ಬೆಳಗಾವಿಯ ಕೋನವಾಳ ಗಲ್ಲಿ ನಿವಾಸಿಗಳ ಪಾಲಿಗೆ ಪ್ರತಿ ಮಳೆಗಾಲವೂ ನರಕಸದೃಶವಾಗುತ್ತಿತ್ತು. ಶಿಥಿಲಗೊಂಡಿದ್ದ ಬ್ರಿಟಿಷ್ ಕಾಲದ ನಾಲೆಯ ಸಮಸ್ಯೆಗೆ ಈಗ ಶಾಸಕ ಆಸೀಫ್ ಸೇಠ್ ಅವರು ಪರಿಹಾರ ಒದಗಿಸಿದ್ದು, ಬರೋಬ್ಬರಿ 1 ಕೋಟಿ 80 ಲಕ್ಷ ರೂಪಾಯಿ ವೆಚ್ಚದಲ್ಲಿ ನಾಲೆಯ ಪುನಶ್ಚೇತನ ಕಾರ್ಯ ಆರಂಭವಾಗಿದೆ.


ಬೆಳಗಾವಿಯ ಕೋನವಾಳ ಗಲ್ಲಿಯ ನಿವಾಸಿಗಳ ಬಹುದಿನಗಳ ಬೇಡಿಕೆ ಈಡೇರಿಕೆಯಾಗಿದೆ. ಬ್ರಿಟಿಷ್ ಕಾಲದ ನಾಲೆಯ ಸಮಸ್ಯೆಗೆ ಈಗ ಶಾಸಕ ಆಸೀಫ್ ಸೇಠ್ ಅವರು ಪರಿಹಾರ ಒದಗಿಸಿದ್ದು, ಬರೋಬ್ಬರಿ 1 ಕೋಟಿ 80 ಲಕ್ಷ ರೂಪಾಯಿ ವೆಚ್ಚದಲ್ಲಿ ನಾಲೆಯ ಪುನಶ್ಚೇತನ ಕಾಮಗಾರಿಗೆ ಇಂದು ಚಾಲನೆಯನ್ನು ನೀಡಲಾಯಿತು.
ಬೆಳಗಾವಿಯ ಕೋನವಾಳ ಗಲ್ಲಿಯ ನಾಲೆಯೂ 252 ಮೀಟರ್ ಉದ್ದವಾಗಿದ್ದು, 1890 ರಲ್ಲಿ ಇದನ್ನು ನಿರ್ಮಿಸಲಾಗಿದೆ. ನಾಲೆಯೂ ಶಿಥಿಲಾವಸ್ಥೆಗೆ ತಲುಪಿದೆ. 1 ಕೋಟಿ 80 ಲಕ್ಷದ ಅನುದಾನದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಪರಿಷತ್ ಸಭೆಯಲ್ಲಿ ನಗರಸೇವಕರು ನಾಲೆಯ ಸಮಸ್ಯೆಯನ್ನು ಗಮನ ಸೆಳೆದಾಗ ಮಹಾಪಾಲಿಕೆಯಲ್ಲಿ ಇಷ್ಟು ಅನುದಾನವಿಲ್ಲದ ಕಾರಣ ಶಾಸಕರ ಅನುದಾನದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳುವ ವಿಶ್ವಾಸವನ್ನು ವ್ಯಕ್ತಪಡಿಸಲಾಗಿತ್ತು. ಅದರಂತೆ, ಅಭಿವೃದ್ದಿಯ ವಿಷಯದಲ್ಲಿ ಯಾವುದೇ ಬೇಧಭಾವವಿಲ್ಲದೇ ಜನಹಿತದಲ್ಲಿ ಈ ಕಾಮಗಾರಿಯನ್ನು ನೆರವೇರಿಸಲಾಗುತ್ತಿದೆ ಎಂದರು.
ಬೆಳಗಾವಿಯ ಕೋನವಾಳ ಗಲ್ಲಿಯಲ್ಲಿನ ನಾಲೆಯ ಸಮಸ್ಯೆ ಪ್ರತಿ ಮಳೆಗಾಲದಲ್ಲಿ ಹೆಚ್ಚಾಗುತ್ತಿತ್ತು. ಇದನ್ನ ನಗರಸೇವಕರಾದ ನಾವು ಪರಿಷತ್ ಸಭೆಯಲ್ಲಿ ಮಂಡಿಸಿದಾಗ ಉತ್ತರ ವಿಧಾನಸಭಾ ಮತಕ್ಷೇತ್ರದ ಶಾಸಕ ಆಸೀಫ್ ಸೇಠ್ ಅವರು ಅಭಿವೃದ್ಧಿ ಮಾಡುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು. ಅದರಂತೆ ಇಂದು ನಾಲೆಯ ಅಭಿವೃದ್ಧಿ ಕಾಮಗಾರಿಯನ್ನು ಕೈಗೆತ್ತಿಕೊಂಡ ಶಾಸಕರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆಂದು ಆಡಳಿತ ಪಕ್ಷದ ನಾಯಕ ಮತ್ತು ನಗರಸೇವಕ ಸಂತೋಷ್ ಪಡಣೇಕರ ಹೇಳಿದರು.
ಬೆಳಗಾವಿಯ ಕೋನವಾಳ ಗಲ್ಲಿಯಲ್ಲಿ ಮಳೆಗಾಲದಲ್ಲಿ ನಾಲೆಯೂ ತುಂಬಿ ಕೊಳಚೆ ನೀರು ಇಲ್ಲಿರುವ ಸ್ಥಳೀಯರ ಮನೆಗಳಿಗೆ ನುಗ್ಗುತ್ತಿತ್ತು. ಆದರೇ, ಶಾಸಕರು ಈಗ ಅದರ ಅಭಿವೃದ್ಧಿಗೆ ಮುಂದಾಗಿದ್ದು ಸಂತಸ ತಂದಿದೆ. ಮಳೆಗಾಲದ ಪೂರ್ವದಲ್ಲೇ ಕಾಮಗಾರಿಯನ್ನು ಪೂರ್ಣಗೊಳಿಸಿ ಅನುಕೂಲ ಮಾಡಿಕೊಡಲಿ ಎಂದು ಸ್ಥಳೀಯ ಮಹಿಳೆಯರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸ್ಥಳೀಯ ನಾಗರೀಕರು, ಮಹಾನಗರ ಪಾಲಿಕೆಯ ಅಧಿಕಾರಿಗಳು ಸೇರಿದಂತೆ ಇನ್ನುಳಿದವರು ಭಾಗಿಯಾಗಿದ್ಧರು.
