2.00 ಕೋಟಿಗಳ ಅಂದಾಜು ವೆಚ್ಚಿನಲ್ಲಿ ಸಿದ್ದಾಪೂರವಾಡಿ ಗ್ರಾಮದಿಂದ ಯಕ್ಸಂಬಾ ಪಟ್ಟಣದವರೆಗಿನ ರಸ್ತೆ ಸುಧಾರಣೆ ಕಾಮಗಾರಿಗೆ ಇವತ್ತು ಕಾಂಗ್ರೆಸ್ ಮುಖಂಡರು ಚಾಲನೆಯನ್ನು ನೀಡಿದರು.
ನವದೆಹಲಿ ವಿಶೇಷ ಪ್ರತಿನಿಧಿ,ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ, ಶಾಸಕ ಗಣೇಶ ಪ್ರಕಾಶ ಹುಕ್ಕೇರಿ ಇವರ ವಿಶೇಷ ಪ್ರಯತ್ನದಿಂದ ಚಿಕ್ಕೋಡಿ-ಸದಲಗಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಯಕ್ಸಂಬಾ ಪಟ್ಟಣದಿಂದ ಸಿದ್ದಾಪೂರವಾಡಿ ಗ್ರಾಮದವರೆಗೆ (ಅಂಕಲಿ-ಚಿಕ್ಕೋಡಿ ರಸ್ತೆಯವರೆಗೆ) ಸುಮಾರು 5.2 ಕಿ.ಮೀವರೆಗೆ ರಸ್ತೆಯ ಖಡೀಕರಣ ಹಾಗೂ ಡಾಂಬರೀಕರಣ ಕಾಮಗಾರಿ ಕೈಗೊಳ್ಳಲು ರೂ. 2.00 ಕೋಟಿಗಳ ಅನುದಾನವು ಮಂಜೂರಾಗಿದ್ದು, ಸದರಿ ಕಾಮಗಾರಿಗೆ ಇವತ್ತು ಸ್ಥಳೀಯ ಕಾಂಗ್ರೆಸ್ ಮುಖಂಡರು ಹಾಗೂ ಗ್ರಾಮಸ್ತರಿದ್ದ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಅಂಕಲಿ ಗ್ರಾಮದ ಮುಖಂಡರಾದ ರಣಜೀತ ಶಿರಸೇಟ, ಪಾಂಡು ವಡ್ಡರ, ಸಿದ್ದಾಪೂರವಾಡಿ ಗ್ರಾಮದ ಅಶ್ವತ ಶಿತೋಳೆ, ಸಂತೋಷ ಮಠದ, ರಾಜಾರಾಮ ಪಾಟೀಲ, ಕಲ್ಲಪ್ಪಾ ಉಮರಾಣೆ, ಭಗವಂತ ಪಾಟೀಲ, ಕಾಡಾಪೂರ ಗ್ರಾಮದ ಡಾ. ಪ್ರಕಾಶ ರಾಚನ್ನವರ, ಭರತ ಕೋಳಿಕರ, ವಿವೇಕಾನಂದ ಕೋಳಿಕರ, ಅಲ್ಲಾಭಕ್ಷ ಮಾಲದಾರ, ಜಕ್ಕವ್ವಾ ದೇವಸ್ಥಾನ, ಏತ ನೀರಾವರಿ ಕಮೀಟಿಯವರು ಸಿದ್ದಾಪೂರವಾಡಿ, ಕಾಡಾಪೂರ, ಅಂಕಲಿ ಗ್ರಾಮಸ್ಥರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
