ಐಟಿ ಕಂಪನಿಯಲ್ಲಿ ಕಾರ್ಯನಿರ್ವಹಿಸುವ ಬೆಳಗಾವಿಯ ಯುವಪೀಳಿಗೆಯ ಕನಸು ಈಗ ಬೆಳಗಾವಿಯಲ್ಲೇ ನನಸಾಗುತ್ತಿದೆ. ಬೆಳಗಾವಿಗೆ ರಾಷ್ಟ್ರ- ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾದ ಟಿ.ಐ.ಸಿ ಕಂಪನಿ ಈಗ ಬೆಳಗಾವಿನಗರದಲ್ಲಿ ಕಾಲಿಟ್ಟಿದ್ದು, ಬೆಳಗಾವಿಯ ಅಭಿವೃದ್ಧಿಗೆ ಹೊಸ ಗರಿ ಮುಡಿದೆ.


ಹೌದು, ಬೆಳಗಾವಿಯ ಬಾಕ್ಸೈಟ್ ರಸ್ತೆ, ರಾಜೀವ್ ಗಾಂಧಿನಗರದಲ್ಲಿ ರಾಷ್ಟ್ರ – ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾದ ಕಂಪನಿ ಟ್ರಸ್ಟೇಡ್, ಇನ್ನೋವೇಟ್ಹಿವ್, ಕಮೀಟೆಡ್ ಟಿ.ಐ.ಸಿ ಕಂಪನಿ ಲಗ್ಗೆ ಇಟ್ಟಿದೆ. ಬುಧವಾರ ಸಂಜೆ ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಆಸೀಫ್ ಸೇಠ್ ಅವರು ಕಂಪನಿಯ ನೂತನ ಶಾಖೆಯನ್ನು ಲೋಕಾರ್ಪಣೆಗೊಳಿಸಿದರು.
ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಆಸೀಫ್ ಸೇಠ್ ಅವರು ಟಿ.ಐ.ಸಿ ಅವರು ಬೆಳಗಾವಿಯಲ್ಲಿ ಕಾರ್ಯಾರಂಭಿಸಿ ಯುವಪೀಳಿಗೆಗೆ ಉದ್ಯೋಗ ಕಲ್ಪಿಸಿತ್ತಿರುವುದು ಪ್ರಶಂಸೀಯವಾಗಿದೆ. ಮೊದಲೆಲ್ಲ ಬೆಳಗಾವಿಯ ಯುವಪೀಳಿಗೆಗೆ ಐಟಿ ಕಂಪನಿಯ ಕೆಲಸಕ್ಕಾಗಿ ಹೊರ ದೇಶಗಳಿಗೆ ಹೋಗಬೇಕಾದ ಪರಿಸ್ಥಿತಿಯಿತ್ತು. ಆದರೇ, ಈಗ ಕುಟುಂಬವನ್ನು ಬಿಟ್ಟು ಹೋಗದೇ, ಕುಟುಂಬದೊಂದಿಗೆ ತಮ್ಮ ಊರಿನಲ್ಲೇ ಇದ್ದು, ಐಟಿ ಕಂಪನಿಯಲ್ಲಿ ಕೆಲಸ ಮಾಡುವ ವೇದಿಕೆಯನ್ನು ಕಲ್ಪಿಸಲಾಗಿದೆ. ಬೆಳಗಾವಿಯ ಅಭಿವೃದ್ಧಿಗೆ ಇದು ಪೂರಕವಾಗಿದೆ ಎಂದರು.

ಅಲಿ ಖಾನ್ ಮತ್ತು ಸಯೀದಾ ಅವರು 5 ವರ್ಷದ ಪ್ರಯಾಣದ ಬಳಿಕ ಬೆಳಗಾವಿಗೆ ಆಗಮಿಸಿದ್ದು, ಈಗಾಗಲೇ, ನಮ್ಮ ಕಾರ್ಯಾಲಯ ಯುಎಇ, ಕತಾರ್, ಮಲೇಷಿಯಾದಲ್ಲಿ ಕಾರ್ಯನಿರ್ವಹಿಸುತ್ತಿವೆ. ಕೌಶಲ್ಯಯುತ ಯುವಪೀಳಿಗೆಗೆ ಅವಕಾಶವನ್ನು ಕಲ್ಪಿಸಲು ಬೆಳಗಾವಿಗೆ ಇಂದು ಲಗ್ಗೆ ಇಟ್ಟಿದ್ದೇವೆ. ನೀವು ಪದವೀಧರರಾಗಿದ್ದು, ಐಟಿಯಲ್ಲಿ ಕರಿಯರ್ ರೂಪಿಸಿಕೊಳ್ಳಬೇಕಿದ್ದರೇ ಮತ್ತು ನಗರದಿಂದ ಜಗತ್ತಿಗೆ ಸಂಪರ್ಕವನ್ನು ಹೊಂದಬೇಕೆಂದಿದ್ದರೇ, ಇಂದೇ ನಮ್ಮ ಟಿ.ಐ.ಸಿಯಲ್ಲಿ ಪ್ರವೇಶ ಪಡೆಯಿರಿ ಎಂದರು.
ಬೆಳಗಾವಿಯ ಮರಾಠಾ ಮಂಡಳ ಇಂಜಿನಿಯರಿಂಗ್ ಕಾಲೇಜಿನಿಂದ ಪದವಿ ಪಡೆದು ಕಳೆದ 1 ವರ್ಷದಿಂದ ಕೆಲಸ ನಿರ್ವಹಿಸುತ್ತಿರುವ ಜ್ಯೋತಿ ಅವರು ಕಾರ್ಪೋರೇಟ್ ಕಂಪನಿಗಳಲ್ಲಿ ಕಾರ್ಯನಿರ್ವಹಿಸುವವರಿಗೆ ಇದೊಂದು ಒಳ್ಳೆಯ ವೇದಿಕೆಯಾಗಿದೆ. ವಿದ್ಯಾರ್ಥಿಗಳಿಗೆ ಇದು ಅತ್ಯಂತ ಉನ್ನತ ಅನುಭವವನ್ನು ನೀಡುತ್ತದೆ ಎಂದರು.
ಇನ್ನು ಧೈರ್ಯಶೀಲ ದೇಸಾಯಿ ಅವರು ತಾವೂ ಮರಾಠಾ ಮಂಡಳದಲ್ಲಿ ಪದವಿ ಶಿಕ್ಷಣ ಪಡೆಯುತ್ತಿರುವಾಗಲೇ ಟಿ.ಐ.ಸಿ ನಮ್ಮನ್ನು ಸಂಪರ್ಕಿಸಿತ್ತು. ಇದರಲ್ಲಿ ಆಯ್ಕೆಯಾಗಿರುವುದು ನಮ್ಮ ಸೌಭಾಗ್ಯ. ಕಾರ್ಪೋರೇಟ್ ಕಂಪನಿಯ ಕೆಲಸ ಅನುಭವವನ್ನು ಇಲ್ಲಿ ಅತ್ಯಂತ ಅಚ್ಚುಕಟ್ಟಾಗಿ ಪಡೆಯಲು ಪೂರಕ ವಾತಾವರಣವಿದೆ ಎಂದರು.
ಭಾವನಾ ಪಾಟೀಲ್ ಅವರು ಕಂಪ್ಯೂಟರ್ ಸೈನ್ಸ್ ಮುಗಿದ ಬಳಿಕ ಟಿ.ಐ.ಸಿಯಲ್ಲಿ ಆಯ್ಕೆಯಾಗಿ ಹಲವು ಬಗೆಯ ಅನುಭವ ದೊರೆತಿದೆ. ಐಟಿ ಕಂಪನಿಯಲ್ಲಿ ಸೇರಿ ಉದ್ಯೋಗ ಪಡೆದು ಕರಿಯರ್ ರೂಪಿಸಿಕೊಳ್ಳಬೇಕೆಂದ ನಮ್ಮ ಧ್ಯೇಯ ಪೂರ್ಣಗೊಂಡಿದೆ. ನಮ್ಮ ಊರಿನಲ್ಲೇ ಕುಟುಂಬದೊಂದಿಗೆ ಇದ್ದು, ಐಟಿ ಕಂಪನಿಯ ಉದ್ಯೋಗವನ್ನು ಮಾಡುವ ಅವಕಾಶವನ್ನು ಟಿ.ಐ.ಸಿ ಕಲ್ಪಿಸಿಕೊಟ್ಟಿದ್ದು, ಸಂತಸವೆನಿಸುತ್ತಿದೆ ಎಂದರು.
ಈ ಸಂದರ್ಭದಲ್ಲಿ ಸಮೀರ್ ಅಲಿ, ಗಗನದೀಪ್ ಸಿಂಗ್, ಆದೀಲ್ ಅಲಿ ಖಾನ್, ಆಶೀಶ್ ಶರ್ಮಾ, ಸಾಕ್ಷಿ ಸಕ್ಸೇನಾ, ಆಸೀಫ್ ಇಕ್ಬಾಲ್, ಮೊಹ್ಮದ್ ಅಲ್ತಾಫ್ ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ಧರು.
