BELAGAVI

ಕೊನೆಗೂ ಜಿಲ್ಲಾಧಿಕಾರಿ ಕಚೇರಿ ಆವರಣ ತಲುಪಿದ ಹೊಸ ಹಲ್ಮಿಡಿ ಶಾಸನ ಪ್ರತಿಕೃತಿ ; ಇಂದು ಪುನರ್ ಸ್ಥಾಪನೆ!

Share

2024 ರ ನವೆಂಬರ್ ಒಂದರಂದು ಕರ್ನಾಟಕ ರಾಜ್ಯೋತ್ಸವ ದಿನದಂದು ಬೆಳಗಾವಿ ಜಿಲ್ಲಾಧಿಕಾರಿಗಳ ಕಚೇರಿಯ ಆವರಣದಲ್ಲಿ ಸ್ಥಾಪನೆಯಾಗಿ ಇತೀಚೆಗೆ ಒಡೆದು ಹಾಕಲ್ಪಟ್ಟಿದ್ದ ಕನ್ನಡದ ಮೊದಲ ಶಾಸನ ಹಲ್ಮಿಡಿ ಶಾಸನದ ಹೊಸ ಪ್ರತಿಕೃತಿಯು ಇಂದು ಶುಭ
ಶುಕ್ರವಾರ ಬೆಳಗಾವಿಗೆ ತಲುಪಿದೆ.


ನಾಳೆ ಇಂದು ಶನಿವಾರ ಮುಂಜಾನೆ ಇದನ್ನು ತಳಕಟ್ಟೆಯ ಮೇಲೆ ಸ್ಥಾಪಿಸುವ ಕಾರ್ಯ ನಡೆಯಲಿದೆ. ಮುಂದಿನ ವಾರ ಸಮಾನ ಮನಸ್ಕರು ಕನ್ನಡ ಸಂಘಟನೆಗಳು ನೂತನ ಶಾಸನಕ್ಕೆ ಜಲಾಭೀಷೇಕ ಮತ್ತು ಕ್ಷೀರಾಭಿಷೇಕ ನೆರವೇರಿಸಿ ಪೂಜೆ ಸಲ್ಲಿಸಲಿವೆ.ಹಲ್ಮಿಡಿ ಶಾಸನವನ್ನು ಡಿಸಿ ಕಚೇರಿಯ ನವೀಕರಣದ ಭರದಲ್ಲಿ ಒಡೆದು ಹಾಕಲಾಗಿತ್ತು. ಶಾಸನವನ್ನು ಹುಡುಕಾಡಿದ ಕನ್ನಡ ಸಂಘಟನೆಗಳಿಗೆ ಆಘಾತ ಕಾದಿತ್ತು. ಶಾಸನ ಒಡೆದು ಹೋಗಿ ತಳಕಟ್ಟೆಯು ಮಾತ್ರ ಕಸದಲ್ಲಿ ಬಿದ್ದಿತ್ತು.ಕಳೆದ ಮಾರ್ಚ23 ರಂದು ಕನ್ನಡ ಸಂಘಟನೆಗಳು ತೀವ್ರವಾಗಿ ಪ್ರತಿಭಟಿಸಿ ರಾಜ್ಯದ ಮುಖ್ಯ ಕಾರ್ಯದರ್ಶಿಗಳಿಗೆ ದೂರು ಸಲ್ಲಿಸಿದ್ದವು.ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಜಿಲ್ಲಾಆಡಳಿತ ಹೊಸ ಪ್ರತಿಕೃತಿ ಕೂಡಿಸಲು ಕ್ರಮ ಕೈಕೊಂಡಿತ್ತು.

Tags:

error: Content is protected !!