KHANAPUR

ಅಪ್ರಾಪ್ತ ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ನಂದಗಡದ ಆರೋಪಿ ಕಲ್ಲಪ್ಪ ಸುತಾರ ಆರೋಪಿಗೆ 30 ವರ್ಷಗಳ ಕಾರಾಗೃಹ ಶಿಕ್ಷೆ.

Share

ಖಾನಾಪೂರ ತಾಲೂಕಿನ ನಂದಗಡ ಗ್ರಾಮದ ಕಲ್ಲಪ್ಪ ಪರಶರಾಮ ಸುತಾರ ಅವರು ಏಪ್ರಿಲ್ 2025ರಲ್ಲಿ ಒಬ್ಬ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ನಡೆದಿತ್ತು. ಈ ಸಂಬಂಧ ಖಾನಾಪೂರ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.

ಸದರ ಪ್ರಕರಣದ ತನಿಖೆಯನ್ನು ಪಿ ಎಸ್‌ ಐ ಎಂ. ಬಿ. ಬಿರಾದಾರ ಹಾಗೂ ಪಿಐ ಎಲ್. ಎಚ್. ಗೌಂಡಿ ಅವರು ನಡೆಸಿದರು. ತನಿಖೆ ವೇಳೆ ಐ. ಎನ್. ಚಿನ್ನವ್ವಗೋಳ (ಸಿಎಚ್‌ಸಿ-2269) ಮತ್ತು ಮಂಜುನಾಥ ಮುಸಳಿ (ಸಿಪಿಸಿ-3703) ಅವರು ಸಹಕಾರ ನೀಡಿದರು. ತನಿಖೆ ಪೂರ್ಣಗೊಳಿಸಿ ಆರೋಪಪಟ್ಟಿಯನ್ನು ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. ನ್ಯಾಯಾಲಯದ ಕಾರ್ಯಚಟುವಟಿಕೆಗಾಗಿ ಪ್ರವೀಣ ಹೊಂಡದ (ಸಿಪಿಸಿ-3573) ಅವರು ಕಾರ್ಯ ನಿರ್ವಹಿಸಿದರು.

ಬೆಳಗಾವಿಯ ವಿಶೇಷ ಪೋಕ್ಸೊ ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆ ಒಂದು ವರ್ಷದೊಳಗೆ ಪೂರ್ಣಗೊಂಡು, ವಿಚಾರಣೆ ಸಂದರ್ಭದಲ್ಲಿ ಆರೋಪಿಯ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಮಾನ್ಯ ನ್ಯಾಯಾಧೀಶೆ ಶ್ರೀಮತಿ ಸಿ. ಎಂ. ಪುಷ್ಪಲತಾ ಅವರು ಆರೋಪಿಗೆ 30 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 1 ಲಕ್ಷ ರೂಪಾಯಿ ದಂಡ ವಿಧಿಸಿದ್ದಾರೆ.

ಈ ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕರಾದ ಅಡ್ವೊಕೇಟ್ ಎಲ್. ವಿ. ಪಾಟೀಲ ಅವರು ಪರಿಣಾಮಕಾರಿ ವಾದ ಮಂಡಿಸಿದರು.

Tags:

error: Content is protected !!