BELAGAVI

ಬೆಳಗಾವಿಯಲ್ಲಿ ಬಸವ ಜಯಂತಿ ಸಂಭ್ರಮಕ್ಕೆ ಸಿದ್ಧತೆ: ಏಪ್ರಿಲ್ 4ಕ್ಕೆ ಬಸವ ಮಂಟಪದಲ್ಲಿ ಮಹತ್ವದ ಪೂರ್ವಭಾವಿ ಸಭೆ

Share

ವಿಶ್ವಗುರು ಬಸವಣ್ಣನವರ ಜಯಂತಿಯನ್ನು ಈ ಬಾರಿ ಅತ್ಯಂತ ವಿಜೃಂಭಣೆಯಿಂದ ಆಚರಿಸಲು ಬೆಳಗಾವಿಯ ಬಸವ ಜಯಂತಿ ಉತ್ಸವ ಸಮಿತಿ ಸನ್ನದ್ಧವಾಗಿದೆ. ಉತ್ಸವದ ಅಂಗವಾಗಿ ಹಮ್ಮಿಕೊಳ್ಳಲಿರುವ ಬೃಹತ್ ಮೆರವಣಿಗೆ ಹಾಗೂ ವಿವಿಧ ಕಾರ್ಯಕ್ರಮಗಳ ಕುರಿತು ಚರ್ಚಿಸಲು ನಾಳೆ ನಗರದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದೆ.

 

ಬೆಳಗಾವಿಯ ಬಸವ ಜಯಂತಿ ಉತ್ಸವ ಸಮಿತಿ-2026ರ ವತಿಯಿಂದ ಏಪ್ರಿಲ್ 4ರ ಶನಿವಾರ ಸಾಯಂಕಾಲ 5:00 ಗಂಟೆಗೆ ಕಣಬರಗಿ ರಸ್ತೆಯ ಬಸವ ಮಂಟಪದಲ್ಲಿ ಮಹತ್ವದ ಸಭೆ ಆಯೋಜಿಸಲಾಗಿದೆ. ಈ ಸಭೆಯಲ್ಲಿ ಏಪ್ರಿಲ್ 19ರಂದು ನಡೆಯಲಿರುವ ಬೃಹತ್ ಬೈಕ್ ರ್ಯಾಲಿ ಮತ್ತು ಬಸವೇಶ್ವರ ಮೂರ್ತಿಯ ಮೆರವಣಿಗೆ ಹಾಗೂ ಏಪ್ರಿಲ್ 26ರಂದು ಹಮ್ಮಿಕೊಳ್ಳಲಿರುವ ವಿಶ್ವಗುರುಗಳ ಭಾವಚಿತ್ರದ ಭವ್ಯ ಮೆರವಣಿಗೆಯ ರೂಪುರೇಷೆಗಳ ಬಗ್ಗೆ ಸಮಾಲೋಚನೆ ನಡೆಸಲಾಗುವುದು. ಸಮಿತಿಯ ಸಂಚಾಲಕರಾದ ಬಸವರಾಜ್ ರೊಟ್ಟಿ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಉತ್ಸವವನ್ನು ಯಶಸ್ವಿಗೊಳಿಸಲು ಸಮಾಜದ ಗಣ್ಯರು ಮತ್ತು ಸಂಘಟನೆಗಳ ಸಹಕಾರ ಕೋರಿದ್ದಾರೆ.

ಈ ಸಭೆಗೆ ಜಿಲ್ಲೆಯ ಎಲ್ಲಾ ಬಸವಪರ ಹಾಗೂ ಲಿಂಗಾಯತ ಪರ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು, ನಗರಸೇವಕರು ಮತ್ತು ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಲಾಗಿದೆ. ಸಭೆಯಲ್ಲಿ ಸಾರ್ವಜನಿಕರು ತಮ್ಮ ಅಮೂಲ್ಯ ಸಲಹೆ-ಸೂಚನೆಗಳನ್ನು ನೀಡುವ ಮೂಲಕ ಬಸವ ಜಯಂತಿಯ ಮೆರವಣಿಗೆಯನ್ನು ಐತಿಹಾಸಿಕವಾಗಿಸಲು ಕೈಜೋಡಿಸಬೇಕೆಂದು ಉತ್ಸವ ಸಮಿತಿ ವಿನಂತಿಸಿದೆ. ಶರಣ ತತ್ವದ ಪ್ರಸಾರ ಮತ್ತು ಸಮುದಾಯದ ಏಕತೆಯನ್ನು ಬಿಂಬಿಸುವ ಈ ಉತ್ಸವಕ್ಕೆ ಈಗಿನಿಂದಲೇ ನಗರದಲ್ಲಿ ಸಿದ್ಧತೆಗಳು ಬಿರುಸುಗೊಂಡಿವೆ.

Tags:

error: Content is protected !!