Chikkodi

ಮಾಂಜರಿ-ಸೌಂದತ್ತಿ ಬ್ರಿಡ್ಜ್ ನಿರ್ಮಾಣಕ್ಕೆ 10 ಕೋಟಿ ರೂಪಾಯಿ ಅನುದಾನ ಮಂಜೂರು:ಪಾಂಡುರಂಗ ಮಾನೆ

Share

ಎಂಎಲ್ಸಿ ಪ್ರಕಾಶ ಹುಕ್ಕೇರಿ-ಶಾಸಕ ಗಣೇಶ ಹುಕ್ಕೇರಿ ಅವರ ಪ್ರಯತ್ನದಿಂದಾಗಿ ಮಾಂಜರಿ ಗ್ರಾಮವು ಸಂಪೂರ್ಣ ಅಭಿವೃದಿಗೊಂಡಿದ್ದು ಅವರ ಪ್ರಯತ್ನದಿಂದ ಮಾಂಜರಿ ಗ್ರಾಮದಲ್ಲಿ ಸುಮಾರು 20 ಕೋಟಿ ವೆಚ್ಚದ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಉಳಿದ ಕಾಮಗಾರಿಗಳನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದು ಮಾಜಿ ಜಿ.ಪಂ ಸದಸ್ಯ ಪಾಂಡುರಂಗ ‌ಮಾನೆ ಹೇಳಿದರು.

ಅವರು ಮಾಂಜರಿ ಗ್ರಾಮದಲ್ಲಿ ಎಂಎಲ್ಸಿ ಪ್ರಕಾಶ ಹುಕ್ಕೇರಿ,ಶಾಸಕ ಗಣೇಶ ಹುಕ್ಕೇರಿ ಅವರ ಪ್ರಯತ್ನದಿಂದ 50 ಲಕ್ಷ ಮೌಲ್ಯದ ರಸ್ತೆ ಅಭಿವೃದ್ಧಿ ಕಾಮಗಾರಿಗಳ ಚಾಲನೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಹಳೆಯ ಬಸ್ ನಿಲ್ದಾಣದಿಂದ ಕಾಡಸಿದ್ಧೇಶ್ವರ ದೇವಸ್ಥಾನಕ್ಕೆ ಸಂಪರ್ಕಿಸುವ ಕಾಂಕ್ರೀಟ್ ರಸ್ತೆಗಳ ನಿರ್ಮಾಣ ಹಾಗೂ ಶೇಡ್ಬಾಳೆ ಅಂಗಡಿಯಿಂದ ಕೋರೆ ಅವರ ನಿವಾಸದವರೆಗಿನ ಮಾರ್ಗವನ್ನು ಒಳಗೊಂಡಿದೆ.ಗ್ರಾಮ ಪಂಚಾಯತ ಕಚೇರಿಯಿಂದ ಪೂಜಾರಿ ಗಲ್ಲಿಯವರೆಗೆ ವಿಸ್ತರಿಸುವ ರಸ್ತೆಯನ್ನು ಸಹ ಒಳಗೊಂಡಿದೆ.ಮಾಂಜರಿ-ಸೌಂದತ್ತಿ ಸೇತುವೆ ನಿರ್ಮಾಣಕ್ಕೆ ₹10 ಕೋಟಿ ಮಂಜೂರಾಗಿದ್ದು ಈ ಎಲ್ಲಾ ಅಭಿವೃದ್ಧಿ ಕಾರ್ಯಗಳು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದರು.

ಬಳಿಕ ಸಿದ್ದಾರ್ಥ ಗಾಯಗೋಳ ಮಾತನಾಡಿದ ಗಣೇಶ ಹುಕ್ಕೇರಿ, ಪ್ರಕಾಶ ಹುಕ್ಕೇರಿಯವರು ಪ್ರಯತ್ನ ದಿಂದ ಈ ಕಾಮಗಾರಿಗಳು‌ ಮಂಜೂರಾಗಿದ್ದು,ಅವರಿಗೆ ಗ್ರಾಮಸ್ಥರ ಪರವಾಗಿ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.ಗುತ್ತಿಗೆದಾರರು ಒಳ್ಳೆಯ ಗುಣಮಟ್ಟದ ಕಾಮಗಾರಿಯನ್ನು ಮಾಡುವಂತೆ ಸಲಹೆಯನ್ನು ‌ನೀಡಿದರು.

ಈ ಸಂದರ್ಭದಲ್ಲಿ ಸಿದ್ಧಾರ್ಥ ಗಾಯ ಗೋಳ, ಅಪ್ಪಾ ಮುಲ್ಲಾ, ಶಕೀಲ ಮುಲ್ಲಾ, ಪೋಪಟ ಲಮಖಾನೆ,ಅಶೋಕ್ ಘಾಟಕೆ,ಪ್ರೇಮಚಂದ ಶೆಟ್ಟಿ, ಬಾಳು ಧಯಾರ್ಕರ್, ನಿತಿನ ಮಾಯಾನ್ನವರ,ಪಿಡಿಓ ವಿ.ಆರ್. ಪೋತದಾರ, ಶ್ರೀಕಾಂತ ಲಂಬುಗೋಳ, ಯುವರಾಜ ಘಾಟಕೆ, ಅರ್ಜುನ್ ವಾಡ್ಕರ, ಸಂದೀಪ್ ವಾಡ್ಕರ, ಸುಭಾಷ ತೋರಸೆ, ಶಿವಾನಂದ್ ಲೋಕುರೆ, ಕಿಟಲ್ ಯಳವಂತೆ, ಸಿದ್ಧಾರ್ಥ ಗಾಯಗೋಳ, ಲಕ್ಷ್ಮಣ ಮಾಯಾನ್ನವರ,ಥಳು ಕುರಣೆ,ಬಾಳು ಗಾಯಗೋಳ,ಕುಮಾರ ಮಾಯನ್ನವರ,ಸುರೇಶ ಪಾಟೋಳೇ,ಅಪ್ಪಾ ವಂಜೀರೆ,ಬಾಬಾಸಾಹೇಬ ಕೊಥಳಿ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags:

error: Content is protected !!