Hukkeri

ಹುಕ್ಕೇರಿ : ಪತ್ರಿ ಬಸವೇಶ್ವರ ಬೇಡಿದ ವರ ಕೊಡುವ ದೇವರು – ಪಾಪು ಘಸ್ತಿ

Share

ಹುಕ್ಕೇರಿ ನಗರದ ಹೊರವಲಯದ ಭಾವಿಯಲ್ಲಿ ಪತ್ರಿ ಬಸವೇಶ್ವರ ದೇವಸ್ಥಾನ ಬೇಡಿದ ವರ ಕೋಡುವ ಕಲ್ಪವೃಕ್ಷವಾಗಿದೆ ಎಂದು ಪಾಪು ಘಸ್ತಿ ಹೇಳಿದರು.

ಹುಕ್ಕೇರಿ ನಗರದ ಚಿಕ್ಕೋಡಿ ರಸ್ತೆಗೆ ಹೊಂದಿಕೊಂಡಿರುವ ನಿರ್ಜನ‌ ಪ್ರದೇಶದಲ್ಲಿಯ ಪಾಳು ಬಿದ್ದ ಭಾವಿಯಲ್ಲಿ ಈಶ್ವರ ಲಿಂಗ ಮತ್ತು ನಂದಿ ವಿಗ್ರಹಗಳು ಪತ್ತೆಯಾಗಿದ್ದು ಅವುಗಳಿಗೆ ಸುತ್ತಲಿನ ಜಮಿನಿನ ಮಾಲಿಕರು ಮತ್ತು ಸಾರ್ವಜನಿಕರು ಪೂಜೆ ಮಾಡುವದರೊಂದಿಗೆ ಪ್ರತಿ ವರ್ಷ ಜಾತ್ರೆ ಮಾಡುವ ಮೂಲಕ ಭಕ್ತಿ ಮೆರೆದಿದ್ದಾರೆ.
ಈ ಕುರಿತು ಮಾದ್ಯಮಗಳೊಂದಿಗೆ ಮಾತನಾಡಿದ ರಾಚಯ್ಯಾ ಕರಗಾವಿಮಠ ವಂಟಮೂರಿ ದೇಸಾಯಿಯವರ ಕಾಲದಲ್ಲಿ ನಿರ್ಮಾಣಗೊಂಡ ಈ ಭಾವಿಯಲ್ಲಿ ಲಿಂಗ, ನಂದಿ ,ಕರೆಮ್ಮಾ ಮತ್ತು ಸರ್ಪ ದೇವತೆಗಳು ಇದ್ದ ಬಗ್ಗೆ ಪ್ರಾಚೀನ ಕಾಲದ ಕುರುಹುಗಳಿವೆ ಅವುಗಳಿಗೆ ಪ್ರತಿ ವರ್ಷ ಯುಗಾದಿ ನಂತರ ಭಕ್ತರು ಜಾತ್ರೆ ಮಾಡುತ್ತಾರೆ ಎಂದರು
ಇನ್ನೋಬ್ಬ ಭಕ್ತ ಪಾಪು ಘಸ್ತಿ ಮಾತನಾಡಿ ಪ್ರತಿವರ್ಷ ಸುತ್ತಮುತ್ತಲ್ಲಿನ ಭಕ್ತರ ಸಹಕಾರದಿಂದ ದೇಣಿಗೆ ಪಡೆದು ಜಾತ್ರೆ ಮಾಡಿ ದಾಸೋಹ ಮಾಡಲಾಗುತ್ತದೆ, ದೇವಸ್ಥಾನ ಅಭಿವೃದ್ಧಿಗೆ ದಾನಿಗಳು ಮುಂದೆ ಬಂದರೆ ಜಿರ್ಣೋದ್ದಾರೆ ಮಾಡಲಾಗುವದು ಎಂದರು

ಈ ಸಂದರ್ಭದಲ್ಲಿ ಪಾಪು ಗಸ್ತಿ, ಸುನಿಲ ಝೊಂಡ, ಸುನಿಲ ಶಿಂದೆ, ಪ್ರಕಾಶ ಗುಡಸಿ, ಪಾಪು ಗಸ್ತಿ, ರಂಗಸ್ವಾಮಿ ಸಿ ಎನ್ , ಅಲ್ತಾಫ ಇನಾಮದಾರ, ಮಲ್ಲಿಕಾರ್ಜುನ ಬೊಗೋಣಿ, ಸುನಿಲ ಲಾಳಗೆ ಮೊದಲಾದವರು ಉಪಸ್ಥಿತರಿದ್ದರು.
ನಂತರ ಮಹಾಪ್ರಸಾದ ಜರುಗಿತು.

Tags:

error: Content is protected !!