BELAGAVI

ಸಕ್ಕರೆ ಕಾರ್ಖಾನೆಗಳ ದಕ್ಷತೆ ಹೆಚ್ಚಿಸಲು ಮಿಲ್ಲ ಸೆಟ್ಟಿಂಗ್ ತರಬೇತಿ: ಬೆಳಗಾವಿಯ ಎಸ್. ನಿಜಲಿಂಗಪ್ಪ ಸಂಸ್ಥೆಯಲ್ಲಿ ವಿಶೇಷ ಕಾರ್ಯಾಗಾರ!

Share

ಬೆಳಗಾವಿಯ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯಲ್ಲಿ TRAINING PROGRAM ON MILL SETTING AND MILL MAINTENANCE AND TECHNIQUES IMPROVE MILL PERFORMANCE ಕುರಿತು ರಾಹಿ ಕನ್ಸಲ್ಟನ್ಸಿ, ಪುಣೆ ಇವರ ಸಹಯೋಗದಲ್ಲಿ ಎರಡು ದಿನಗಳ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.

ಸದರಿ ತರಬೇತಿ ಕಾರ್ಯಾಗಾರದ ಅಧ್ಯಕ್ಷೀಯ ಭಾಷಣದಲ್ಲಿ ಸಂಸ್ಥೆಯ ನಿರ್ದೇಶರಾದ ರಾಜಗೋಪಾಲ ಇವರು ಮಾತನಾಡಿ ಸಕ್ಕರೆ ಕಾರ್ಖಾನೆಗಳಲ್ಲಿ ಮಿಲ್ಲ ಸೆಟ್ಟಿಂಗ್, ಮಿಲ್ಲ ಮೆಂಟೆನನ್ಸ್ ಹಾಗೂ ಮಿಲ್ಲಿನ ಹೊಸ ಟೆಕ್ನಿಕಗಳ ಅಳವಡಿಸಿಕೊಳ್ಳುವುದು ಅತ್ಯವಶ್ಯವಾಗಿದ್ದು, ಈ ವಿಷಯದ ಕುರಿತು ವಿವರವಾದ ತರಬೇತಿ ಪಡೆದಲ್ಲಿ ಕಾರ್ಖಾನೆಗಳು ಒಳ್ಳೆಯ ಕಾರ್ಯಕ್ಷಮತೆಯಿಂದ ಹೊಂದಿ ಆಗಬಹುದಾದ ನಷ್ಟಗಳನ್ನು ತಡೆಯಬಹುದಾಗಿದೆ ಎಂದು ತಿಳಿಸಿದರು.

ಸಿ.ಬಿ. ಪಾಟೀಲ್, ತಾಂತ್ರಿಕ ಸಲಹೆಗಾರರು: ಸಕ್ಕರೆ ತಂತ್ರಜ್ಞಾನ ಇವರು ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಗಳನ್ನು ಹೇಳಿದರು. ರಾಹಿ ಕನ್ಸಲ್ಟನ್ಸಿ ಪುಣೆ ತಂತ್ರಜ್ಞರಾದ ಕಿರಣ ಬಿ. ಕಾಳೆ, ಹಾಗೂ ಮತ್ತೊಬ್ಬ ತಂತ್ರಜ್ಞರಾದ ರಮಾಕಾಂತ ಕುಲಕರ್ಣಿ ಇವರು ಸದರಿ ವಿಷಯದ ಬಗ್ಗೆ ಸುಧೀರ್ಘವಾಗಿ ಶಿಬಿರಾರ್ಥಿಗಳಿಗೆ ತಿಳಿಸಿ ಹೇಳುತ್ತಾ ಕಾರ್ಖಾನೆಗಳಲ್ಲಿ ಯಾವುದೇ ರೀತಿಯ ತೊಂದರೆ ಬಂದಲ್ಲಿ ಹೇಗೆ ನಿವಾರಿಸಿಕೊಳ್ಳಬಹುದೆಂದು ತಾಂತ್ರಿಕ ಸಲಹೆಗಳ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದರು. ಶಂಕರ ಧರ್ಮಟ್ಟಿ, ಸಕ್ಕರೆ ತಂತ್ರಜ್ಞರು ಕಾರ್ಯಾಗಾರವನ್ನು ನಿರೂಪಿಸಿ ವಂದನಾರ್ಪಣೆ ಹೇಳಿದರು. ಈ ಕಾರ್ಯಾಗಾರದಲ್ಲಿ ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯದ ಸಕ್ಕರೆ ಕಾರ್ಖಾನೆಗಳ ಸುಮಾರು 60 ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು.

Tags:

error: Content is protected !!