ಚಿಕ್ಕೋಡಿ ತಾಲೂಕಿನ ಬಾಣಂತಿಕೋಡಿಯ ಬಾಣಂತಿದೇವಿಯ ಜಾತ್ರಾಮಹೋತ್ಸವ ವಿಜೃಂಭಣೆಯಿಂದ ಜರುಗಿತು.

ಜಾತ್ರಾಮಹೋತ್ಸವ ಅಂಗವಾಗಿ ಶ್ರೀ ಬಾಣಂತಿದೇವಿಗೆ ವಿಶೇಷ ಪೂಜೆ,ಪುನುಸ್ಕಾರ,ಅಲಂಕಾರ,ಉಡಿತುಂಬುವ ಮೂಲಕ ಜಾತ್ರೆಯು ಪ್ರಾರಂಭವಾಯಿತು.ಬಾಣಂತಿದೇವಿಯ ಮೇರವಣಿಗೆಯು ಹಾಗೂ ಸುಮಲಿಂಗರಿಯವರ ಕುಂಭ,ಪಲ್ಲಕಿಯ ಮೇರವಣಿಗೆಯು ಮಹಾದ್ವಾರದಿಂದ ದೇವಸ್ಥಾನದವರೆಗೆ ಸಕಲವಾದ್ಯಮೇಳದೊಂದಿಗೆ ವೈಭವಪೂರಕವಾಗಿ ಜರುಗಿತು.ಜಾತ್ರಾಮಹೋತ್ಸವ ಹಿನ್ನೆಲೆಯಲ್ಲಿ ಭಕ್ತರು ಬಾಣಂತಿದೇವಿಯ ದರ್ಶನ ಪಡೆದು ಪಾವನರಾದರು.ನಂತರ ಭಕ್ತರಿಗೆ ಮಹಾಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.ಭಕ್ತರು ಅತ್ಯಂತ ಶಾಂತಿ,ಸುವ್ಯವಸ್ಥೆಯಿಂದ,ಸರದಿ ಸಾಲಿನಲ್ಲಿ ನಿಂತು ಮಹಾಪ್ರಸಾದ ಸೇವಿಸಿದರು.ಸಾಯಂಕಾಲ ಮನರಂಜನಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಸಂತೋಷ ಪೂಜೇರಿ,ಸಂಜು ಗುಡಸೆ,ಸಿದ್ದಪ್ಪ ಮುಂಡೆ,ಸತ್ಯಪ್ಪ ನಾಗರಾಳೆ,ಸಂಜೀವ ಗುಡಸೇ,ಪ್ರಕಾಶ ಗೋಪಾಲಗೋಳ,ಸಂಜು ಹುಬ್ಬನ್ನವರ,ಪ್ರಕಾಶ ಪೂಜೇರಿ,ಸುಭಾಷ ಪೂಜೇರಿ, ಗಂಗಾಧರ ಕರ್ನುರೆ,ನಾರಾಯಣ ಹುಬ್ಬನ್ನವರ,ಎಕನಾಥ ಗೋಪಾಲಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
