BELAGAVI

ಬೆಳಗಾವಿಯ ಐತಿಹಾಸಿಕ ಕಂಗ್ರಾಳಗಲ್ಲಿಯಲ್ಲಿ ರಸ್ತೆ ಅಭಿವೃದ್ಧಿಗೆ ನಗರಸೇವಕ ಶಂಕರ್ ಪಾಟೀಲರಿಂದ ಚಾಲನೆ

Share

ವಿಶ್ವರತ್ನ ಡಾ. ಬಾಬಾಸಾಹೇಬ್ ಅಂಬೇಡ್ಕರರು ಭೇಟಿ ನೀಡಿದ ಐತಿಹಾಸಿಕ ಬೆಳಗಾವಿಯ ಕಂಗ್ರಾಳಗಲ್ಲಿಯ ರಸ್ತೆ ಅಭಿವೃದ್ಧಿ ಕಾಮಗಾರಿಗೆ ನಗರಸೇವಕ ಶಂಕರ್ ಪಾಟೀಲ್ ಅವರು ಚಾಲನೆಯನ್ನು ನೀಡಿದರು.

ಬೆಳಗಾವಿಯ ಕಂಗ್ರಾಳ ಗಲ್ಲಿಯಲ್ಲಿ ಇಂದು ನಗರಸೇವಕ ಶಂಕರ್ ಪಾಟೀಲ್ ಅವರು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆಯನ್ನು ನೀಡಿದರು.

ಬೆಳಗಾವಿಯ ಕಂಗ್ರಾಳ ಗಲ್ಲಿಯೂ ಡಾ. ಬಾಬಾಸಾಹೇಬ್ ಅಂಬೇಡ್ಕರರು ಬಂದು ಹೋದ ಸ್ಥಳವಾಗಿದೆ. ಈ ಪ್ರದೇಶದಲ್ಲಿ ಏಪ್ರೀಲ್ 14 ಡಾ. ಅಂಬೇಡ್ಕರರ ಜಯಂತಿಯ ಮೊದಲೇ ಅಭಿವೃದ್ಧಿಯನ್ನು ಕೈಗೆತ್ತಿಕೊಂಡಿದ್ದು, ಪ್ರಶಂಸನೀಯವಾಗಿದೆ. ಈ ಭಾಗದ ಜನರ ಸಮಸ್ಯೆಗೆ ಸ್ಪಂದಿಸಿ ನಗರಸೇವಕರು ಮತ್ತು ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ದಲಿತ ಮುಖಂಡ ಮಲ್ಲೇಶ್ ಚೌಗಲೆ ಅವರು ಕೃತಜ್ಞತೆಗಳನ್ನು ಸಲ್ಲಿಸಿದರು.

Tags:

error: Content is protected !!