BELAGAVI

ಬೆಳಗಾವಿ ಭಕ್ತರಿಗೆ ಸೋಮನಾಥ ಜ್ಯೋತಿರ್ಲಿಂಗ ದರ್ಶನ ಭಾಗ್ಯ: ಏಪ್ರಿಲ್ 12 ರಿಂದ ಮೂರು ದಿನ ಸಂಚಾರ

Share

ಏ.12 ರಿಂದ 14ರವರೆಗೆ ಬೆಳಗಾವಿ ನಗರದಲ್ಲಿ ಸೋಮನಾಥ ಜ್ಯೋರ್ತಿಲಿಂಗ ಭಕ್ತರಿಗೆ ದರ್ಶನ ಕೊಡಲಿದೆ ಎಂದು ರವಿ ಶಂಕರ ಗುರೂಜಿ ಮಠದ ಮಹೇಶ್ ಕೇರಕರ್ ಹೇಳಿದರು.

ಶುಕ್ರವಾರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ನೂರಾರು ವರ್ಷಗಳ ಹಿಂದಿನ ಧಾರ್ಮಿಕ ಜ್ಯೋರ್ತಿಲಿಂಗ ಬೆಳಗಾವಿಯ ಭಕ್ತರಿಗೆ ದರ್ಶನ ಕೊಡಲು ಮೂರು ದಿನಗಳ ಕಾಲ ಸಂಚರಿಸಲಿದೆ. ಶಂಕರಾಚಾರ್ಯರು ರವಿ ಶಂಕರ ಗುರೂಜಿ ಅವರಿಗೆ ಜ್ಯೋರ್ತಿಲಿಂಗ ಸೇರಬೇಕು ಎಂಬ ಉಲ್ಲೇಖ ಮಾಡಿದ ಹಿನ್ನೆಲೆಯಲ್ಲಿ ಅರು ಇವರ ಬಳಿ ಬಂದಿದೆ ಎಂದರು.

ಇನ್ನು ಪ್ರವೀಣ್ ಶೇರಿ ಅವರು ಯಾರಿಗೆ ಸೋಮನಾಥಗೆ ಹೋಗಿ ಜ್ಯೋರ್ತಿಲಿಂಗ ನೋಡಲು ಸಾಧ್ಯವಾಗುವುದಿಲ್ಲವೋ ಅಂಥವರಿಗೆ ಜ್ಯೋರ್ತಿಲಿಂಗ ದರ್ಶನ ಮಾಡುವ ಉದ್ದೇಶದಿಂದ ರಾಜ್ಯದ ವಿವಿಧ ಕಡೆಗಳಲ್ಲಿ ಸಂಚರಿಸಲಿದೆ ಎಂದರು. ಏಪ್ರೀಲ್ 12 ರಂದು ಸೋಮವಾರ ಪೇಠ್, ಏಪ್ರೀಲ್ 13 ರಂದು ಕಪಿಲೇಶ್ವರ ಮಂದಿರ ಮತ್ತು ಸಂಜೆ ಮಿಲಿಟರಿ ಮಹಾದೇವ ಮಂದಿರ ಹಾಗೂ ರಾಮತೀರ್ಥನಗರದಲ್ಲಿ ಏಪ್ರೀಲ್ 14 ರಂದು ದರ್ಶನ ಪಡೆಯಬಹುದಾಗಿದೆ ಎಂದರು.

Tags:

error: Content is protected !!