1. ಅಕ್ಷಯ ತೃತೀಯದ ಶುಭ ದಿನ ಕಳಸಾರೋಹಣ
2. ವೈದು ಸಮಾಜದ ಕಷ್ಟಾರ್ಜಿತ ಹಣದಲ್ಲಿ ಜೀರ್ಣೋದ್ಧಾರ
3. ಬಸವಲಿಂಗ ಸ್ವಾಮೀಜಿ ಸಾನಿಧ್ಯದಲ್ಲಿ ಧಾರ್ಮಿಕ ಕಾರ್ಯಕ್ರಮ
4. ಶಾಸಕ ರಾಜು ಕಾಗೆ ಸಹಕಾರದಲ್ಲಿ ಅಭಿವೃದ್ಧಿ

ಕಾಗವಾಡ ತಾಲೂಕಿನ ಉಗಾರ್ ಖುರ್ದ್ ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಲಾದ ಶ್ರೀ ದುರ್ಗಾದೇವಿ ಮಂದಿರದ ಕಳಸಾರೋಹಣ ಕಾರ್ಯಕ್ರಮವು ಮಂಗಳವಾರ ಬೆಳಿಗ್ಗೆ ಸಂಭ್ರಮದಿಂದ ನೆರವೇರಲಿದೆ.
ಸುಮಾರು 40 ವರ್ಷಗಳ ಹಿಂದೆ ನಿರ್ಮಿಸಲಾಗಿದ್ದ ಈ ಮಂದಿರವನ್ನು ಹಂತ-ಹಂತವಾಗಿ ಅಭಿವೃದ್ಧಿಗೊಳಿಸಲಾಗಿದ್ದು, ಇದೀಗ ಅಕ್ಷಯ ತೃತೀಯದ ಶುಭ ಗಳಿಗೆಯಲ್ಲಿ ಪರಮಪೂಜ್ಯ ಬಸವಲಿಂಗ ಸ್ವಾಮೀಜಿಯವರ ಸಾನಿಧ್ಯದಲ್ಲಿ ಕಳಸಾರೋಹಣ ನಡೆಯಲಿದೆ. ವೈದು (ಒಯ್ದು) ಸಮಾಜದ ಬಾಂಧವರು ವರ್ಷವಿಡೀ ಕೂಲಿ ಮಾಡಿ ತಾವು ಸಂಪಾದಿಸಿದ ಹಣದಲ್ಲಿ ಒಂದಿಷ್ಟು ಭಾಗವನ್ನು ಕೂಡಿಟ್ಟು, ಪರಂಪರೆಯಂತೆ ಶ್ರೀ ದುರ್ಗಾದೇವಿ ಜಾತ್ರೆಯನ್ನು ಆಚರಿಸುತ್ತಾ ಬಂದಿದ್ದಾರೆ. ಇದೀಗ ಮಂದಿರದ ಅಭಿವೃದ್ಧಿ ಕಾರ್ಯ ಪೂರ್ಣಗೊಂಡಿದ್ದು, ಸ್ಥಳೀಯ ಶಾಸಕ ರಾಜು ಕಾಗೆ ಅವರ ಸಹಕಾರದೊಂದಿಗೆ ಸುಮಾರು 10 ಲಕ್ಷ ರೂಪಾಯಿ ವೆಚ್ಚದಲ್ಲಿ ಜೀರ್ಣೋದ್ಧಾರ ಕಾರ್ಯವನ್ನು ಕೈಗೊಳ್ಳಲಾಗಿದೆ. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಗೋಕಾಕ, ಅಂಕಲಿ, ಜೈಸಿಂಗ್‌ಪುರ, ಬನಹಟ್ಟಿ, ಕುಡಚಿ ಸೇರಿದಂತೆ ವಿವಿಧ ಗ್ರಾಮಗಳ ನೂರಾರು ಭಕ್ತರು ಪಾಲ್ಗೊಳ್ಳಲಿದ್ದಾರೆ ಎಂದು ಮೋಹನ ವೈದು ತಿಳಿಸಿದ್ದಾರೆ.
ಮಂದಿರದ ಅರ್ಚಕ ಸುರೇಶ್ ಮಾಳಕರಿ ಪೂಜಾ ವಿಧಿವಿಧಾನಗಳನ್ನು ನೆರವೇರಿಸಲಿದ್ದಾರೆ. ಶ್ರೀಮತಿ ದುರ್ಗವ್ವಾ ಮದಕರಿ ಹಾಗೂ ಧರ್ಮ ಶಿರ್ಕೆ ಅವರು ಕಳಸಾರೋಹಣದ ಕುರಿತು ಮಾಹಿತಿ ನೀಡಿದರು. ಬೈಟ್
ಈ ಸಂದರ್ಭದಲ್ಲಿ ದುರ್ಗಾದೇವಿ ಮಂದಿರದ ಅಧ್ಯಕ್ಷ ಗೋವಿಂದ ಒಯ್ದು, ಉಪಾಧ್ಯಕ್ಷ ಲಕ್ಷ್ಮಣ ಶಿರ್ಕೆ, ಸದಸ್ಯರಾದ ಮೋಹನ ಒಯ್ದು, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಸತೀಶ್ ಜಗತಾಪ್, ಸದಸ್ಯೆ ಶ್ರೀಮತಿ ಆರತಿ ಜಗದಾಪ್ ಸೇರಿದಂತೆ ಸಮಾಜದ ಮುಖಂಡರು ಹಾಗೂ ಭಕ್ತಾದಿಗಳು ಉಪಸ್ಥಿತರಿರಲಿದ್ದಾರೆ.
