BELAGAVI

ಬೆಳಗಾವಿ ಪೊಲೀಸರ ಮಿಂಚಿನ ಕಾರ್ಯಾಚರಣೆ: ತಲವಾರಧಾರಿ ಆರೋಪಿ, ಜೂಜುಕೋರರು ಹಾಗೂ ಗಾಂಜಾ ಪೆಡ್ಲರ್ ಸೇರಿ ಹಲವರು ಅರೆಸ್ಟ್!

Share

ಬೆಳಗಾವಿ ನಗರದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ ವಿವಿಧ ಠಾಣಾ ವ್ಯಾಪ್ತಿಗಳಲ್ಲಿ ಬೃಹತ್ ದಾಳಿ ನಡೆಸಲಾಗಿದೆ. ಮಾರಕಾಸ್ತ್ರ ಹೊಂದಿದ್ದವನು, ಜೂಜಾಟದಲ್ಲಿ ನಿರತರಾಗಿದ್ದ ಐವರು ಹಾಗೂ ಮಾದಕ ವ್ಯಸನಿ ಸೇರಿದಂತೆ ಹಲವರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಲಾಗಿದೆ.

ಕ್ಯಾಂಪ್ ಠಾಣೆಯ ಪಿಎಸ್‌ಐ ರುಕ್ಕಿಣಿ ಎ. ನೇತೃತ್ವದಲ್ಲಿ ನಡೆದ ಪರಿಶೀಲನೆ ವೇಳೆ ತಲವಾರು ಹೊಂದಿದ್ದ ಅರುಣ ಪರುಶರಾಮ ಗಾಡಿವಡ್ಡರ ಎಂಬಾತನನ್ನು ಬಂಧಿಸಲಾಗಿದೆ. ಇತ್ತ ಹಿರೇಬಾಗೇವಾಡಿ ಪಿಐ ಸುಂದ್ರೇಶ ಕೆ. ಹೊಳನ್ನವರ ತಂಡ ಹಲಗಾ ಗ್ರಾಮದ ಕೆರೆಯ ಬಳಿ ಅಂದರ್-ಬಾಹರ್ ಜೂಜಾಡುತ್ತಿದ್ದ ವಿಶ್ವನಾಥ ರವಿ ಗೋಟಡಕಿ, ರವಿ ಮಹಾವೀರ ದಡ್ಡಿ, ಲಕ್ಷಣ ಯಲ್ಲಪ್ಪ ಮಾಶಾನಕಟ್ಟಿ, ನಾಗಪ್ಪ ಸಿದ್ರಾಯಿ ನಾಯಿಕ ಹಾಗೂ ಕಲ್ಲಪ್ಪ ಶೆಟ್ಟೆಪ್ಪ ಮಾಸ್ತಮರ್ಡಿ ಎಂಬುವವರನ್ನು ಬಂಧಿಸಿ 21,000 ರೂ. ನಗದು ವಶಪಡಿಸಿಕೊಂಡಿದ್ದಾರೆ. ಉದ್ಯಮಬಾಗದಲ್ಲಿ ಅಸಹಜವಾಗಿ ವರ್ತಿಸುತ್ತಿದ್ದ ಗಾಂಜಾ ಸೇವನೆಯ ಶಂಕಿತ ಮಲ್ಲಪ್ಪ ಆನಂದ ಗುಳೇಚಿಯನ್ನು ಪಿಎಸ್‌ಐ ಪಿ. ಜಿ. ಗಂಡವಗೋಳ ತಂಡ ವಶಕ್ಕೆ ಪಡೆದಿದೆ. ಇದಲ್ಲದೆ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡುತ್ತಿದ್ದ ಗಿರೀಶ ರಮೇಶ ಹಾಲಪೇಟೆ ಹಾಗೂ ಬಸವರಾಜ ದುಂಡಪ್ಪ ಇಟಗಿ ವಿರುದ್ಧ ಮಾರ್ಕೆಟ್ ಠಾಣೆಯ ಪಿಎಸ್‌ಐ ಹುಸೇನಸಾಬ ಕರೂರ ಕ್ರಮ ಕೈಗೊಂಡಿದ್ದಾರೆ. ಪೊಲೀಸರ ಈ ದಕ್ಷ ಕಾರ್ಯವನ್ನು ಆಯುಕ್ತರು ಶ್ಲಾಘಿಸಿದ್ದಾರೆ.

Tags:

error: Content is protected !!