಪಿಸಿದರು. ಮಾನ್ಸಿ ಅರಳಿಮಟ್ಟಿ ವಂದಿಸಿದರು. ಪಿ.ಎಸ್. ಪಿಂಗಟ್, ಶೋಧನ್ ಚೌಗುಲೆ ಹಾಗೂ ದೀಪಕ್ ತರಳೆ ಅವರು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದರು.

Tags:

error: Content is protected !!