ಪಿಯುಸಿ ದ್ವಿತೀಯ ವರ್ಷದ ಪರೀಕ್ಷೆಯ ಫಲಿತಾಂಶವು ಗುರುವಾರ ಮಧ್ಯಾಹ್ನ ಪ್ರಕಟವಾಗಿದ್ದು, ಇದರಲ್ಲಿ ಬೆಳಗಾವಿಯ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದಾರೆ. ಬೆಳಗಾವಿಯ ಅಂಗಡಿ ಕಾಲೇಜಿನ ವಿದ್ಯಾರ್ಥಿನಿ ಕುಮಾರಿ *ಸಾಹಿಬಾ ಖಾಜಾಮಿಯಾ ಸನದಿ* ವಾಣಿಜ್ಯ ವಿಭಾಗದಲ್ಲಿ *ಶೇ. 99 ರಷ್ಟು* ಅಂಕಗಳನ್ನು ಪಡೆಯುವ ಮೂಲಕ ಅಭೂತಪೂರ್ವ ಯಶಸ್ಸು ಸಾಧಿಸಿದ್ದಾಳೆ.

ಉಚಗಾಂವ್ನಂತಹ ಗ್ರಾಮೀಣ ಭಾಗದ ನಿವಾಸಿಯಾದ ಸಾಹಿಬಾ, ಈ ಹಿಂದೆಯೂ ಸಹ ತನ್ನ ಪ್ರತಿಭೆಯನ್ನು ಪ್ರದರ್ಶಿಸಿದ್ದಳು. ಈಗ ದ್ವಿತೀಯ ಪಿಯುಸಿಯಂತಹ ಪ್ರಮುಖ ಪರೀಕ್ಷೆಯಲ್ಲಿ ಈ ಸಾಧನೆ ಮಾಡಿದ್ದಾಳೆ. ಇವಳು ಒಟ್ಟು *600 ಅಂಕಗಳಿಗೆ 595 (99.16%)* ಅಂಕಗಳನ್ನು ಗಳಿಸಿದ್ದಾಳೆ. ಈ ಹಿನ್ನೆಲೆಯಲ್ಲಿ ಅವಳ ಮೇಲೆ ಅಭಿನಂದನೆಗಳ ಮಹಾಪೂರವೇ ಹರಿಯುತ್ತಿದೆ.
