BELAGAVI

ಕುಂದಾನಗರಿಯಲ್ಲಿ ಕ್ರಿಮಿನಲ್‌ಗಳಿಗೆ ಪೊಲೀಸ್ ಶಾಕ್: ಐವರು ರೌಡಿಶೀಟರ್‌ಗಳು ಆರು ತಿಂಗಳು ಗಡಿಪಾರು!

Share

ಬೆಳಗಾವಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಕಮೀಷನರ್ ಖಡಕ್ ಆ್ಯಕ್ಷನ್ ತೆಗೆದುಕೊಂಡಿದ್ದಾರೆ. ಸಾರ್ವಜನಿಕ ಶಾಂತಿಗೆ ಭಂಗ ತರುತ್ತಿದ್ದ ಐವರು ಕುಖ್ಯಾತ ಕ್ರಿಮಿನಲ್‌ಗಳನ್ನು ನಗರದಿಂದ 6 ತಿಂಗಳ ಕಾಲ ಗಡಿಪಾರು ಮಾಡಿ ಪೊಲೀಸ್ ಕಮೀಷನರ್ ಭೂಷಣ್ ಬೊರಸೆ ಆದೇಶ ಹೊರಡಿಸಿದ್ದಾರೆ.
ಬೆಳಗಾವಿ ನಗರದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದರೋಡೆ, ಕೊಲೆ ಯತ್ನ, ಮಾದಕವಸ್ತು ಮಾರಾಟ ಹಾಗೂ ಪೊಕ್ಸೋ ಕಾಯ್ದೆಯಡಿ ದಾಖಲಾಗಿದ್ದ ಐವರು ಆರೋಪಿಗಳಿಗೆ ಈಗ ಗಡಿಪಾರು ಶಿಕ್ಷೆ ವಿಧಿಸಲಾಗಿದೆ. ಗಡಿಪಾರಾದವರಲ್ಲಿ ಮಾದಕವಸ್ತು ಕಿಂಗ್ ಪಿನ್ ಹಲಗಾ ನಿವಾಸಿ ಪಿರಾಜಿ ಯಸೊಜಿ, ಟಿಳಕವಾಡಿ ನಿವಾಸಿಗಳಾದ ಯಶ್ ದಾವಲೆ ಹಾಗೂ ಆದಿತ್ಯ ದಾವಲೆ, ಉದ್ಯಮಬಾಗದ ಸಂತೋಷ ದಿವಟಗಿ ಮತ್ತು ಮಚ್ಚೆ ನಿವಾಸಿ ರಫೀಕ್ ಶೇಖ್ ಸೇರಿದ್ದಾರೆ. ಈ ರೌಡಿಶೀಟರ್‌ಗಳು ಸಾರ್ವಜನಿಕವಾಗಿ ತಲ್ವಾರ್ ಪ್ರದರ್ಶಿಸಿ ಭೀತಿ ಹುಟ್ಟಿಸುತ್ತಿದ್ದರು. ಈ ಕಠಿಣ ಕ್ರಮದ ಮೂಲಕ ನಗರದ ಕ್ರಿಮಿನಲ್‌ಗಳಿಗೆ ಪೊಲೀಸ್ ಕಮೀಷನರ್ ಭೂಷಣ್ ಬೋರಸೆ ಅವರು ನೇರ ಎಚ್ಚರಿಕೆ ನೀಡಿದ್ದಾರೆ.

Tags:

error: Content is protected !!