Hukkeri

ಹುಕ್ಕೇರಿ : ಗ್ರಾಮಿಣ ಭಾಗದ ವಿದ್ಯಾರ್ಥಿಗಳಿಗೆ ಉನ್ನತ ಮಟ್ಟದ ಶಿಕ್ಷಣ ಲಭಿಸಲಿ – ಡಾ, ಆನಂದ ಗೋಸಾವಿ ಮಹಾರಾಜ.

Share

ಹುಕ್ಕೇರಿ ತಾಲೂಕಿನ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉನ್ನತ ಮಟ್ಟದ ಶಿಕ್ಷಣಕ್ಕಾಗಿ ಸಿ ಎಸ್ ತುಬಚಿ ಶಿಕ್ಷಣ ಸಂಸ್ಥೆಯ ಕಾರ್ಯ ಶ್ಲಾಘನಿಯ ವಾಗಿದೆ ಎಂದು ಯಮಕನಮರ್ಡಿ ಹರಿ ಮಂದಿರದ ಡಾ, ಆನಂದ ಗೋಸಾಬಿ ಮಹಾರಾಜರು ಹೇಳಿದರು.

ಹುಕ್ಕೇರಿ ನಗರದ ಸಿ ಎಸ್ ತುಬಚಿ ಶಿಕ್ಷಣ ಸಂಸ್ಥೆಯಲ್ಲಿ ಸಾಯನ್ಸ ಪದವಿ ಪೂರ್ವ ಮಹಾವಿದ್ಯಾಲಯ ಮತ್ತು ಸಿ ಇಟಿ, ನೀಟ್ ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವ ತಯಾರಿ ಕುರಿತ ನೂತನ ಕಾಲೇಜ ಕಟ್ಟಡ ಮತ್ತು ಪ್ರಯೋಗಾಲಯವನ್ನು ಯಮಕನಮರ್ಡಿ ಹರಿಮಂದಿರದ ಮಹಾರಾಜರಾದ ಡಾ, ಆದನಂದ ಗೋಸಾವಿ ಘನ ಹೋಮ ಮಾಡಿ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ನಂತರ ಮಾದ್ಯಮಗಳೊಂದಿಗೆ ಮಾತನಾಡಿದ ಮಹಾರಾಜರು ಭಾರತ ದೇಶದಲ್ಲಿ ಸಾಕ್ಷರತೆ ಇನ್ನೂ ಹೆಚ್ಚಾಗ ಬೇಕಾದರೆ ಗ್ರಾಮಿಣ ಭಾಗದಲ್ಲಿ ಉನ್ನತ ಮಟ್ಟದ ಶಿಕ್ಷಣ ಸಂಸ್ಥೆಗಳು ಬೆಳೆಯಬೇಕು ಇಂದು ಹುಕ್ಕೇರಿಯ ಎಸ್ ಕೆ ಮಹಾವಿದ್ಯಾಲಯ ಆಧುನಿಕ ಪರಿಕಲ್ಪನೆ ಯೊಂದಿಗೆ ಈ ಭಾಗದ ವಿದ್ಯಾರ್ಥಿಗಳಿಗೆ ಕಲ್ಪವೃಕ್ಷ ವಾಗಿದೆ ಎಂದರು.

ವೇದಿಕೆ ಮೇಲೆ ಸಿ ಎಸ್ ತುಬಚಿ ಶಿಕ್ಷಣ ಸಂಸ್ಥೆಯ ಅದ್ಯಕ್ಷ ಅನಿಲ ಶೇಟ್ಟಿ, ಕಾರ್ಯದರ್ಶಿ ಪಿಂಟು ಶೇಟ್ಟಿ, ಸದಸ್ಯರಾದ ರಾಜು ಮುಚ್ಚಂಡಿ, ಡಾ, ಮಂಗಲಾ ಹಂದಿಗುಂದ, ವಾಗ್ದೇವಿ ತಾರಳಿ ಉಪಸ್ಥಿತರಿದ್ದರು.
ನಂತರ ಮಾದ್ಯಮಗಳೊಂದಿಗೆ ಮಾತನಾಡಿದ ಸಂಸ್ಥೆಯ ಅದ್ಯಕ್ಷ ಪಿಂಟೂ ಶೇಟ್ಟಿ ನಮ್ಮವಾಡಳಿತ ಮಂಡಳಿಯ ಬಹುದಿನಗಳ ಕನಸು ಇಂದು ಸಾಕಾರ ಗೋಳ್ಳುತ್ತಿದೆ ಕಡಿಮೆ ವೇಚ್ಚದಲ್ಲಿ ಉನ್ನತ ಶಿಕ್ಷಣ ನೀಡುವದ ರೊಂದಿಗೆ ನುರಿತ ಶಿಕ್ಷಕರಿಂದ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ನೀಡಲಾಗುವದು ಕಾರಣ ಈ ಭಾಗದ ವಿದ್ಯಾರ್ಥಿಗಳು ಇದರ ಲಾಭ ಪಡೆಯಬೇಕು ಎಂದರು

ಸದಸ್ಯೆ ಮಂಗಲಾ ಹಂದಿಗುಂದ ಮಾತನಾಡಿ ಈ ಭಾಗದ ವಿದ್ಯಾರ್ಥಿಗಳು ಮಂಗಳೂರು, ಕಾರ್ಕಳ, ಮೂಡಬಿದ್ರೆ ನಗರಗಳಿಗೆ ಹೋಗಿ ಶಿಕ್ಷಣ ಪಡೆಯಯತ್ತಾರೆ ಮುಂಬರುವ ದಿನಗಳಲ್ಲಿ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಸುರಕ್ಷೀತ ವಸತಿ ನಿಲಯಗಳನ್ನು ಸ್ಥಾಪಿಸಿ ಎಲ್ಲರಿಗೂ ಶಿಕ್ಷಣ ಲಭಿಸಲು ಪ್ರತ್ನಿಸಲಾಗುತ್ತಿದೆ ಎಂದರು
ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಸದಸ್ಯರಾದ ಓಂಕಾರ ಹೇದ್ದೂರಶೇಟ್ಟಿ, ಸಿ ಆಯ್ ಗಂಧ, ಮಹಾಂತೇಶ ವಸ್ತದ, ಸುರೇಶ ತಾರಳಿ, ಸಂಜಯ ಅಡಿಕೆ, ಮಹಾಂತೇಶ ಅಥಣಿ, ಮಹಾಲಿಂಗಪ್ಪಾ ಗಂಧ, ಸೋಮ ಪರಕನಟ್ಟಿ, ಚನ್ನಪ್ಪಾ ಗಜಬರ, ದಯಾನಂದ ವಸ್ತ್ರದ ಮೊದಲಾದವರು ಉಪಸ್ಥಿತರಿದ್ದರು.

Tags:

error: Content is protected !!