ರಾಜ್ಯದಲ್ಲಿ ಏಳು ಸಾವಿರ ಆಶಾ ಕಾರ್ಯಕರ್ತೆಯರನ್ನು ಸೇವೆಯಿಂದ ಕೈಬಿಡುತ್ತಿರುವ ಸರ್ಕಾರದ ನಡೆ ವಿರೋಧಿಸಿ ಹಾಗೂ ಈ ನಿರ್ಧಾರ ಕೈ ಬೀಡುವಂತೆ ಆಗ್ರಹಿಸಿ ಧಾರವಾಡದಲ್ಲಿ ಆಶಾ ಕಾರ್ಯಕರ್ತರು ಕಳೆದ ಏಳು ದಿನಗಳಿಂದ ಪ್ರತಿಭಟನಾ ಧರಣಿ ನಡೆಸುತ್ತಿದ್ದು, ಇಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಭೇಟಿ ನೀಡಿ ಭರವಸೆ ಬಳಿಕ ಕಾರ್ಯಕರ್ತರೆಯರು ಧರಣಿ ಕೈ ಬಿಟ್ಟರು.
ಕಳೆದ ಏಳು ದಿನಗಳಿಂದ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಬಳಿ ಆಶಾ ಕಾರ್ಯಕರ್ತರೆಯರು ರಾಜ್ಯ ಹಾಗೂ ಆರೋಗ್ಯ ಇಲಾಖೆಯ ನಡೆ ಖಂಡಿಸಿ ಪ್ರತಿಭಟನಾ ಧರಣಿ ಕೈಗೊಂಡಿದ್ದರು. ಪ್ರತಿಭಟನಾ ಧರಣಿ ಸ್ಥಳಕ್ಕೆ ಭೇಟಿ ನೀಡಿದ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು, ಸರ್ಕಾರ ಅಥವಾ ಆರೋಗ್ಯ ಇಲಾಖೆ ಆಶಾ ಕಾರ್ಯಕರ್ತೆಯರನ್ನು ತೆ್ಎದು ಹಾಕುವ ಯೋಚನೆಯಲ್ಲಿ ಇಲ್ಲ. ನಿವು ಈಗ ನೀಡಿದ ಮನವಿ ಕುರಿತು ಮುಖ್ಯಮಂತ್ರಿ ಹಾಗೂ ಅರೋಗ್ಯ ಇಲಾಖೆಯ ಸಚಿವರೊಂದಿಗೆ ಮಾತ್ನಾಡುವುದಾಗಿ ಭರವಸೆ ನೀಡಿದರು. ಜತೆಗೆ ಎಲ್ಲರೂ ಒ್ರತಿಭಟನೆ ಧರಣಿ ಕೈ ಬಿಟ್ಟು ತಮ್ಮಗೆ ನಿಯೋಜಿಸಿ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಿ ಎಂದು ಆಶಾ ಕಾರ್ಯಕರ್ತೆಯರಿಗೆ ಲಾಡ ಅವರ ಮನವಿ ಮಾಡಿದರು. ಜತೆಗೆ ಆಶಾ ಕಾರ್ಯಕರ್ತರೆಯವರ ಮನವಿಗೆ ಸ್ಪಂದಿಸುವಂತೆ ಲಾಡ್ ಅವರು ಜಿಲ್ಲಾಧಿಕಾರಿ ಸ್ನೇಹಲ್ ಆರ್ ಅವರಿಗೆ ಸೂಚಿನೆ ನೀಡಿದರು. ಇನ್ನೂ ಲಾಡ್ ಅವರ ಮನವಿಯ ಬೆನ್ನಲ್ಲೇ ಕಳೆದ ಏಳು ದಿನಗಳಿಂದ ಪ್ರತಿಭಟನಾ ಧರಣಿ ಕೈಗೊಂಡಿದ್ದ ಆಶಾ ಕಾರ್ಯಕರ್ತರೆಯರು ನಿಟ್ಟುಸಿರು ಬುಟ್ಟು ಧರಣಿ ಕೈಬಿಟ್ಟರು.
