Kagawad

ಕಾಗವಾಡ ವಕೀಲರ ಸಂಘದ ಚುನಾವಣೆ: ಅಧ್ಯಕ್ಷರಾಗಿ ಬಿ.ಆರ್. ರಾವ್, ಉಪಾಧ್ಯಕ್ಷರಾಗಿ ಎಸ್.ವಿ. ನಾಂದ್ರೆ ಆಯ್ಕೆ!

Share

ಕಾಗವಾಡ ತಾಲೂಕು ವಕೀಲರ ಸಂಘದ ಸನ್ 2026-27ನೇ ಸಾಲಿಗಾಗಿ ಅಧ್ಯಕ್ಷರಾಗಿ ಉಗಾರದ ನ್ಯಾಯವಾದಿ ಬಿ.ಆರ್. ರಾವ್ ಹಾಗೂ ಉಪಾಧ್ಯಕ್ಷರಾಗಿ ಶೇಡಬಾಳದ ಎಸ್.ವಿ. ನಾಂದ್ರೆ ಅವರು ಚುನಾಯಿತಗೊಂಡರು.

ಕಾಗವಾಡದ ವಕೀಲರ ಸಂಘದ ಆಡಳಿತ ಮಂಡಳಿ ಚುನಾವಣೆ ಬುಧವಾರದಂದು ಜರುಗಿತು. ನ್ಯಾಯವಾದಿಗಳ ಸಂಘದ ನೂತನ ಅಧ್ಯಕ್ಷ ಬಿ.ಆರ್. ರಾವ್ ಮಾತನಾಡಿ, “ಕಾಗವಾಡ ನ್ಯಾಯವಾದಿಗಳ ಸಂಘದ ಎಲ್ಲ ಸದಸ್ಯರು ನನಗೆ ಮತ ಚಲಾಯಿಸಿ ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದಾರೆ. ರಾಜ್ಯದ ಘನ ಸರ್ಕಾರವು ಮಂಜೂರುಗೊಳಿಸಿದ ನ್ಯಾಯಾಲಯದ ಹೊಸ ಕಟ್ಟಡಕ್ಕಾಗಿ ವಿಶೇಷ ಪ್ರಯತ್ನಿಸುತ್ತೇನೆ. ಅಲ್ಲದೆ, ನ್ಯಾಯವಾದಿಗಳ ಯಾವುದೇ ಸಮಸ್ಯೆಗಳು ಬಂದರೂ ನಾನು ಸ್ಪಂದಿಸುತ್ತೇನೆ” ಎಂದು ಭರವಸೆ ನೀಡಿದರು.

ವಕೀಲರ ಸಂಘದ ಚುನಾವಣಾ ಅಧಿಕಾರಿಗಳಾಗಿ ನ್ಯಾಯವಾದಿ ಜಿನೇಂದ್ರ ಕುರಂದವಾಡೆ ಕಾರ್ಯನಿರ್ವಹಿಸಿದರು.

ಚುನಾವಣೆಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮತದಾನ ನೆರವೇರಿತು. ಉಳಿದ ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ಪ್ರಕ್ರಿಯೆ ನಡೆಯಿತು. ಕಾರ್ಯದರ್ಶಿಗಳಾಗಿ ಮನೋಜ್ ವಡ್ಡರ್, ಜಂಟಿ ಕಾರ್ಯದರ್ಶಿ ಶಾಣೂರಹುಸೇನ್ ಮಕಾಣದಾರ, ಮಹಿಳಾ ಪ್ರತಿನಿಧಿ ಶುಭಾಂಗಿ ಚೌಗುಲೆ, ಮ್ಯಾನೇಜಿಂಗ್ ಕಮಿಟಿ ಸದಸ್ಯರಾಗಿ ಶ್ರೀಮತಿ ದೀಪಾ ಕೊರಬು, ಕುಮಾರಿ ಬಿ.ಎಲ್. ನದಾಫ್ ಮತ್ತು ಎಸ್.ಎಂ. ಕಾಂಬಳೆ ಇವರು ಅವಿರೋಧವಾಗಿ ಆಯ್ಕೆಗೊಂಡರು.

ಚುನಾವಣೆಯನ್ನು ಯಶಸ್ವಿಗೊಳಿಸಲು ನ್ಯಾಯವಾದಿಗಳಾದ ಮಂಜುನಾಥ ಹೂಣಕಾಂಬಳೆ, ಪಿ.ಎ. ಮಾನೆ, ಎ.ಎಸ್. ಕಮತೆ, ಬಿ.ಎ. ಮಗದುಮ, ಎಂ.ಎ. ಪಾಟೀಲ್, ನಿಕಟಪೂರ್ವ ಅಧ್ಯಕ್ಷ ಎ.ಎಸ್. ಕನಾಳ, ತಾತ್ಯಾಸಾಹೇಬ್ ಧೋತರೆ, ಬಿ.ಪಿ. ದೇಸಿಂಗೆ, ಸಿ.ಎಸ್. ಮಠಪತಿ, ಎ.ಎಸ್. ಮುತಾರೆ, ಸಿದ್ದರಾಮ್ ಭೂಂಡಾರೆ ಸೇರಿದಂತೆ ಅನೇಕ ಸದಸ್ಯರು ಸಹಕರಿಸಿದರು.

ಚುನಾಯಿತಗೊಂಡ ಅಧ್ಯಕ್ಷ ಬಿ.ಆರ್. ರಾವ್ ಅವರು ಕಳೆದ 20 ವರ್ಷಗಳಿಂದ ನ್ಯಾಯವಾದಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಎಸ್.ವಿ. ನಾಂದ್ರೆ ಇವರು ಶೇಡಬಾಳದಿಂದ 10 ವರ್ಷಗಳಿಂದ ನ್ಯಾಯವಾದಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಚುನಾಯಿತ ಸದಸ್ಯರನ್ನು ಅವರ ಅಭಿಮಾನಿಗಳು ಸನ್ಮಾನಿಸಿ ಅಭಿನಂದಿಸಿದರು.

Tags:

error: Content is protected !!