BELAGAVI

ಬೆಳಗಾವಿ ಬಿಮ್ಸ್’ನಲ್ಲಿ ‘ಪ್ರೇರಣಾ ಜ್ಯೋತಿ-2026’: 109ನೇ ಬ್ಯಾಚ್ ನರ್ಸಿಂಗ್ ವಿದ್ಯಾರ್ಥಿಗಳಿಂದ ಪ್ರತಿಜ್ಞಾ ವಿಧಿ ಸ್ವೀಕಾರ

Share

ಬೆಳಗಾವಿಯ ಬಿಮ್ಸ್ ಆವರಣದ ಸರ್ಕಾರಿ ಶುಶ್ರೂಷಾ ಶಾಲೆಯ 109ನೇ ಬ್ಯಾಚ್ ವಿದ್ಯಾರ್ಥಿಗಳ ದೀಪ ಬೆಳಗುವ ಮತ್ತು ಪ್ರತಿಜ್ಞಾ ವಿಧಿ ಸ್ವೀಕರಿಸುವ ‘ಪ್ರೇರಣಾ ಜ್ಯೋತಿ-2026’ ಕಾರ್ಯಕ್ರಮ ಇಂದು ಅದ್ಧೂರಿಯಾಗಿ ಜರುಗಿತು. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸೇರಿದಂತೆ ಹಲವು ಗಣ್ಯರು ಈ ಸಮಾರಂಭಕ್ಕೆ ಸಾಕ್ಷಿಯಾದರು.

ಬೆಳಗಾವಿಯ ಬಿಮ್ಸ್ (BIMS) ಆವರಣದ ಹೊಸ ಸಭಾಂಗಣದಲ್ಲಿ ಸರ್ಕಾರಿ ಶುಶ್ರೂಷಾ ಶಾಲೆಯ 109ನೇ ಬ್ಯಾಚ್ ಜಿ.ಎನ್.ಎಂ ವಿದ್ಯಾರ್ಥಿಗಳ ದೀಪ ಬೆಳಗುವ ಮತ್ತು ಪ್ರತಿಜ್ಞಾ ವಿಧಿ ಸ್ವೀಕಾರ ಸಮಾರಂಭ ‘ಪ್ರೇರಣಾ ಜ್ಯೋತಿ-2026’ ಇಂದು ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ದೀಪ ಬೆಳಗುವ ಮೂಲಕ ಚಾಲನೆ ನೀಡಿದರು. ವೈದ್ಯಕೀಯ ಶಿಕ್ಷಣ ನಿರ್ದೇಶಕಿ ಡಾ. ಬಿ.ಎಲ್. ಸುಜಾತಾ ರಾಥೋಡ್ ಗೌರವಾನ್ವಿತ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಬಿಮ್ಸ್ ಸಂಸ್ಥೆಯ ಡೀನ್ ಮತ್ತು ನಿರ್ದೇಶಕರಾದ ಡಾ. ಅಶೋಕ ಕುಮಾರ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ವಿಶೇಷ ಆಹ್ವಾನಿತರಾಗಿ ಕೆ.ಎಸ್.ಡಿ.ಎನ್.ಇ.ಬಿ ಕಾರ್ಯದರ್ಶಿ ಮಡಿವಾಳಪ್ಪ ಎನ್., ಹುಬ್ಬಳ್ಳಿ ಕೆ.ಎಲ್.ಇ ನರ್ಸಿಂಗ್ ಕಾಲೇಜಿನ ಪ್ರಾಚಾರ್ಯ ಡಾ. ಸಂಜಯ್ ಪೀರಾಪುರ ಹಾಗೂ ಬೆಂಗಳೂರಿನ ಯುಎಸ್ ಹೆಚ್ ಎ ಎಂ ಬಿ ಪಾಲ್ಗೊಂಡು ಮಾರ್ಗದರ್ಶನ ನೀಡಿದರು.

ಕಾರ್ಯಕ್ರಮದಲ್ಲಿ ಬಿಮ್ಸ್ ಸಿಎಓ ರೇಷ್ಮಾ ತಾಳಿಕೋಟಿ, ಹಣಕಾಸು ಸಲಹೆಗಾರ್ತಿ ಶಿಲ್ಪಾ ವಾಲಿ, ಆರ್.ಎಂ.ಓ ಡಾ. ಸರೋಜಾ ತಿಗಡಿ, ನರ್ಸಿಂಗ್ ಸುಪರಿಂಟೆಂಡೆಂಟ್ ಕಾಂಚನಮಾಲಾ ಎಸ್., ಬಿಮ್ಸ್ ಪ್ರಾಚಾರ್ಯ ಡಾ. ಉಮೇಶ್ ಕುಲಕರ್ಣಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಜಗದೀಶ್ ಗಾಣಗಿ ಹಾಗೂ ವೈದ್ಯಕೀಯ ಅಧೀಕ್ಷಕ ಡಾ. ಈರಣ್ಣ ಪಲ್ಲೇದ ಉಪಸ್ಥಿತರಿದ್ದರು. ಪ್ರಾಚಾರ್ಯ ಡಾ. ಪ್ರಕಾಶ್ ಕೊಡಲಿ ಸ್ವಾಗತಿಸಿದರು. ಶುಶ್ರೂಷಾ ವೃತ್ತಿಯ ಪಾವಿತ್ರ್ಯತೆಯನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ನೂರಾರು ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

Tags:

error: Content is protected !!