ಬೆಳಗಾವಿಯ ಸಾಂಸ್ಕೃತಿಕ ಮತ್ತು ಸಾಮಾಜಿಕ ಲೋಕದ ಧ್ರುವತಾರೆ ಅಸ್ತಮಿಸಿದೆ. ಬಸವ ಪಥದಲ್ಲಿ ನಡೆದು, ಅಕ್ಕನ ಬಳಗ ಹಾಗೂ ಲಿಂಗಾಯತ ಸಂಘಟನೆಗಳ ಮೂಲಕ ಮನೆಮಾತಾಗಿದ್ದ ಶರಣೆ ಶಾಂತಾ ಶ್ರೀಶೈಲಪ್ಪ ಸೊಬರದ ಅವರು ಇಂದು ನಿಧನರಾದರು.

ಬೆಳಗಾವಿಯ ಹಿರಿಯ ಸಮಾಜ ಸೇವಕಿ ಹಾಗೂ ಕರ್ನಾಟಕ ಸರ್ಕಾರದ ಪ್ರತಿಷ್ಠಿತ ‘ವಿಶ್ವೇಶ್ವರಯ್ಯ ಪ್ರಶಸ್ತಿ’ ಪುರಸ್ಕೃತೆ ಶಾಂತಾ ಶ್ರೀಶೈಲಪ್ಪ ಸೊಬರದ ಅವರು ಇಂದು ಮಧ್ಯಾನ್ಹ ಲಿಂಗೈಕ್ಯರಾಗಿದ್ದಾರೆ. ಮಹಾಲಕ್ಷ್ಮಿ ಮಹಿಳಾ ಮಂಡಳದ ಅಧ್ಯಕ್ಷರಾಗಿ, ಬಸವ ಸಮಿತಿಯ ಅಕ್ಕನ ಬಳಗದ ಸಾರಥಿಯಾಗಿ ಹಾಗೂ ಲಿಂಗಾಯತ ಸಂಘಟನೆಯ ಕಾರ್ಯದರ್ಶಿಯಾಗಿ ದಶಕಗಳ ಕಾಲ ಸಮಾಜಮುಖಿ ಸೇವೆ ಸಲ್ಲಿಸಿದ್ದ ಇವರು, ಶರಣ ಸಂಸ್ಕೃತಿಯ ಪ್ರಸಾರದಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಮೃತರು ಪುತ್ರಿ ಶರ್ಮಿಳಾ ರಾಜೇಂದ್ರ ತಾರಳಿ, ಪುತ್ರರಾದ ಸಿದ್ದಣ್ಣ ಸೊಬರದ, ಮಹಾಂತೇಶ ಸೊಬರದ, ಸೊಸೆಯಂದಿರಾದ ಮಮತಾ ಮತ್ತು ರಾಜೇಶ್ವರಿ ಹಾಗೂ ಮೊಮ್ಮಕ್ಕಳಾದ ಐಶ್ವರ್ಯ, ಸ್ನೇಹಾ, ಸೋಹನ, ಸಂಜನಾ, ಶ್ರೀಶೈಲ, ಅಮೋಘ ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಮೃತರ ಅಂತಿಮ ದರ್ಶನಕ್ಕಾಗಿ ಮಂಗಳವಾರ ಮಧ್ಯಾಹ್ನ 12:30ರವರೆಗೆ ಮಹಾಂತೇಶ ನಗರದ ಅವರ ಸ್ವಗೃಹದಲ್ಲಿ ವ್ಯವಸ್ಥೆ ಮಾಡಲಾಗಿದ್ದು, ಸಮಾಜದ ಗಣ್ಯರು ಹಾಗೂ ಅಭಿಮಾನಿಗಳು ತೀವ್ರ ಸಂತಾಪ ಸೂಚಿಸಿದ್ದಾರೆ.
