Vijaypura

ಶಾಸಕ ಯತ್ನಾಳ ವಿರುದ್ಧ ಸಚಿವ ಎಂ.ಬಿ. ಪಾಟೀಲ ಕಿಡಿ

Share

ವಿಜಯಪುರ ನಗರ ಶಾಸಕ ಬಸನಗೌಡ ಯತ್ನಾಳ ವಿರುದ್ಧ ಸಚಿವ ಎಂ.ಬಿ. ಪಾಟೀಲ ತೀವ್ರ ವಾಗ್ದಾಳಿ ನಡೆಸಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಅವರು, ಯತ್ನಾಳ ನಾಟಕ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಬಾಗಲಕೋಟೆ, ದಾವಣಗೆರೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಯತ್ನಾಳ ಪ್ರಚಾರ ನಡೆಸುತ್ತಿರುವ ಬಗ್ಗೆ ಪ್ರಶ್ನಿಸಿದ ಪಾಟೀಲ, ಇದು ರಾಜಕೀಯ ನಾಟಕವೆಂದು ಟೀಕಿಸಿದರು. ಯಡಿಯೂರಪ್ಪ ಹಾಗೂ ಅವರ ಮಗನ ಹೆಸರನ್ನು ಉಲ್ಲೇಖಿಸಿ ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿದ್ದಾರೆ ಎಂದರು.
ಯತ್ನಾಳ ನೇರವಾಗಿ ಬಿಜೆಪಿ ಪಕ್ಷಕ್ಕೆ ಸೇರಲು ಮನವಿ ಮಾಡಿ ಕೊಳ್ಳಬೇಕು. ಅದನ್ನು ಬಿಟ್ಟು ಪರೋಕ್ಷವಾಗಿ ಪ್ರಚಾರ ಮಾಡುವ ಮೂಲಕ ರಾಜಕೀಯ ಆಟ ಆಡುತ್ತಿದ್ದಾರೆ ಎಂದು ಪಾಟೀಲ ವ್ಯಂಗ್ಯವಾಡಿದರು. ಬಿಜೆಪಿಯಿಂದ ಹೊರಗಡೆ ಹಾಕಿದ ನಂತರವೂ ಮತ್ತೆ ಪಕ್ಷಕ್ಕೆ ಸೇರುವ ಪ್ರಯತ್ನವಾಗಿ ಈ ರೀತಿಯ ನಡೆ ತೋರಿಸುತ್ತಿದ್ದಾರೆ ಎಂದು ಸಚಿವ ಪಾಟೀಲ ಆರೋಪಿಸಿದರು.

Tags:

error: Content is protected !!