ಸದ್ಯ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ‘ಮಹಾ ಕುದುರೆ ವ್ಯಾಪಾರ’ ಭರದಿಂದ ಸಾಗಿದೆ. ಆಡಳಿತ ನಡೆಸುವ ಪರಿಸ್ಥಿತಿ ಕಾಂಗ್ರೆಸ್ಸಿನವರಲ್ಲಿಲ್ಲ ಎಂದು ಯತ್ನಾಳ್ ಲೇವಡಿ ಮಾಡಿದರು.

ಇಂದು ಮಾಧ್ಯಮಗಾರರೊಂದಿಗೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು, ಬಾಗಲಕೋಟೆಯಲ್ಲಿ ಶಿವಕುಮಾರ್ ಮತ್ತು ದಾವಣಗೆರೆಯಲ್ಲಿ ಸಿದ್ಧರಾಮಯ್ಯ ಅವರನ್ನು ಸೋಲಿಸಬೇಕೆನ್ನುತ್ತಿದ್ದಾರೆ. ಸರಿಯಾಗಿ ಆಡಳಿತ ಮಾಡುವ ಪರಿಸ್ಥಿತಿ ಕಾಂಗ್ರೆಸ್ಸಿನಲ್ಲಿಲ್ಲ. ದೆಹಲಿಗೆ ತೆರಳಿ ಹಣ ನೀಡಿ ಮಂತ್ರಿಯಾಗುವ ಸ್ಥಿತಿ ಉಂಟಾಗಿದೆ ಎನ್ನುತ್ತ, ಎಲ್ಲ ಪಕ್ಷದಲ್ಲಿ ಅಧ್ಯಕ್ಷರಾದವರು ಮೇಲಿನವರನ್ನು ಮ್ಯಾನೇಜ್ ಮಾಡುತ್ತ ಸೂರ್ಯ ಚಂದ್ರರಿರುವ ತನಕ ನಾವೇ ಅಧ್ಯಕ್ಷರು ಎನ್ನುತ್ತಾರೆ ಎಂದರು. ಮುಖ್ಯಮಂತ್ರಿ ಬದಲಾವಣೆ ಮಹಾಕುದುರೆ ವ್ಯಾಪಾರ ಶುರುವಾಗಿದೆ ಎಂದರು.
ನವರಸಪುರ ಉತ್ಸವಕ್ಕೆ ಸಂಬಂಧಿಸಿದಂತೆ ಯಾವುದೇ ಅನ್ಯ ಕೋಮಿನ ಹೆಸರಿಲ್ಲ. ಇದಕ್ಕೆ ನಮ್ಮ ವಿರೋಧವಿಲ್ಲ. ನಾವು ಬರಲಿ ಬಿಡಲಿ ಎನ್ನುವ ಅಧಿಕಾರಿ ಎಂ.ಬಿ. ಪಾಟೀಲರಿಗಿಲ್ಲ. ನಾನು ಈ ಕ್ಷೇತ್ರದ ಶಾಸಕ. ಅಧಿಕಾರವಿದೆ ಸರ್ಕಾರವಿದೆ ಎಂದು ಎಂ.ಬಿ. ಪಾಟೀಲರು ಈ ರೀತಿ ಮಾತನಾಡುವುದು ಸರಿಯಲ್ಲ ಎಂದರು.
