ತಾಲೂಕಿನ ಯಡೂರಟೇಕ, ಯಡೂರವಾಡಿ ಹಾಗೂ ಸಿದ್ದಾಪುರವಾಡಿ ಗ್ರಾಮಗಳಲ್ಲಿ ದೇವಸ್ಥಾನ ಕಮೀಟಿಯ ಕಟ್ಟಡ ಕಾಮಗಾರಿಗಳಿಗೆ ದೇವಸ್ಥಾನಗಳ ಕಮಿಟಿ ಸದಸ್ಯರು ಪೂಜೆ ಸಲ್ಲಿಸುವುದರ ಮೂಲಕ ಚಾಲನೆ ನೀಡಿದರು.


ದೇವಸ್ಥಾನಗಳ ಕಟ್ಟಡ ನಿರ್ಮಿಸಲು ಅನುದಾನ ಕೋರಿ ಶಾಸಕ ಗಣೇಶ ಹುಕ್ಕೇರಿ ಹಾಗೂ ನವದೆಹಲಿ ವಿಶೇಷ ಪ್ರತಿನಿಧಿ ಹಾಗೂ ವಿ.ಪ ಸದ್ಯಸ ಪ್ರಕಾಶ ಹುಕ್ಕೇರಿ ವಿನಂತಿಸಿಕೊಂಡಾಗ ಯಡೂರಟೇಕ ಗ್ರಾಮದ ಸಪ್ತ ಮಾತೃಕೆ ದೇವಸ್ಥಾನ ಕಟ್ಟಡ ಕಾಮಗಾರಿಗೆ ಈ ಹಿಂದೇ 2.50 ಲಕ್ಷರೂ ಹಾಗೂ 7 ಲಕ್ಷ ರೂ ಒಟ್ಟು 9.50 ಲಕ್ಷರೂ, ಯಡೂರವಾಡಿ ಗ್ರಾಮದ ಲಕ್ಷ್ಮೀದೇವಿ ದೇವಸ್ಥಾನ (ಡೋಣಿ ತೋಟ) ಕಟ್ಟಡ ಕಾಮಗಾರಿಗೆ ಈ ಹಿಂದೇ 10 ಲಕ್ಷ ರೂ ಹಾಗೂ ರೂ.7.00 ಲಕ್ಷ ಒಟ್ಟು 17.00 ಲಕ್ಷರೂ, ಸಿದ್ದಾಪೂರವಾಡಿ ಗ್ರಾಮದ ಹನುಮಾನ ದೇವಸ್ಥಾನ ಕಟ್ಟಡ ಕಾಮಗಾರಿಗೆ 20 ಲಕ್ಷರೂ ಗಳನ್ನು ಹುಕ್ಕೇರಿ ಬಂಧುಗಳು ಅನುದಾನ ನೀಡಿ ಸಹಕರಿಸಿದ್ದರಿಂದ ಕಾಮಗಾರಿಗೆ ಚಾಲನೆ ನೀಡಲಾಯಿತು.

ಯಡೂರಟೇಕ ಗ್ರಾಮದ ದಾದಾ ನರವಾಡೆ, ಪೋಪಟ ಕಿಲ್ಲೇದಾರ, ಮಹೇಶ ಬೆಳವಿ, ವಿಜಯ ತಾವದಾರೆ, ಮಹೇಶ ಕಾಗವಾಡೆ, ಗಜರಾಜ ಕರೋಶಿ, ತೇಜು ಪಾಟೀಲ, ವಿಜಯ ಜಾಧವ, ಯಾಶಿನ ನದಾಪ, ಯಡೂರವಾಡಿ ಗ್ರಾಮದ ಅಜೀತ ಕಿಲ್ಲೇದಾರ, ಕಿಟು ಯಳವಂತೆ, ಕುಮಾರ ಪಿರಾಜಿ, ಬಾಳು ಧನಗರ, ವಿಶ್ವನಾಥ ಮಾನೆ ಹಾಗೂ ಅಂಕಲಿ-ಸಿದ್ದಾಪೂರವಾಡಿ ಗ್ರಾಮದ ರಂಜೀತ ಶಿರಶೇಟ, ಅಭಿಷೇಕ ಕೋರೆ, ಸುನೀಲ ಕೋರೆ, ಪಾಂಡು ವಡ್ಡರ, ಪಾಪು ಕಿಳ್ಳೆಕತ್, ಅಶ್ವಥ ಶಿಥೋಳಿ, ಸಂತೋಷ ಮಠಪತಿ, ರಾಜು ಪಾಟೀಲ, ಅಜೀತ ಉಮರಾಣಿ ಹಾಗೂ ಕಲ್ಲಪ್ಪ ಉಮರಾಣೆ ಹಾಗೂ ದೇವಸ್ಥಾನ ಕಮೀಟಿ ಗ್ರಾಮಸ್ಥರು ಉಪಸ್ಥಿತರಿದ್ದರು.
