ವಿಜಯಪುರ ಮೂಲದವರಾದ ಹಾಗೂ ಬೆಳಗಾವಿಯ ವೈದ್ಯಕೀಯ ಕ್ಷೇತ್ರದ ಹಿರಿಯ ಕೊಂಡಿ ಡಾ. ಪರಪ್ಪ ಎಂ. ಬೆಲ್ಲದ್ (91) ಅವರು ಅಲ್ಪಕಾಲದ ಅನಾರೋಗ್ಯದಿಂದ ಇಂದು ನಿಧನರಾದರು.

ಬೆಳಗಾವಿಯ ಸದಾಶಿವ ನಗರದ ನಿವಾಸಿಯಾಗಿದ್ದ ಇವರು, ಸಿವಿಲ್ ಆಸ್ಪತ್ರೆ, ಜವಾಹರಲಾಲ್ ನೆಹರು ವೈದ್ಯಕೀಯ ಮಹಾವಿದ್ಯಾಲಯ (JNMC) ಹಾಗೂ ಕೆಎಲ್ಇ (KLE) ಆಸ್ಪತ್ರೆಯಲ್ಲಿ ಅರವಳಿಕೆ ವಿಭಾಗದ ಪ್ರಥಮ ಮುಖ್ಯಸ್ಥರಾಗಿ ಮತ್ತು ಹಿರಿಯ ಅರಿವಳಿಕೆ ತಜ್ಞರಾಗಿ ದಶಕಗಳ ಕಾಲ ಸೇವೆ ಸಲ್ಲಿಸಿದ್ದರು.
ಮೃತರ ಅಂತ್ಯಕ್ರಿಯೆಯು ಏಪ್ರಿಲ್ 14, 2026 ರಂದು ಮಧ್ಯಾಹ್ನ 2 ಗಂಟೆಗೆ ಲಕ್ಷ್ಮೀ ಕಾಂಪ್ಲೆಕ್ಸ್ ಪಕ್ಕದಲ್ಲಿರುವ ಲಿಂಗಾಯತ ಸ್ಮಶಾನ ಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
