ಬೆಳಗಾವಿಯ ಕುಮಾರಸ್ವಾಮಿ ಬಡಾವಣೆಯಲ್ಲಿ ನಸುಕಿನ ಜಾವ ಕಳ್ಳರು ಪ್ರತ್ಯಕ್ಷವಾಗಿದ್ದಾರೆ. ಮನೆಗಳ ಮುಂದೆ ಸಂಶಯಾಸ್ಪದವಾಗಿ ಓಡಾಡುತ್ತಾ, ಕಳ್ಳತನಕ್ಕೆ ಹೊಂಚು ಹಾಕುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಬಡಾವಣೆಯ ನಿವಾಸಿಗಳು ಈಗ ಆತಂಕದಲ್ಲಿ ರಾತ್ರಿ ಕಳೆಯುವಂತಾಗಿದೆ.
ಬೆಳಗಾವಿಯ ಕುಮಾರಸ್ವಾಮಿ ಬಡಾವಣೆಯಲ್ಲಿ ಭಾನುವಾರ ಬೆಳಗಿನ ಜಾವ ಸುಮಾರು 3:36 ಗಂಟೆಗೆ ಕಳ್ಳರ ತಂಡವೊಂದು ಪ್ರತ್ಯಕ್ಷವಾಗಿದೆ. ಬಡಾವಣೆಯ ಪ್ರತಿಯೊಂದು ಮನೆಯ ಬಳಿ ನಿಂತು, ಕಿಟಕಿ ಮತ್ತು ಬಾಗಿಲುಗಳ ಮೂಲಕ ಒಳಗೆ ಇಣುಕಿ ನೋಡುತ್ತಿರುವ ದೃಶ್ಯಗಳು ಸ್ಥಳೀಯ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸ್ಪಷ್ಟವಾಗಿ ಸೆರೆಯಾಗಿವೆ. ಕಳ್ಳತನದ ಉದ್ದೇಶದಿಂದಲೇ ಹೊಂಚು ಹಾಕುತ್ತಿದ್ದ ಈ ಖದೀಮರು, ಮನೆಯ ಪರಿಸ್ಥಿತಿಯನ್ನು ಅವಲೋಕಿಸುತ್ತಿರುವುದು ಕಂಡುಬಂದಿದೆ. ಸಿಸಿಟಿವಿ ದೃಶ್ಯಗಳು ಹೊರಬೀಳುತ್ತಿದ್ದಂತೆ ಎಚ್ಚೆತ್ತ ನಿವಾಸಿಗಳು, ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ರಾತ್ರಿ ಗಸ್ತು ಹೆಚ್ಚಿಸುವಂತೆ ಆಗ್ರಹಿಸಿದ್ದಾರೆ.

