hubbali

ಪೊಲೀಸ್‌ ಧ್ವಜ ದಿನಾಚರಣೆ : ಹು-ಧಾ ಪೊಲೀಸ್ ಕಮಿಷನರೇಟ್ ವತಿಯಿಂದ ಗೌರವ ವಂದನೆ

Share

1965ರಲ್ಲಿ ಕರ್ನಾಟಕ ರಾಜ್ಯ ಪೊಲೀಸ್‌ ಸ್ಥಾಪನೆಯಾದ ದಿನದ ಸ್ಮರಣಾರ್ಥವಾಗಿ ಪೊಲೀಸ್‌ ಧ್ವಜ ದಿನಾಚರಣೆಯನ್ನು ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರೇಟ್ ವತಿಯಿಂದ ಸಡಗರದಿಂದ ಆಚರಿಸಲಾಯಿತು.

ನಗರದ ಹಳೇ ಸಿಎಆರ್ ಮೈದಾನದಲ್ಲಿ ನಡೆದ ಈ ವಿಶೇಷ ಕಾರ್ಯಕ್ರಮದಲ್ಲಿ ಪೊಲೀಸ್ ಕವಾಯತು ನಡೆಸುವ ಮೂಲಕ ದಿನಾಚರಣೆಗೆ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ, ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಸನ್ಮಾನಿಸಿ ಗೌರವಿಸಲಾಯಿತು. ನಂತರ ಪೊಲೀಸ್‌ ಕವಾಯತು ಪಥಸಂಚಲನದಲ್ಲಿ ಹಿರಿಯ ಪೊಲೀಸ್‌ ಅಧಿಕಾರಿಗಳು ಹಾಗೂ ಆಹ್ವಾನಿತ ಅತಿಥಿಗಳು ಗೌರವ ವಂದನೆ ಸ್ವೀಕರಿಸಿದರು.

ಈ ಕವಾಯತಿನಲ್ಲಿ ಪೊಲೀಸ್ ಬ್ಯಾಂಡ್. ಸಿಎಆ‌ರ್, ಹುಬ್ಬಳ್ಳಿ ಉತ್ತರ, ದಕ್ಷಿಣ ಉಪ ವಿಭಾಗ, ಧಾರವಾಡ ಉಪ ವಿಭಾಗ, ಮಹಿಳಾ ಮತ್ತು ಸಂಚಾರ ಉಪ ವಿಭಾಗ ತಂಡಗಳಿಂದ ಗೌರವ ವಂದನೆ ಪಥ ಸಂಚಲನ ನಡೆಯಿತು.

Tags:

error: Content is protected !!