BELAGAVI

ಸಾಧನೆಯ ಶಿಖರಕ್ಕೇರಿದ ಬೆಳಗಾವಿ ತಾಲೂಕಿನ ಗ್ರಾಮೀಣ ಪ್ರತಿಭೆ: ಶಿವಸಾಗರ ಹಾಲಣ್ಣವರ ರಾಜ್ಯಕ್ಕೆ 3ನೇ ರ್ಯಾಂಕ್ ಪಡೆದ ಶಿವಸಾಗರ!

Share

ಬೆಳಗಾವಿ ಜಿಲ್ಲೆಯ ಕಾಕತಿ ಗ್ರಾಮದ ಪುಟ್ಟ ಮನೆಯೊಂದು ಇಂದು ಸಂಭ್ರಮದ ಕಡಲಲ್ಲಿ ತೇಲುತ್ತಿದೆ. ಹಿರಿಯರ ಆಶೀರ್ವಾದ ಹಾಗೂ ಕಠಿಣ ಪರಿಶ್ರಮವಿದ್ದರೆ ಸಾಧನೆಗೆ ಯಾವುದೂ ಅಡ್ಡಿಯಲ್ಲ ಎಂದು ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ಈ ಯುವಕ ಸಾಬೀತುಪಡಿಸಿದ್ದಾನೆ.
ಬೆಳಗಾವಿ ತಾಲೂಕಿನ ಕಾಕತಿ ಗ್ರಾಮದ ರಾಣಿ ಚೆನ್ನಮ್ಮ ರಸ್ತೆಯ ನಿವಾಸಿಯಾಗಿರುವ ಶಿವಸಾಗರ ಅಶೋಕ್ ಹಾಲಣ್ಣವರ, 2025-26ನೇ ಸಾಲಿನ ಪಿಯುಸಿ ವಿಜ್ಞಾನ ವಿಭಾಗದ ಫಲಿತಾಂಶದಲ್ಲಿ ಅಪ್ರತಿಮ ಸಾಧನೆ ಮಾಡಿದ್ದಾನೆ. 600 ಅಂಕಗಳಿಗೆ ಒಟ್ಟು 596 ಅಂಕಗಳನ್ನು ಪಡೆಯುವ ಮೂಲಕ ಶೇ. 99.33% ರಷ್ಟು ಸಾಧನೆಯೊಂದಿಗೆ ತನ್ನ ಕಾಲೇಜಿಗೆ ಪ್ರಥಮ ಸ್ಥಾನ ಹಾಗೂ ರಾಜ್ಯ ಮಟ್ಟದಲ್ಲಿ 3ನೇ ರ್ಯಾಂಕ್ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾನೆ. ತಂದೆ ಅಶೋಕ ಸಿದ್ದಪ್ಪಾ ಹಾಲಣ್ಣವರ ಹಾಗೂ ತಾಯಿ ಗಾಯಿತ್ರಿ ಅವರ ಪ್ರೋತ್ಸಾಹದಿಂದ ಈ ಮೈಲಿಗಲ್ಲು ಸ್ಥಾಪಿಸಿರುವ ಶಿವಸಾಗರ, ಭವಿಷ್ಯದಲ್ಲಿ ಎಂ.ಬಿ.ಬಿ.ಎಸ್ ಮುಗಿಸಿ ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಮಹದಾಸೆ ಹೊಂದಿದ್ದಾನೆ.

Tags:

error: Content is protected !!